ದಾವಣಗೆರೆ: ವಸತಿ ಶಾಲೆಗಳಿಗೆ 6 ನೇ ತರಗತಿಯ ಪ್ರವೇಶಕ್ಕಾಗಿ ಹೊರಡಿಸಲಾಗಿದ್ದ ಆನ್‍ಲೈನ್ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಸೆ.5 ರವರೆಗೆ ವಿಸ್ತರಿಸಲಾಗಿದೆ. 2020-21 ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇದರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಪರಿಶಿಷ್ಟ ಜಾತಿ/ಪಂಗಡ ವರ್ಗದ ಪ್ರತಿಭಾನ್ವಿತ ವಸತಿ ಶಾಲೆ, ಮಾಯಕೊಂಡ ವಸತಿ ಶಾಲೆಗಳಿಗೆ ಪ್ರವೇಶಕ್ಕೆ ಆ.25 ಕೊನೆಯ ದಿನವೆಂದು ನಿಗದಿಪಡಿಸಲಾಗಿತ್ತು. ಆದರೆ …
Read More »ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವವರಿಗೆ ಹೋಳಿಗೆ ಊಟ:ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ
ದಾವಣಗೆರೆ: ಕೊರೊನಾ ಸೋಂಕು ತಗುಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವವರಿಗೆ ಗಣಪತಿ ಹಬ್ಬ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಇಂದು ಕೋವಿಡ್ ಕೇಸ್ ಸೆಂಟರ್ ನಲ್ಲಿ ಗಣಪತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ದಾವಣಗೆರೆಯ ಮಾದನಬಾವಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿರುವ ಕೋವಿಡ್ ಕೇರ್ ಸೆಂಟರಿನಲ್ಲಿ 150ಕ್ಕೂ ಹೆಚ್ಚು ಪಾಸಿಟಿವ್ ಬಂದಿರುವ ಜನರಿದ್ದು, ರೇಣುಕಾಚಾರ್ಯ ಕುಟುಂಬದ ಹಾಗೂ ಆಪ್ತರ ಜೊತೆ ಸೇರಿ ಕೋವಿಡ್ ಕೇರ್ ಸೆಂಟರ್ …
Read More »ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಪವರ್ ಆಫ್ ಪಾಕಿಸ್ತಾನ್ ಎಂಬ ಪೇಜ್ ಲೈಕ್ ಮಾಡಿ ವಾಟ್ಸ್ ಆಪ್ ಗ್ರೂಪ್ ನಲ್ಲಿ ಆ ಪೇಜ್ ಲೈಕ್. ಪಾಕ್ ಪರ ಪೋಸ್ಟ್ ಮಾಡಿದ್ದ ಪೊಲೀಸ್ ಪೇದೆಯನ್ನು ಅಮಾನತು.
ದಾವಣಗೆರೆ : ಜಿಲ್ಲೆಯ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಪವರ್ ಆಫ್ ಪಾಕಿಸ್ತಾನ್ ಎಂಬ ಪೇಜ್ ಲೈಕ್ ಮಾಡಿದ್ದಲ್ಲದೇ, ವಾಟ್ಸ್ ಆಪ್ ಗ್ರೂಪ್ ನಲ್ಲಿ ಆ ಪೇಜ್ ಲೈಕ್ ಮಾಡುವಂತೆ ಶೇರ್ ಮಾಡಿದ್ದರು. ಈ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದರು. ಇಂತಹ ಪಾಕ್ ಪರ ಪೋಸ್ಟ್ ಮಾಡಿದ್ದ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. 2008ನೇ ಸಾಲಿನಲ್ಲಿ ಕಾನ್ ಸ್ಟೇಬಲ್ ಹುದ್ದೆಗೆ …
Read More »ತಂದೆ-ತಾಯಿ ಕಳೆದುಕೊಂಡು ಅನಾಥಳಾಗಿರುವ ಮೇಘನಾ
