Breaking News

ಬಿಜಾಪುರ

ವಿಜಯಪುರ: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆಯಲು ಬಂದಿದ್ದ ವ್ಯಕ್ತಿ ಪೊಲೀಸ್​​ ವಶಕ್ಕೆ

ವಿಜಯಪುರ: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆಯಲು ಬಂದಿದ್ದ ವ್ಯಕ್ತಿಯನ್ನು ಯುವಕರು ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಜಿಲ್ಲೆಯ ‌ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನಡೆದಿದೆ. ಹೋಂ ಗಾರ್ಡ್ ಶಾಂತೇಶ್ ಕೊರ್ತಿ ಎಂಬಾತ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 8 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಲಾಗಿದೆ. ಹಣ ನೀಡುವುದಾಗಿ ಕರೆಸಿದ ಯುವಕರು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶ್ರೀಕಾಂತ್​ ಎಂಬುವವರ ಬಳಿ ಹಣ ಪಡೆಯಲು ಶಾಂತೇಶ್ ಕೊರ್ತಿ ಬಂದಿದ್ದ. …

Read More »

ಶಿಕ್ಷಕರ ಅಕ್ರಮ ನೇಮಕಾತಿ: ಮತ್ತೊಬ್ಬ ಶಿಕ್ಷಕನ ಬಂಧನ  

ವಿಜಯಪುರ: ಶಿಕ್ಷಕರ ಅಕ್ರಮ ನೇಮಕ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಸಿಒಡಿ ಪೊಲೀಸರು ಅಕ್ರಮ ನೇಮಕಾತಿಯಲ್ಲಿ ಕೈಚಳಕ ತೋರಿದ ವಿಜಯಪುರ ಜಿಲ್ಲೆಯ ಶಿಕ್ಷಕರನ್ನು ಒಬ್ಬೊಬ್ಬರಾಗಿ ಬಲೆಗೆ ಕೆಡವುತ್ತಿದ್ದಾರೆ. ಇದೀಗ ಮತ್ತೂಬ್ಬ ಶಿಕ್ಷಕ ಅಶೋಕ ಚವ್ಹಾಣ ಎಂಬಾತನನ್ನು ಬಂಧಿ ಸಿ ವಿಚಾರಣೆ ನಡೆಸಿದ್ದಾರೆ. ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ನಂಟು ಗಾಢವಾಗಿರುವುದು ಶಿಕ್ಷಕರ ಸರಣಿ ಬಂಧನ ಇಂಬು ನೀಡುತ್ತಿದೆ. ವಿಜಯಪುರ ಜಿಲ್ಲೆ ಬಸವನಬಾಗೇಬಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕನಾಗಿ ಸೇವೆ …

Read More »

ವಿಜಯಪುರ: ಭಕ್ತರ ಭಾರ ತಾಳಲಾರದೇ ನೆಲಕ್ಕುರುಳಿದ ಗಣೇಶ ಮಂಟಪ: ಹಲವರಿಗೆ ಗಾಯ

ವಿಜಯಪುರ: ಗಣಪತಿ ದರ್ಶನಕ್ಕೆಂದು ಹರಿದುಬಂದ ಭಕ್ತರ ಭಾರ ತಾಳಲಾರದೇ ಸಾರ್ವಜನಿಕ ಗಣೇಶ ಮಂಟಪವೊಂದು ಕುಸಿದು ಬಿದ್ದಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಇಲ್ಲಿನ ವಿವೇಕಾನಂದ ವೃತ್ತದಲ್ಲಿ ಗೋಪುರ ಆಕಾರ ಹಾಗೂ ಸ್ವರ್ಣ ವರ್ಣದ ದೇವಾಲಯದ ಮಾದರಿಯಲ್ಲಿ ಈ ಗಣೇಶ ಮಂಟಪವನ್ನು ನಿರ್ಮಿಸಲಾಗಿತ್ತು. ಇಲ್ಲಿಗೆ ಜನ ಸಾಗರವೇ ಹರಿದುಬಂದ ಪರಿಣಾಮ ಭಾರ ತಾಳದೇ ನೆಲಕ್ಕುರುಳಿದೆ. ಪರಿಣಾಮ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಘಟನೆ …

