ದಾವಣಗೆರೆ : ಸಂಸದ ಜಿಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅಡುಗೆ ಮಾಡಲಿಕ್ಕೆ ಲಾಯಕ್ಕು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಶಾಮನವರು ಶಿವಶಂಕರಪ್ಪ ಅವರು ಇದೀಗ ಚುನಾವಣೆ ಆಯೋಗಕ್ಕೆ ಪತ್ರ ಬರೆಯುವ ಮೂಲಕ ಸ್ಪಷ್ಟನೆ ನೀಡಿದ್ದು, ನನಗೆ ಆಗದವರು ದ್ವೇಷದಿಂದ ಹೇಳಿಕೆಗಳನ್ನು ತಿರುವು ಸೃಷ್ಟಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.
Read More »ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ – ಜಿ.ಟಿ.ಡಿ.
ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಆಗಲಿದೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಇದರಲ್ಲಿ ಎರಡು ಅನುಮಾನವಿಲ್ಲ. ಹೀಗಾಗಿಯೇ ಸಿಎಂ ಸಿದ್ಧರಾಮಯ್ಯ ಆತಂಕಕ್ಕೊಳಗಾಗಿದ್ದಾರೆ. ಪ್ರಚಾರದ ವೇದಿಕೆಯಲ್ಲಿ ನನಗೆ ವರುಣಾ ವಿಧಾನಸಭಾ ಕ್ಷೇತ್ರದಿಂದ 60 ಸಾವಿರ ಲೀಡ್ ಕೊಡಬೇಕು. ಆಗ ಮಾತ್ರ ನಾನು ಗಟ್ಟಿಯಾಗಿ ನಿಲ್ಲಬಹುದು ಎಂದಿದ್ದಾರೆ ಎಂದು ಜೆಡಿಎಸ್‌ನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.
Read More »ಬಾಲ್ಯವಿವಾಹದಿಂದ ಐವರು ಬಾಲಕಿಯರ ರಕ್ಷಣೆ
ಕೊಪ್ಪಳ: ತಾಲ್ಲೂಕಿನ ಜಿನ್ನಾಪುರ ತಾಂಡದ ದೇವಸ್ಥಾನದಲ್ಲಿ ನಿಗದಿಯಾಗಿದ್ದ ಐದು ಜನ ಬಾಲಕಿಯರ ಬಾಲ್ಯ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಡೆದಿದ್ದಾರೆ. ಅವರ ಪೋಷಣೆ ಮತ್ತು ರಕ್ಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ. ಏ. 4ರಂದು ಜಿನ್ನಾಪುರ ತಾಂಡಾದಲ್ಲಿ ಮರಿಯಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ವಿವಾಹ ನಿಶ್ಚಯಿಸಲಾಗಿತ್ತು. ಈ ಬಗ್ಗೆ ಮಕ್ಕಳ ಸಹಾಯವಾಣಿ 1098/112 ಕರೆ ಬಂದ ಹಿನ್ನೆಲೆಯಲ್ಲಿ ಜಿನ್ನಾಪುರ ತಾಂಡಾಕ್ಕೆ ಅಂಗನವಾಡಿ ಮೇಲ್ವಿಚಾರಕಿ ಮಂಜುಳಾ, ಜಿಲ್ಲಾ …
Read More »ಸುಳ್ಳುಗಳ ‘ಎಲೆಕ್ಟ್ರೊಲ್ ಬಾಂಡ್’ ಸರದಾರ ಅಮಿತ್ ಷಾ
ಬೆಂಗಳೂರು : ಸುಳ್ಳುಗಳ ಸರದಾರ ಎಲೆಕ್ಟ್ರೊಲ್ ಬಾಂಡ್ ಸರದಾರ ಅಮಿತ್ ಷಾ. ಕೇಂದ್ರ ಸಚಿವ ಅಮಿತ್ ಶಾ ಹಸಿ ಸುಳ್ಳುಗಳನ್ನು ಹರಿಬಿಟ್ಟಿದ್ದಾರೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು. ಅಮಿತ್ ಶಾ ಸೂರ್ಯನಿಗೆ ಟಾರ್ಚ್ ಹಿಡಿಯುವ ಕೆಲಸ ಮಾಡಿದ್ದಾರೆ.