ದಾವಣಗೆರೆ, ಆ.20- ತಂದೆ-ತಾಯಿ ಕಳೆದುಕೊಂಡು ಅನಾಥಳಾಗಿರುವ ಮೇಘನಾ ಕೂಲಿನಾಲಿ ಮಾಡಿ ತಮ್ಮನನ್ನು ಸಾಕಿ ಸಲಹುತ್ತಿದ್ದರೂ ನೆತ್ತಿಯ ಮೇಲೊಂದು ಸೂರಿಲ್ಲದೆ ಪರಿತಪಿಸುತ್ತಿದ್ದಾರೆ. ಜಗಳೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗ್ರಾಮವೊಂದರ ಮಳೆ ಸೋರುವ ಹಾಳು ಮನೆಯಲ್ಲಿ ವಾಸಿಸುತ್ತಿರುವ ಮೇಘನಾ ಭವಿಷ್ಯದಲ್ಲಿ ಸಾಧನೆ ಮಾಡುವ ಹಂಬಲ ಹೊಂದಿದ್ದಾಳೆ. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಮೇಘನಾ ಭವಿಷ್ಯದಲ್ಲಿ ಬ್ಯಾಂಕ್ ಅಕಾರಿಯಾಗುವ ಕನಸು ಕಂಡಿದ್ದಾಳೆ. ತನ್ನ ಓದಿನ ಜತೆಗೆ ಕೂಲಿನಾಲಿ ಮಾಡಿ ಜೀವನ …
Read More »ಭೈರತಿ ಬಸವರಾಜ್ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಅವರನ್ನು ಬದಲಾಯಿಸಲು ನೋಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.:ಕಾಗಿನೆಲೆ ಸ್ವಾಮೀಜಿ
ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ನೇರ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು ಜಿಲ್ಲೆಯ ಬಿಜೆಪಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ನಿಮಗೆ ಸಚಿವ ಸ್ಥಾನ ಬೇಕಾದರೆ ನೀವು ಸಚಿವರಾಗಿ. ಆದರೆ ಜಿಲ್ಲಾ …
Read More »ಆಟೋ ಚಾಲಕನ ಮಗ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ……….
ದಾವಣಗೆರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಾವಣಗೆರೆಯ ಹರಿಹರ ತಾಲೂಕಿನ ಎಂಕೆಇಟಿ ಶಾಲೆಯ ಅಭಿಷೇಕ್ ಕನ್ನಡ ಮಾಧ್ಯಮದಲ್ಲಿ 625ಕ್ಕೆ 623 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಗುತ್ತೂರು ಗ್ರಾಮದ ಮಂಜುನಾಥ್ ಹಾಗೂ ನೇತ್ರಾವತಿ ಅವರ ಮೊದಲನೇ ಮಗ ಅಭಿಷೇಕ್ ಬಡತನಲ್ಲಿ ಬೆಳೆದು ಛಲದಿಂದ ಓದಿ ಈ ಸಾಧನೆ ಮಾಡಿದ್ದಾನೆ. ತಂದೆ ಅಟೋಚಾಲನೆ ಮಾಡುತ್ತಿದ್ದರೆ ತಾಯಿ ಕೂಲಿ ಕೆಲಸ ಮಾಡಿಕೊಂಡು ಸಂಸಾರವನ್ನು ಸಾಗಿಸುತ್ತಿದ್ದಾರೆ. ಇವರ ಕಷ್ಟ ನೋಡಿದ ಅಭಿಷೇಕ್ ಅತ್ಯಂತ …
Read More »ಕೋವಿಡ್-19 ನಿರ್ವಹಣೆಯ ಹೆಸರಿನಲ್ಲಿಎರಡು ಸಾವಿರ ಕೋಟಿಗೂ ಹೆಚ್ಚು ಹಣ ಲೂಟಿ
ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಛೇರಿಯಲ್ಲಿ ಇವತ್ತು ಕರ್ನಾಟಕದ ಬಿಜೆಪಿ ಸರ್ಕಾರ ಕೋವಿಡ್-19 ನಿರ್ವಹಣೆಯ ಹೆಸರಿನಲ್ಲಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಎರಡು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಲೂಟಿ ಹೊಡೆದಿದ್ದು, ಸತ್ಯಾಸತ್ಯತೆ ಪರಿಶೀಲನೆಗೆ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಖೆ ಮಾಡಿಸಬೇಕು ಹಾಗೂ ಇದರ ಬಗ್ಗೆ ಚರ್ಚಿಸಲು ಕೂಡಲೇ ವಿಧಾನಮಂಡಲದ ಅಧಿವೇಶನವನ್ನು ಕರೆಯಬೇಕು ಎನ್ನುವುದರ ಸಲುವಾಗಿ ಇವತ್ತು ಕೇಂದ್ರದ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ …
