Breaking News

ರಾಜ್ಯ

ಸಿದ್ಧೇಶ್ವರ ಜಾತ್ರೆಯಲ್ಲಿ ಹರಿದ ಭಂಡಾರದ ಹೊಳೆ

ಚಿಕ್ಕೋಡಿ: ಹಂಡ ಕುದರಿ ಪುಂಡ ಅರಣ್ಯಸಿದ್ಧಗ ಚಾಂಗ್ ಭಲೋ… ಬಿಳಿ ಗುಡಿ ಅರಣ್ಯಸಿದ್ಧಗ ಚಾಂಗ ಭಲೋ… ಎಂಬ ಉದ್ಘೋಷ ಇಡೀ ಕ್ಷೇತ್ರದಲ್ಲಿ ಮೊಳಗಿತು. ರಣಬಿಸಿಲಿನ ಮಧ್ಯೆಯೂ ಭಂಡಾರದ ಹೊಳೆ ಹರಿಸಿದ ಭಕ್ತರು, ಸಂಭ್ರಮದಲ್ಲಿ ಮಿಂದೆದ್ದರು. ಊರಿಗೆ ಊರೇ ಹಳದಿಮಯವಾಗಿತ್ತು. ತಾಲ್ಲೂಕಿನ ಕೆರೂರಿನಲ್ಲಿ ಅರಣ್ಯ ಸಿದ್ಧೇಶ್ವರ ಹಾಗೂ ಮಲಕಾರಿ ಸಿದ್ಧೇಶ್ವರ ಜಾತ್ರೆ ಕೊನೆಯ ದಿನವಾದ ಸೋಮವಾರ ನಡೆದ ಭಂಡಾರದ ಓಕುಳಿಯಲ್ಲಿ ಕಂಡುಬಂದ ದೃಶ್ಯಗಳಿವು. ಮಾರ್ಚ್‌ 13ರಂದು ಆರಂಭಗೊಂಡ ಈ ಜಾತ್ರೆ ‘ನಿವ್ವಾಳಕಿ’ …

Read More »

ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದ ಸಭಾಪತಿ

ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದ ನಿರ್ವಹಣೆಗೆ ಸಂಬಂಧಿಸಿ, ವಿಧಾನಮಂಡಲ ಚಳಿಗಾಲದ ಅಧಿವೇಶನ ವೇಳೆ ನೀಡಿದ್ದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು. ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ‘ಸೌಧದಲ್ಲಿರುವ ವಿಧಾನಸಭೆ ಮತ್ತು ಪರಿಷತ್ ಸಭಾಂಗಣದ ನಿರ್ವಹಣೆ ವಿಚಾರವಾಗಿ ಕೆಲವು ನ್ಯೂನತೆಗಳನ್ನು ಸರಿಪಡಿಸುವಂತೆ ಸೂಚಿಸಲಾಗಿತ್ತು.ಅವುಗಳನ್ನು ಪಾಲಿಸುವ ಜತೆಗೆ, ಇಡೀ ಸೌಧದ ಸಮರ್ಪಕ ನಿರ್ವಹಣೆಗೆ ಕ್ರಮ ವಹಿಸಬೇಕು’ ಎಂದರು.   ‘2023ರ ಡಿಸೆಂಬರ್‌ನಲ್ಲಿ …

Read More »

ರೈತರ ಆತ್ಮಹತ್ಯೆ ಸಂತ್ರಸ್ತರು ,ಹುತಾತ್ಮ ಸೈನಿಕರ ಮಕ್ಕಳಿಗೆ, ಜೀವಮಾನ ಉಚಿತ ಶಿಕ್ಷಣ;ಬಿರ್ಲಾ ಇಂಟರ್ನ್ಯಾಷನಲ್ ಸ್ಕೂಲ್

ಬೆಳಗಾವಿ  : ಬಿರ್ಲಾ ಇಂಟರ್ನ್ಮಾಷನಲ್ ಸ್ಕೂಲ್ ಬೆಳಗಾವಿ ರೈತರ ಆತ್ಮಹತ್ಯೆ ಸಂತ್ರಸ್ತರು ಮತ್ತು ಹುತಾತ್ಮ ಸೈನಿಕರ ಮಕ್ಕಳಿಗೆ ಜೀವಮಾನ ಉಚಿತ ಶಿಕ್ಷಣವನ್ನು ಪರಿಚಯಿಸಿದೆ ಬಿರ್ಲಾ ಇಂಟರ್ನ್ಯಾಷನಲ್ ಸ್ಕೂಲ್ – ಬೆಳಗಾವಿಯು ದುರಂತವಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಮತ್ತು ನಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರ ಸಂತತಿಗೆ ಜೀವಮಾನದ ಉಚಿತ ಶಿಕ್ಷಣವನ್ನು ನೀಡುವ ಮೂಲಕ ಪರಿವರ್ತನಾ ಯಾತ್ರೆಯನ್ನು ಪ್ರಾರಂಭಿಸುತ್ತಿದೆ. ಈ ನೆಲದ ಮುರಿಯುವ ಉಪಕ್ರಮವು ಸಾಮಾಜಿಕ ಜವಾಬ್ದಾರಿ …