Read More »

ಟಿಪ್ಪುನನ್ನು ವರ್ಣನೆ ಮಾಡಿದಕ್ಕೆ ಮುರುಘಾ ಸ್ವಾಮೀಜಿಗೆ ಈ ಗತಿ ಬಂದಿದೆ: ಯತ್ನಾಳ್

ವಿಜಯಪುರ, ಸೆಪ್ಟೆಂಬರ್ 3: ಚಿತ್ರದುರ್ಗದ ಮುರಘಾ ಮಠದ ಸ್ವಾಮೀಜಿ ಮೇಲೆ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿರುವ ಮೇಲೆ ಶಿವಮೂರ್ತಿ ಮುರುಘಾ ಶರಣರು ಮತ್ತೆ ಮಠದ ಪೀಠಾಧಿಪತಿಯಾಗಬಾರದು ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.   ಈ ಪ್ರಕರಣದ ಬಗ್ಗೆ ನಗರದಲ್ಲಿ ಮಾತನಾಡಿದ ಯತ್ನಾಳ್, “ದೇಶ ಹಾಳಾಗುವುದಕ್ಕೆ ಪ್ರಗತಿಪರರೇ ಕಾರಣ, ಇಂದು ಸ್ವಾಮೀಜಿಯ ಪರಿಸ್ಥಿತಿಗೂ ಅವರೇ ಕಾರಣ, ಮುರುಘಾ ಶರಣರು ಟಿಪ್ಪು ಸುಲ್ತಾನ ಫೋಟೋ ತೆಗೆದುಕೊಂಡು …

Read More »

ಹಣಕ್ಕಾಗಿ ಸರ್ಕಾರಿ ನೌಕರಳ ಅಪಹರಣ: ನಾಲ್ವರ ಬಂಧನ

ವಿಜಯಪುರ: ಹಣದ ಆಸೆಗಾಗಿ ಸರ್ಕಾರಿ ಉದ್ಯೋಗಿನಿಯನ್ನು ಅಪಹರಣ ಮಾಡಿ 5 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಜಿಲ್ಲೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಗರ ಜುಮ್ಮನಗೋಳ, ಶಿವಾಜಿ ಉಪ್ಪಾರ, ಆಕಾಶ ವೀರಕರ, ಆದರ್ಶ ಕೊಟ್ಯಾಳ ಬಂಧಿತ ಆರೋಪಿಗಳು. ಇಂಡಿ ಪಟ್ಟಣದಲ್ಲಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ವಿಜಯಪುರ ನಗರ ನಿವಾಸಿ ಲಕ್ಷ್ಮೀ ಜಗದೀಶ ಸೊನ್ನದ ಎಂಬ ನೌಕರಳು ಅಪಹರಣಕ್ಕೊಳಗಾದವರು. ಆ.22 ರಂದು ಕೆಲಸ ಮುಗಿಸಿ ವಿಜಯಪುರ ನಗರಕ್ಕೆ …

Read More »

ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಗೈಯ್ಯುತ್ತಿದ್ದ ಏಳು ಜನರ ಬಂಧನ

ವಿಜಯಪುರ: ವಿಜಯಪುರ ನಗರ ಹಾಗೂ ಹೆದ್ದಾರಿಗಳಲ್ಲಿ ಸಂಚರಿಸುತ್ತಿದ್ದ ಜನರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೂವರು ಸೇರಿದಂತೆ ಒಟ್ಟು ಏಳು ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.   ಇಟ್ಟಂಗಿಹಾಳ ದೊಡ್ಡಿಯ ನಿವಾಸಿ ವಿಜಯ ಭೀರಪ್ಪ ಕರಾಡೆ (23), ಆನಂದ ಮಾಯಪ್ಪ ಡೇರೆ, ಹಣಮಂತ ಜಯಪ್ಪ ಖರಾತ (20), ಬಬಲಾದಿ ಗ್ರಾಮದ ನಿವಾಸಿ ಸಚಿನ್ ಮಧು ಗೋಪಣೆ (20), ಮಹಾರಾಷ್ಟ್ರದ ತಿಕ್ಕುಂಡಿ ಕರೆವಾಡಿ ಮೂಲದ ನಿವಾಸಿ ನವನಾಥ ಅಮಗೊಂಡ ಕರಾಡೆ …