Read More »ವರಮಹಾಲಕ್ಷ್ಮಿ ಸರಳ ಆಚರಣೆ
ದಾವಣಗೆರೆ: ಕೊರೊನಾ ನಡುವೆಯೂ ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಸರಳ, ಸಂಭ್ರಮದಿಂದ ನಡೆಯಿತು. ಮನೆಮನೆಗಳಲ್ಲಿ ಹಬ್ಬದ ಸಡಗರ ನೆಲೆಸಿತ್ತು. ಮುತ್ತೈದೆಯರು ಕೊರೊನಾ ಪರಿಣಾಮ ಸರಳತೆಯ ಆಚರಣೆಗೆ ಮೊರೆಹೋಗಿದ್ದರು. ಪ್ರತಿ ವರ್ಷವೂ ಅಕ್ಕಪಕ್ಕದ ಮನೆಯವರು, ಸ್ನೇಹಿತರು ಹಾಗೂ ಸಂಬಂಧಿಕರನ್ನು ಕರೆದು ಮಹಿಳೆಯರು ಸಡಗರ, ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮನೆಗಷ್ಟೇ ಸೀಮಿತಗೊಂಡಿತು. ನೆರೆಹೊರೆಯ ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಉಡಿ ತುಂಬುವುದು ಸಂಪ್ರದಾಯ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮನೆಗೆ ಕರೆಯಲು ಹಿಂಜರಿಯುವಂತಾಯಿತು. …
Read More »ಎತ್ತರದ ಕಟ್ಟೆ ಇದ್ದರೂ ಬಾವಿಗೆ ಬಿದ್ದ ಎಮ್ಮೆ- ಸ್ಥಳೀಯರಲ್ಲಿ ಅಚ್ಚರಿ……….
ದಾವಣಗೆರೆ: 80 ಅಡಿ ಆಳದ ಬಾವಿಗೆ ಎಮ್ಮೆಯೊಂದು ಬಿದ್ದಿರುವ ಘಟನೆ ಹರಪ್ಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ. ಎತ್ತರದ ಕಟ್ಟೆ ಇದ್ದರೂ ಎಮ್ಮೆ ಬಾವಿಗೆ ಬಿದ್ದಿದ್ದು ಹೇಗೆ ಎಂಬ ಅಚ್ಚರಿ ಎಲ್ಲರಲ್ಲೂ ಮೂಡಿದೆ. ಎಮ್ಮೆ, ಕೋಟ್ರೇಶ್ ನಾಯ್ಕ್‍ಗೆ ಸೇರಿದ್ದಾಗಿದ್ದು, ರಾತ್ರಿ ಸಮಯದಲ್ಲಿ ಎರಡು ಎಮ್ಮೆಗಳನ್ನು ಬಾವಿ ಪಕ್ಕದಲ್ಲಿ ಕಟ್ಟಲಾಗಿತ್ತು. ಈ ವೇಳೆ ಎರಡು ಎಮ್ಮೆಗಳು ಕಾದಾಟ ನಡೆಸಿವೆ ಎನ್ನಲಾಗಿದ್ದು, ಬಾವಿ ಕಟ್ಟೆ ಎಗರಿ, ಜಾಲರಿ ಸಮೇತ ಆಳದ ಬಾವಿಗೆ ಎಮ್ಮೆ …
Read More »ಫೇಲಾದ ವಿದ್ಯಾರ್ಥಿಯೊಬ್ಬ ಮನನೊಂದು ಆತ್ಮಹತ್ಯೆ…………
ದಾವಣಗೆರೆ: ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಫೇಲಾದ ವಿದ್ಯಾರ್ಥಿಯೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಯರಾಮ್(18) ಮೃತ ವಿದ್ಯಾರ್ಥಿ. ರಿಸಲ್ಟ್ ಬಂದ ಕೂಡಲೇ ತಾನು ಫೇಲಾಗಿರುವ ವಿಷಯ ತಿಳಿದು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ದಾವಣಗೆರೆ ಜಿಲ್ಲೆಯ ಹರಿಹರದ ಪಕ್ಕೀರಸ್ವಾಮಿ ಬಳಿ ಈ ಘಟನೆ ನಡೆದಿದೆ. ಭೌತಶಾಸ್ತ್ರ ವಿಷಯದಲ್ಲಿ ಮಾತ್ರ ಅನುತ್ತೀರ್ಣಗೊಂಡಿದ್ದು, …
Read More »