Breaking News

ಬಿಜಾಪುರ

ಸರ್ಕಾರಿ ಆಸ್ಪತ್ರೆಯಲ್ಲೇ GP ಸದಸ್ಯನ ಲವ್ವಿ ಡವ್ವಿ.. ಸಿಸಿಟಿವಿಯಲ್ಲಿ ಸೆರೆ…

ವಿಜಯಪುರ :ಸರ್ಕಾರಿ ಆಸ್ಪತ್ರೆಯಲ್ಲೇ ಗ್ರಾಮ ಪಂಚಾಯತಿ ಸದಸ್ಯನ ಲವ್ವಿ ಡವ್ವಿ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ನಿಂಬೆನಾಡಿನಲ್ಲಿ ನಡೆದಿದೆ‌. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ಪ್ರಾಥಮಿಕ ಆಸ್ಪತ್ರೆಯ ವಾರ್ಡ್ ನಲ್ಲಿ ಆಶಾ ಕಾರ್ಯಕರ್ತೆ ಹಾಗೂ ಗ್ರಾಮ ಪಂಚಾಯತ್ ಸದಸ್ಯ D.K. ಪೂಜಾರಿ ಲವ್ವಿ ಡವ್ವಿ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡು ಕಿಸ್ಸಿಂಗ್ ಹಾಗೂ ರೊಮ್ಯಾನ್ಸ್ ಮಾಡಿರುವ ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದಸ್ಯ ವಿರುದ್ಧ …

Read More »

ರಾಜಕೀಯ ಸ್ವಾರ್ಥಕ್ಕಾಗಿ ಬಾಗಲಕೋಟೆ ಜಿಲ್ಲೆಯ ಮಾಜಿ ಶಾಸಕ, ಸಚಿವರ ಅಶ್ಲೀಲ ಸಿಡಿ ಮಾಡಿದವರು ನಾಲಾಯಕರು: ಯತ್ನಾಳ್

ವಿಜಯಪುರ: “ಅಶ್ಲೀಲ ಸಿಡಿ ಇಟ್ಟುಕೊಂಡು ಮಂತ್ರಿಯಾಗಲು, ಎಂಎಲ್ ಸಿ ಆಗಲು ಬ್ಲ್ಯಾಕ್ ಮೇಲ್ ಮಾಡುವವರಿಂದ ನಾನು ಕಲಿಯಬೇಕಾಗಿರುವುದು ಏನೂ ಇಲ್ಲ” ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜಕೀಯ ಸ್ವಾರ್ಥಕ್ಕಾಗಿ ಬಾಗಲಕೋಟೆ ಜಿಲ್ಲೆಯ ಮಾಜಿ ಶಾಸಕ, ಸಚಿವರ ಅಶ್ಲೀಲ ಸಿಡಿ ಮಾಡಿದವರು ನಾಲಾಯಕರು” ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನು ನಾನು ಮಂತ್ರಿ ಆಗಲು ಯಾರಿಗೂ ಹಣ …

Read More »

ಈಗ ಈಶ್ವರಪ್ಪನವರಿಗೆ ತಲೆಕೆಟ್ಟಿದೆ – ಸಿಎಂ ಬದಲಾಗದಿದ್ದರೆ ಇನ್ನೂ ಹಲವರಿಗೆ ತಲೆ ಕೆಡಲಿದೆ: ಯತ್ನಾಳ್

ವಿಜಯಪುರ: ಸಿಎಂ ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈಶ್ವರಪ್ಪನವರ ಆರೋಪಕ್ಕೆ ಮಹತ್ವ ನೀಡಬೇಕು. ಅವರು ಮಾಡಿರುವ ತಪ್ಪಾದರೂ ಏನು ಎಂದು ಪ್ರಶ್ನಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಬಿಜೆಪಿಯನ್ನು ಈ ಹಿಂದೆ ಕಟ್ಟಿದವರು ಈಶ್ವರಪ್ಪ. ನಿನ್ನೆ ಮೊನ್ನೆ ಬಂದವರು ಅವರ ಬಗ್ಗೆ ಕಮೆಂಟ್ ಮಾಡುವುದು ಸರಿಯಲ್ಲ. ನಾನು ಹಾಗೂ ಯಡಿಯೂರಪ್ಪ ಪಕ್ಷ ಬಿಟ್ಟು ಮತ್ತೆ ಬಂದವರು. ಆದರೆ ಈಶ್ವರಪ್ಪ ಬಿಜೆಪಿಯಲ್ಲೇ …

Read More »