Read More »

ರಾಯ ಬಾಗ ನಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣಾ ಸಭೆ

ಮುಂಬರುವ ಚಿಕ್ಕೋಡಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ರಾಯಬಾಗ ಪಟ್ಟಣದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣಾ ಸಭೆಯನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದರು. ಚಿಕ್ಕೋಡಿ ಲೋಕಸಭೆ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಪಕ್ಷದ ಮಡಿಲಿಗೆ ತೆಗೆದುಕೊಳ್ಳಲು ಇದು ಸುವರ್ಣಾವಕಾಶ ಇದ್ದು ಯಾರೇ ಅಭ್ಯರ್ಥಿಯಾಗಿ ಆಯ್ಕೆ ಯಾದರೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಟೊಂಕು ಕಟ್ಟಿ ಕೆಲಸ ಮಾಡಬೇಕು. ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿಗಳ …

Read More »

ಮೋದಿಗೆ ಬೈಯಲು ಹೈಕಮಾಂಡ್ ಆರ್ಡರ್ ಆಗಿದೆ”: ಸಂತೋಷ್ ಲಾಡ್ ಹೇಳಿದ್ದಾಗಿ ಪ್ರಲ್ಹಾದ್ ಜೋಶಿ ಹೇಳಿಕೆ

ಹುಬ್ಬಳ್ಳಿ, ಮಾ.19: ಪ್ರಧಾನಿನರೇಂದ್ರ ಮೋದಿ(Narendra Modi) ಹಾಗೂ ತಮ್ಮ ವಿರುದ್ಧ ನಿತಂತರವಾಗಿ ಟೀಕಿಸುತ್ತಿರುವ ಸಚಿವ ಸಂತೋಷ್ ಲಾಡ್ (Santosh Lad) ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟಾಂಗ್ ಕೊಟ್ಟಿರುವ ವಿಡಿಯೋ ವೈರಲ್ (Viral Video) ಆಗುತ್ತಿದೆ. ಮೋದಿ ಅವರಿಗೆ ಯಾಕೆ ಬೈಯುತ್ತಿದ್ದೀಯಾ ಎಂದು ಕೇಳಿದಾಗ, ಸಚಿವ ಸ್ಥಾನ ಉಳಿಸಿಕೊಳ್ಳಲು ಬೈಯುತ್ತಿದ್ದೇವೆ ಎಂದು ಸಂತೋಷ್ ಲಾಡ್ ಹೇಳಿದ್ದಾಗಿ ಜೋಶಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, ವಿಮಾನದಲ್ಲಿ ನಾನು ಮತ್ತು ಸಂತೋಷ್ ಲಾಡ್ ಒಟ್ಟಿಗೆ …

Read More »

ವಿಜಯಪುರದಲ್ಲಿ ದಾಖಲೆ ಇಲ್ಲದೆ ಸಾಗಿಸ್ತಿದ್ದ 2 ಕೋಟಿ ಅಧಿಕ ನಗದು ಜಪ್ತಿ; ಇಬ್ಬರು ವಶಕ್ಕೆ

ವಿಜಯಪುರ, ಮಾ.19:ಲೋಕಸಭಾ ಚುನಾವಣೆನೀತಿ ಸಂಹಿತೆಹಿನ್ನೆಲೆ ಚೆಕ್​ಪೋಸ್ಟ್​ ನಿರ್ಮಿಸಿ ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ಕ್ರಮಕೈಗೊಳ್ಳಲಾಗಿದೆ. ಅದರಂತೆ ಇಂದು(ಮಾ.19)​ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಕೋಟಿ 93 ಲಕ್ಷ 50 ಸಾವಿರ ನಗದನ್ನು ವಿಜಯಪುರ(Vijayapura) ನಗರದ ಸಿಂದಗಿ ಬೈಪಾಸ್ ಬಳಿ ಜಿಲ್ಲಾ ಸಿಇಎನ್ ಪೊಲೀಸರು ತಪಾಸಣೆ ನಡೆಸಿ ಜಪ್ತಿ ಮಾಡಿದ್ದಾರೆ. ಜೊತೆಗೆ ಹಣದ ಸಮೇತ ಸಾಂಗ್ಲಿ ಮೂಲದ ಬಾಲಾಜಿ ನಿಕ್ಕಂ ಮತ್ತು ಸಚಿನ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.   ಹೈದ್ರಾಬಾದ್‌ದಿಂದ ಹುಬ್ಬಳ್ಳಿಗೆ MH …

Read More »

ಹಾನಗಲ್​ನಲ್ಲಿ ತಾನೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯನ್ನೇ ಹತ್ಯೆಗೈದ ಯುವಕ