Read More »Dr. C.N. Manjunath: ಬಾವಾನನ್ನು ಗೆಲ್ಲಿಸಲು HDK ಪಣ
ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಬೆಂಗಳೂರು ಗ್ರಾಮಾಂತರ (Bengaluru Rural) ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು , ಈ ಬಾರಿ ಇಲ್ಲಿ ಡಾ. ಮಂಜುನಾಥ್ (Dr. Manjunath) ಅವರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ. ಹೌದು. 2019ರ ಚುನಾವಣೆಯಲ್ಲಿ ಡಿಕೆ ಸುರೇಶ್ (DK Suresh) ಒಬ್ಬರೇ ಕರ್ನಾಟಕದಿಂದ ಕಾಂಗ್ರೆಸ್ (Congress) ಸಂಸದರಾಗಿ ಆಯ್ಕೆ ಆಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡೆದ ಪರಿಣಾಮ ಡಿಕೆ ಸುರೇಶ್ 2.06 ಲಕ್ಷ ಮತಗಳಿಂದ ಬಿಜೆಪಿ …
Read More »ಗೀತಾ ಆಯ್ಕೆಯಲ್ಲಿ ಒಳ ಒಪ್ಪಂದ ರಾಜಕಾರಣ ನಡೆದಿಲ್ಲ: ಭಂಡಾರಿ ಸ್ಪಷ್ಟನೆ
ಶಿವಮೊಗ್ಗ: ‘ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಗೀತಾ ಶಿವರಾಜಕುಮಾರ್ ಡಮ್ಮಿ ಅಭ್ಯರ್ಥಿ ಅಲ್ಲ, ಅವರನ್ನು ಆಯ್ಕೆ ಮಾಡುವಲ್ಲಿ ಯಾವುದೇ ಒಳ ಒಪ್ಪಂದ ರಾಜಕಾರಣ ಕಾಂಗ್ರೆಸ್ ಮಾಡಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಿವಮೊಗ್ಗ ಕ್ಷೇತ್ರದ ಚುನಾವಣಾ ಉಸ್ತುವಾರಿ ಮಂಜುನಾಥ ಭಂಡಾರಿ ಸ್ಪಷ್ಟಪಡಿಸಿದರು. ನಗರದಲ್ಲಿ ಸೋಮವಾರ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಮಂಜುನಾಥ ಭಂಡಾರಿ, ‘2014 ರ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದೆನು. ಗೀತಾ ಶಿವರಾಜಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಆಗ …
Read More »ಲೋಕಸಭೆ ಚುನಾವಣೆ ಜನರ ಸಮ್ಮುಖದಲ್ಲೇ ನನ್ನ ನಿರ್ಧಾರ ಪ್ರಕಟಿಸುತ್ತೇನೆ- ಸುಮಲತಾ
ಬೆಂಗಳೂರು: ಮಂಡ್ಯ ನಗರದ ಕಾಳಿಕಾಂಬ ಸಮುದಾಯ ಭವನದ ಆವರಣದಲ್ಲಿ ನಾಳೆ (ಬುಧವಾರ) ಬೆಳಿಗ್ಗೆ 10 ಗಂಟೆಗೆ ಬೆಂಬಲಿಗರ ಸಭೆ ನಡೆಸಲಿದ್ದೇನೆ. ಆ ಬಳಿಕ ಲೋಕಸಭೆ ಚುನಾವಣೆ ಸಂಬಂಧ ಜನರ ಸಮ್ಮುಖದಲ್ಲೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂ ದು ಸಂಸದೆ ಸುಮಲತಾ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋ ಸ್ಟ್ ಹಂ ಚಿಕೊಂಡಿರುವ ಅವರು, ನನ್ನ ಸ್ವಾಭಿಮಾನಿ ಮಂಡ್ಯದ ಬಂಧುಗಳೆ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ …
Read More »ಮಧ್ಯಾಹ್ನದ ಬಿಸಿಯೂಟಕ್ಕೆ ಚಿತ್ರಾನ್ನ ಸೇವಿಸಿದ್ದ 15 ಮಕ್ಕಳಿಗೆ ವಾಂತಿ, ಭೇದಿ
ಕೊಪ್ಪಳ, ಮಾರ್ಚ್ 02: ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ 15 ಮಕ್ಕಳಿಗೆ(Childrens)ವಾಂತಿ, ಭೇದಿ ಉಂಟಾಗಿ ಅಸ್ವಸ್ಥರಾಗಿದ್ದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಸ್ವಸ್ಥರಾಗಿದ್ದರು. ಮಧ್ಯಾಹ್ನ ಊಟಕ್ಕೆ ಚಿತ್ರಾನ್ನ ಸೇವಿಸಿದ ನಂತರ ಕೆಲಹೊತ್ತಿನಲ್ಲಿ ವಾಂತಿ ಭೇದಿಯಿಂದ ವಿದ್ಯಾರ್ಥಿಗಳು ಬಳಲಿದ್ದಾರೆ. ಕೂಡಲೇ ಅಸ್ವಸ್ಥ ಮಕ್ಕಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪಿಹೆಚ್ಸಿಗೆ ಡಿಹೆಚ್ಒ ಡಾ.ಲಿಂಗರಾಜ್ ಭೇಟಿ ನೀಡಿ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಸುದ್ದಿ …
Read More »ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿದ ರೈತರು
ಬೆಳಗಾವಿ, ಮಾರ್ಚ್ 2: ರಾಜ್ಯದಲ್ಲಿ ಲೋಕಸಭೆ ಚುನಾವಣೆ(Lok Sabha Elections)ಕಾವು ರಂಗೇರುತ್ತಿದೆ. ಇದೇ ವೇಳೆ ರೈತರ ಆಕ್ರೋಶ ಕೂಡ ಜೋರಾಗಿದೆ. ಸರ್ಕಾರ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಚುನಾವಣೆಯಲ್ಲಿ ಬಿಜಿ ಇದ್ದು ಜಾನುವಾರುಗಳಿಗೆ ಮೇವಿಲ್ಲ. ನೀರಿಲ್ಲದೇ ಪರಿತಪ್ಪಿಸುತ್ತಿವೆ. ಬರ ಪರಿಹಾರವೂ ಇಲ್ಲ, ರೈತರ (Farmers) ಕಷ್ಟ ಹೇಳತಿರದ್ದಾಗಿದ್ದು ಇದರಿಂದ ಬೆಳಗಾವಿಯಲ್ಲಿ ರೈತರು ಇಂದು ಬೀದಿಗಿಳಿದಿದ್ದರು. ಕೇಂದ್ರ, ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದು, ಕೊನೆ ಘಳಿಗೆಯಲ್ಲಿ ರೈತರ ಹೋರಾಟ ತೀವ್ರ ಸ್ವರೂಪ …
Read More »ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ವಿಶೇಷ ಬಸ್ ವ್ಯವಸ್ಥೆ
ಬಾಗಲಕೋಟೆ, ಮಾರ್ಚ್.31: ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ (Sri Shaila Mallikarjuna Jatre) ಪ್ರತಿವರ್ಷ ಲಕ್ಷಾಂತರ ಭಕ್ತರು ನಾನಾ ಪ್ರದೇಶಗಳಿಂದ ಪಾದಯಾತ್ರೆ ಮೂಲಕ ಅಲ್ಲಿಗೆ ತೆರಳ್ತಾರೆ. ಸದ್ಯ ಭಕ್ತರ ಅನುಕೂಲಕ್ಕೆ ಸಾರಿಗೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಬಾಗಲಕೋಟೆ ಘಟಕದಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ (Bus Service). ಭಕ್ತರ ಅನುಕೂಲಕ್ಕೆ ನಿತ್ಯವೂ ಎರಡು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. …
Read More »
Laxmi News 24×7