Read More »

ಕೇಂದ್ರ ಕಾರಾಗೃಹದಿಂದ ನಾಳೆ 10 ಖೈದಿಗಳು ಬಿಡುಗಡೆ

ವಿಜಯಪುರ: 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸನ್ನಡತೆ ತೋರಿದ 10 ಜೈಲು ಹಕ್ಕಿಗಳ ಬಿಡುಗಡೆಗೆ ನಿರ್ಧರಿಸಲಾಗಿದೆ. ನಗರದ ಕೇಂದ್ರ ಕಾರಾಗೃಹದಿಂದ ನಾಳೆ 10 ಖೈದಿಗಳು ಬಿಡುಗಡೆಯಾಗಲಿದ್ದಾರೆವಿವಿಧ ತಪ್ಪುಗಳಿಂದ ಶಿಕ್ಷೆಗೆ ಒಳಗಾಗಿ ಹಲವು ವರ್ಷಗಳಿಂದ ಜೈಲಿನಲ್ಲಿ ದ್ದರೂ ತಮ್ಮ ಸನ್ನಡತೆಯಿಂದ. ಉತ್ತಮ ಜೀವ ರೂಪಿಸಿಕೊಳ್ಳುವ ಭರವಸೆ ಮೂಡಿಸಿರುವ ಖೈದಿಗಳಲ್ಲಿ ಮೂವರು ಸಹೋದರರು ಹಾಗೂ ಅವರ ತಂದೆ ಸೇರಿ ಒಂದೇ ಕುಟುಂಬದ ನಾಲ್ವರು ಇದ್ದಾರೆ. ಬಸಪ್ಪ ಮಲಕಾರಿ ಜಟಗೊಂಡ, ಗೌಡಪ್ಪ ಜಟಗೊಂಡ, …

Read More »

ಬಬಲೇಶ್ವರ ಪಾಕಿಸ್ತಾನದಲ್ಲಿ ಇದೆಯಾ: ಸವದಿ ಪ್ರಶ್ನೆ

ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರವೇನು ಪಾಕಿಸ್ತಾನದಲ್ಲಿ ಇದೆಯಾ? ಅದು ಕರ್ನಾಟಕ ರಾಜ್ಯದಲ್ಲಿ ಇದೆ ತಾನೇ? ಹೀಗೆಂದು ಪ್ರಶ್ನಿಸಿದವರು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ. ನಾಗಠಾಣದಲ್ಲಿ ಭಾನುವಾರ ನಡೆದ ನೂತನ ಬಸ್‌ ನಿಲ್ದಾಣ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಬಲೇಶ್ವರ ಕ್ಷೇತ್ರದಿಂದ ನೀವು ಸ್ಪರ್ಧಿಸುತ್ತೀರಿ ಎಂಬ ಮಾತು ಕೇಳಿಬರುತ್ತಿದೆ ನಿಜಾನಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.   ‘ನಾನು ಸದ್ಯ ವಿಧಾನ …

Read More »