ಹಾವೇರಿ, ಮಾ.19: ಜಿಲ್ಲೆಯ ಹಾನಗಲ್​(Hangal)ಹೊರವಲಯದಲ್ಲಿತಾನೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯನ್ನ ಯುವಕನೊಬ್ಬ ಹತ್ಯೆಗೈದ ಘಟನೆ ನಡೆದಿದೆ. ಮೂಡೂರು ಗ್ರಾಮದ ದೀಪಾ ಮಂಜಪ್ಪ ಗೊಂದಿ(21) ಮೃತ ರ್ದುದೈವಿ. ಆರೋಪಿ ಮಾಲತೇಶ್ ಎಂಬಾತ ಮೊದಲು ವಿಷ ಕೊಟ್ಟು ಬಳಿಕ ದೀಪಾಳನ್ನು ನೇಣುಹಾಕಿದ್ದಾನೆ. ವಿಷಯ ತಿಳಿದ ಕೋಡಲೇ ಅರಳೇಶ್ವರ ಗ್ರಾಮದ ಆರೋಪಿ ಮಾಲತೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ನಡೆದು ಐದು ದಿನಗಳ ನಂತರ ಕೊಲೆ ಪ್ರಕರಣ ಬಯಲು   ಮುಂದಿನ ತಿಂಗಳ ಏಪ್ರಿಲ್​ 12ರಂದು ದೀಪಾ …

Read More »

ಯಾವ ಕುರಿಯನ್ನು ಎಲ್ಲಿ ನಿಲ್ಲಿಸಬೇಕು, ಹೇಗೆ ಬಲಿ ಕೊಡಬೇಕು ಬಿಜೆಪಿ ನಾಯಕರು ಶಿಸ್ತುಬದ್ಧವಾಗಿ ಪ್ಲ್ಯಾನ್ ಮಾಡಿದ್ದಾರೆ: ಸವದಿ

ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬಂದು ಪುನಃ ಬಿಜೆಪಿಗೆ ವಾಪಸ್ಸು ಹೋದ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ತಾನು ಮಾಡಿದ ಪ್ರಮಾದಕ್ಕೆ ಪಾಠ ಕಲಿಸುವ ಯೋಜನೆ ಬಿಜೆಪಿ ನಾಯಕರಿಗಿದೆಯೇ? ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳುವ ಪ್ರಕಾರ ಶೆಟ್ಟರ್ ಅವರನ್ನು ಹರಕೆಯ ಕುರಿ ಮಾಡಲು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ (Belagavi Lok Sabha seat) ಕಣಕ್ಕಿಳಿಸುವ ಹುನ್ನಾರ ನಡೆದಿದೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸವದಿ, ಶೆಟ್ಟರ್ ಅವರಿಗೆ ಉದ್ದೇಶಪೂರ್ವಕವಾಗಿ …

Read More »

ಅವಳಿ ಗಂಡು ಶಿಶುಗಳ ಸಾವು

ನಡು ರಾತ್ರಿಯ ಸಮಯದಲ್ಲಿ ಅಂತ್ಯಸಂಸ್ಕಾರ ನಡೆಸಲು ಮಹಿಳೆಯ ಸಂಬಂಧಿಕರಿಗೆ ಅಸಹಾಯಕತೆ ಎದುರಾದಾಗ ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಿಗೆ ಬಂದು, ತಮ್ಮ ಮನೆಯಲ್ಲಿಯೇ ಶೀತಲೀಕೃತ ಶವ ರಕ್ಷಣಾ ಯಂತ್ರದಲ್ಲಿ ಅವಳಿ ಶಿಶುಗಳ ಕಳೇಬರವನ್ನು ಒಂದು ರಾತ್ರಿ ರಕ್ಷಿಸಿಟ್ಟು, ಮರುದಿನ ಬೆಳಿಗ್ಗೆ ಇಂದ್ರಾಳಿಯ ರುದ್ರ ಭೂಮಿಯಲ್ಲಿ ಗೌರಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು.   ಅವಳಿ ಗಂಡು ಶಿಶುಗಳ ಅಂತ್ಯಸಂಸ್ಕಾರ ನಡೆಸಲು, ಮನೆ ಮಂದಿಗೆ ಅಸಹಾಯಕ ಪರಿಸ್ಥಿತಿ ಎದುರಾದಾಗ, ಸಮಾಜಸೇವಕ ನಿತ್ಯಾನಂದ ಒಳಕಾಡುವರು, ನೆರವಿಗೆ ಬಂದು …

Read More »

21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

ಕೊಪ್ಪಳ : ಮುಂದಿನ ರಾಜಕೀಯ ನಿರ್ಧಾರಕ್ಕೆ ಗುರುವಾರ ಮಾ 21 ರಂದು ನಿರ್ಧಾರ ಮಾಡುತ್ತೇನೆ. ಅಂದು ಬೆಂಬಲಿಗರ ಸಭೆ ಕರೆದಿರುವೆ. ಬೆಂಬಲುಗರ ಸಭೆಯ ನಂತರ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಮಾಡುತ್ತೇನೆ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ಸಂಗಣ್ಣ ಕರಡಿ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಡಾ ಬಸವರಾಜ ಅವರಿಗೆ ಘೋಷಣೆಯಾಗಿದೆ.ಅವರಿಗೆ ಶುಭ ಕೋರುತ್ತೇನೆ. ನನಗೆ 8 ವಿಧಾನ ಸಭಾ ಕ್ಷೇತ್ರದ …

Read More »