ಪೊಲೀಸ್ ಧ್ವಜ ದಿನಾಚರಣೆ: ಔರಾದಕರ್ ವರದಿ ಜಾರಿಗೆ ಆಗ್ರಹ

ವಿಜಯಪುರ: ರಾಘವೇಂದ್ರ ಔರಾದಕರ್ ವರದಿಯನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಪಿ.ಹುಲಸಗುಂದ ಆಗ್ರಹಿಸಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಕಲ್ಯಾಣ ಮತ್ತು ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಬೇಕು. ಈ ಮೂಲಕ ಪೊಲೀಸರನ್ನು ಒತ್ತಡ ಮುಕ್ತರನ್ನಾಗಿ ಮಾಡಬೇಕು. ಪೊಲೀಸರು ಬಿಡುವಿನ ವೇಳೆ ತಮ್ಮ ಕುಟುಂಬದ ಕಲ್ಯಾಣಕ್ಕೆ ಗಮನ ನೀಡಲು ಅವಕಾಶ …

Read More »

ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕನ ಹೆಸರು ಬಹಿರಂಗ ಇನ್ನೊಬ್ಬ ಸೂತ್ರಧಾರನಾದ ಸಿಎಂ ಪುತ್ರನ ಹೆಸರು ಹೊರ ಬಂದಿಲ್ಲ: ಶಾಸಕ ಯತ್ನಾಳ

ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಹಿಂದೆ ಬಿಜೆಪಿ, ಕಾಂಗ್ರೆಸ್‌ ನಾಯಕರೇ ಇದ್ದಾರೆ ಎಂಬುದು ಇದೀಗ ಸ್ಪಷ್ಟವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೆಸರು ಮಾತ್ರ ಹೊರ ಬಂದಿದ್ದು, ಒಳ ಒಪ್ಪಂದದ ಕಾರಣ ಇನ್ನೊಬ್ಬ ಸೂತ್ರಧಾರನಾದ ಸಿಎಂ ಪುತ್ರನ ಹೆಸರು ಹೊರ ಬಂದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಹಾಗೂ ಸಿಎಂ …

Read More »

ವಿಜಯಪುರ : ಚಿಂದಿ ಆಯುವ ವಿವಾಹಿತೆ ಮೇಲೆ ಮೂವರಿಂದ ಅತ್ಯಾಚಾರಕ್ಕೆ ಯತ್ನ

ವಿಜಯಪುರ : ಚಿಂದಿ ಹಾಗೂ ಹಂದಿ ಗೊಬ್ಬರ ಸಂಗ್ರಹಿಸಿ ಜೀವನ ನಡರಸುತ್ತಿದ್ದ 23 ವರ್ಷದ ಗೃಹಿಣಿ ಮೇಲೆ ಮೂವರು ಕಾಮಾಂಧರು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ವರದಿಯಾಗಿದೆ. ಮುದ್ದೇಬಿಹಾಳ ಪಟ್ಟಣದಲ್ಲಿ ಚಿಂದಿ, ಹಂದಿ ಗೊಬ್ಬರ ಆಯ್ದು ಜೀವನ‌ನಡೆಸುತ್ತಿರುವ ವಿವಾಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೂವರನ್ನು ಗುರುತಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅತ್ಯಾಚಾರಕ್ಕೆ ಯತ್ನಿಸಿದವರನ್ನು ಅಕ್ಬರ್ ಮಕಾನದಾರ, ಸಲೀಮ ನದಾಫ, ಸೋಯೆಲ್ ಹಡಗಲಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. …

Read More »

ಸಿಎಂಗೆ ಜಲ ಸಂಪನ್ಮೂಲ ಇಲಾಖೆ ತಮಗೇ ಬೇಕಿತ್ತು, ಹೀಗಾಗಿ ಜಾರಕಿಹೊಳಿಯನ್ನು ಸಿಲುಕಿಸಲಾಗಿದೆ: ಯತ್ನಾಳ್

ವಿಜಯಪುರ (ಮಾರ್ಚ್​ 21)- ರಾಜ್ಯದಲ್ಲಿ ನಡೆದಿರುವ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.ವಿಜಯಪುರದಲ್ಲಿ ಮಾತನಾಡಿದ ಅವರು, “ಸಿಎಂ ಗೆ ಜಲ ಸಂಪನ್ಮೂಲ, ಹಣಕಾಸು, ಇಂಧನ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ತಮ್ಮಲ್ಲಿಯೇ ಉಳಿಯಬೇಕಾಗಿದೆ. ಮಾರ್ಚ್ ಕೊನೆಯಲ್ಲಿ ಈ ಇಲಾಖೆಗಳಿಗೆ ಸಾವಿರಾರು ಕೋಟಿ ರೂಪಾಯಿ ಹಣ ಬಿಡುಗಡೆಯಾಗುತ್ತದೆ. ಆ ಹಣ ಹೇಗೆ ತೆಗೆದುಕೊಳ್ಳಬೇಕು? ಎಂಬುದು ಮುಖ್ಯಮಂತ್ರಿ ಪ್ಲ್ಯಾನ್ ಆಗಿತ್ತು. ಇದೇ …