ಅಲೋಕ್​ ಕುಮಾರ್​ ಎಚ್ಚರಿಕೆಗೆ ಹೆದರಿ ಕೋರ್ಟ್​ಗೆ ಶರಣಾದ ಭೀಮಾತೀರದ ಕುಖ್ಯಾತ ಹಂತಕನ ಪತ್ನಿ

ವಿಜಯಪುರ: ಎಡಿಜಿಪಿ ಅಲೋಕ್​ ಕುಮಾರ್​ ಖಡಕ್​ ಎಚ್ಚರಿಕೆಗೆ ಹೆದರಿದ ಭೀಮಾತೀರದ ಕುಖ್ಯಾತ ಹಂತಕ ಮಲ್ಲಿಕಾರ್ಜುನ್ ಚಡಚಣನ ಪತ್ನಿ ವಿಮಲಾಬಾಯಿ ಚಡಚಣ ನ್ಯಾಯಾಲಯಕ್ಕೆ ಆಗಮಿಸಿ ಬಂದು ಶರಣಾಗಿದ್ದಾಳೆ. ವಿಜಯಪುರ 4ನೇ JMFC ನ್ಯಾಯಾಲಯಕ್ಕೆ ಆಗಮಿಸಿ ವಿಮಲಾಬಾಯಿ ಶರಣಾಗಿದ್ದಾಳೆ. 2020ರ ನವೆಂಬರ್ 2 ರಂದು ಮಹಾದೇವ ಸಾಹುಕಾರ ಬೈರಗೊಂಡ ಮೇಲೆ ನಡೆದ ದಾಳಿಯ ಬಳಿಕ ವಿಮಲಾಬಾಯಿ ಭೂಗತಳಾಗಿದ್ದಳು. ಕೆಲ ದಿನಗಳ ಹಿಂದಷ್ಟೇ ಅಲೋಕ್​ ಕುಮಾರ್​ ಅವರು ಭೂಗತರಾದ ಚಡಚಣ ಗ್ಯಾಂಗ್‌ ಸದಸ್ಯರಿಗೆ ಎಚ್ಚರಿಕೆ ನೀಡಿದ್ದರು. …

Read More »

ರಾತ್ರಿ ನಾಯಿಗಳು ಬೊಗಳುವ ಸದ್ದು ಕೇಳಿ ಮನೆಯಿಂದ ಹೊರಬಂದ ವಿಜಯಪುರ ನಿವಾಸಿಗಳಿಗೆ ಕಾದಿತ್ತು ಶಾಕ್!​

ವಿಜಯಪುರ: ಕಾಳರಾತ್ರಿ, ನಿರವ ಮೌನ, ನಾಯಿಗಳ ಬೊಗಳುವಿಕೆಯ ಸದ್ದು, ಗಾಬರಿಗೊಂಡು ಮನೆಯಿಂದ ಹೊರಬಂದ ನಿವಾಸಿಗಳಿಗೆ ಕಂಡಿದ್ದು ದೊಣ್ಣೆ ಹಿಡಿದುಕೊಂಡು, ಮುಸುಕು ಧರಿಸಿ ಹೊರಟಿದ್ದ ದಾಂಡಿಗರ ಪಡೆ….! ಅಬ್ಬಾ ಏನಿದು? ಯಾರು ಈ ಮುಸುಕುಧಾರಿಗಳು? ಎಲ್ಲಿಗೆ ಹೊರಟಿದ್ದಾರೆ? ಎಂದು ಅರಿಯದ ಜನ ಆತಂಕದಿಂದಲೇ ಮನೆಯ ಬಾಗಿಲು, ಕಿಟಕಿ ಹಾಕಿಕೊಂಡು ಬೆಚ್ಚಗೆ ಮಲಗಿಕೊಂಡಿದ್ದಾರೆ. ಆದರೆ, ರಾತ್ರಿ ಪೆಟ್ರೋಲಿಂಗ್‌ನಲ್ಲಿದ್ದ ಪೊಲೀಸರು ನಾಯಿಗಳ ಜೋರಾದ ಬೊಗಳುವಿಕೆಯ ಸದ್ದು ಕೇಳಿ ಆ ಬಡವಾಣೆಗೆ ಕಾಲಿಟ್ಟರೆ ಇದ್ದಕ್ಕಿದ್ದಂತೆ ಎಲ್ಲರೂ ಮಂಗಮಾಯ. …

Read More »