Read More »

ಇನ್ನೂ 400 ಸಿಡಿಗಳಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್

ವಿಜಯಪುರ: ರಾಜ್ಯದಲ್ಲಿ ಸಿಡಿ ತಯಾರಿಸುವ ಎರಡು ಫ್ಯಾಕ್ಟರಿಗಳಿವೆ. ಒಂದು ಬಿಜೆಪಿಯಲ್ಲಿದೆ. ಇನ್ನೊಂದು ಕಾಂಗ್ರೆಸ್ ನಲ್ಲಿದೆ. ರಮೇಶ್ ಜಾರಕಿಹೊಳಿ ಸಿಡಿ ರೀತಿಯೇ ಇನ್ನೂ 400 ಸಿಡಿಗಳಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಿಡಿ ತಯಾರಿಸುವ ದೊಡ್ಡ ಗ್ಯಾಂಗ್ ಇದೆ. ಗ್ಯಾಂಗ್ ಕಟ್ಟಿಕೊಂಡು ಮೊದಲು ಶಾಸಕರು, ಸಚಿವರ ಜೊತೆ ಸಲುಗೆ ಬೆಳಸಿಕೊಳ್ಳುತ್ತಾರೆ. ಸಲುಗೆ ಬೆಳೆಸಿಕೊಂಡು ಸಿಡಿ ತಯರೈಸಿ ಬಳಿಕ ಬ್ಲ್ಯಾಕ್ ಮೇಲ್ …

Read More »

ಗ್ರಾಮ ವಾಸ್ತವ್ಯ ವರದಿಗೆ ತೆರಳಿದ ಪತ್ರಕರ್ತರಿಗೆ ಭಿಕ್ಷುಕರ ವಾಹನದಲ್ಲಿ ಪ್ರಯಾಣ!

ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಹ್ವಾನಿತ ಪತ್ರಕರ್ತರನ್ನು, ಭಿಕ್ಷುಕರನ್ನು ಹಿಡಿದು ಸಾಗಿಸುವ ವಾಹನದಲ್ಲಿ ಕರೆದೊಯ್ದ ಘಟನೆ ನಡೆದಿದೆ. ಪ್ರತಿ ತಿಂಗಳು ಮೂರನೇ ಶನಿವಾರ ಜಿಲ್ಲಾಧಿಕಾರಿ ಗ್ರಾಮ ವಾಸ್ಯವ್ಯ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಯಲಗೂರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯ ಪತ್ರಕರ್ತರಿಗೆ ವಾರ್ತಾ ಇಲಾಖೆಗೆ ಬಂದಿದ್ದ ಸುಸಜ್ಜಿತ ಹೊಸ ವಾಹನವನ್ನು ಕೆಲ ದಿನಗಳ ಹಿಂದೆ ಗದಗ ಜಿಲ್ಲೆಗೆ ಶಾಶ್ವತವಾಗಿ …

Read More »

ಹುಬ್ಬಳ್ಳಿಗೆ ಬರುತ್ತಿದ್ದ ಇಬ್ಬರು ಕ್ರೀಡಾಪಟುಗಳ ದುರ್ಮರಣ: ಮೂವರಿಗೆ ಗಂಭೀರ ಗಾಯ

ವಿಜಯಪುರ: ಲಾರಿ ಹಾಗೂ ಥವೇರಾ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕ್ರೀಡಾಪಟುಗಳು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಗಾರ ಕ್ರಾಸ್ ಬಳಿ ಸಂಭವಿಸಿದೆ. ಮಹಾರಾಷ್ಟ್ರದ ಸೊಲ್ಲಾಪುರದಿಂದ ಹುಬ್ಬಳ್ಳಿಯ ಕಬ್ಬಡ್ಡಿ ಟೂರ್ನಿಯಲ್ಲಿ ಭಾಗವಹಿಸಲು ಬರುತ್ತಿದ್ದ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಸೋಹೈಲ್ ಮತ್ತು ಮಹಾದೇವ ಎಂಬ 20 ವರ್ಷದ ಕ್ರೀಡಾಪಟುಗಳು ಸಾವಿಗೀಡಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಬಗ್ಗೆ ಮಾಹಿತಿ …

Read More »