Breaking News

ರಾಜ್ಯ

ದೌರ್ಬಲ್ಯವೇ ಚಟಕ್ಕೆ ಕಾರಣ: ಬ್ರಹ್ಮಕುಮಾರಿ ಯೋಗಿನಿ

ಕೊಪ್ಪಳ: ‘ಮನುಷ್ಯನಲ್ಲಿ ಮಾನಸಿಕ ಹಾಗೂ ಅಧ್ಯಾತ್ಮಿಕ ಬಲ ಕಡಿಮೆಯಾಗಿರುವುದೇ ತಂಬಾಕಿಗೆ ಬಲಿಯಾಗಲು ಮುಖ್ಯ ಕಾರಣ’ ಎಂದು ಬ್ರಹ್ಮಕುಮಾರಿ ಯೋಗಿನಿ ಹೇಳಿದರು. ಈಶ್ವರೀಯ ವಿಶ್ವವಿದ್ಯಾಲಯ ತನ್ನ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಂಬಾಕು ನಿಷೇಧ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಬುದ್ಧಿಜೀವಿಯಾದ ಮನುಷ್ಯನಿಗೆ ಒಳ್ಳೆಯದನ್ನು ಸ್ವೀಕಾರ ಮಾಡಲು ಆಗುತ್ತಿಲ್ಲ, ಕೆಟ್ಟದ್ದನ್ನು ಬಿಡಲೂ ಸಾಧ್ಯವಾಗುತ್ತಿಲ್ಲ. ಅನೇಕ ದುಶ್ಚಟಗಳಿಗೆ ದಾಸನಾಗುತ್ತಿದ್ದು, ದಿನೇ ದಿನೇ ಮನುಷ್ಯನಲ್ಲಿ ದುಃಖ ಹಾಗೂ ಅಶಾಂತಿ ಹೆಚ್ಚುತ್ತಿದೆ. ಇಂತಹ ಸ್ಥಿತಿಗೆ ಮೂಲ ಕಾರಣ ಮನುಷ್ಯನ …

Read More »

150 ಜಿಲ್ಲಾಧಿಕಾರಿಗಳಿಗೆ ಅಮಿತ್ ಶಾ ಕರೆ

ನವದೆಹಲಿ: ಜೂನ್ 4 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತ ಎಣಿಕೆಗೆ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 150 ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂಬ ಆರೋಪದ ಕುರಿತು ಚುನಾವಣಾ ಆಯೋಗವು (ಇಸಿ) ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರಿಂದ ಭಾನುವಾರ ಮಾಹಿತಿ ಕೇಳಿದೆ. ಜೈರಾಮ್ ರಮೇಶ್ ಅವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ಭಾನುವಾರ ಸಂಜೆ 7 ಗಂಟೆಯೊಳಗೆ ತಮ್ಮ ಆರೋಪಗಳ …

Read More »

ರೈಲಿನಿಂದ ಜಿಗಿಯಲು ಯತ್ನಿಸಿದ ವೃದ್ಧ

ಮೈಸೂರು: ಮಕ್ಕಳ ನಡವಳಿಕೆಯಿಂದ ನೊಂದ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೂಡಲಗೆರೆಯ ಈರಪ್ಪ ಶಂಕರಪ್ಪ ನಯನಾಪುರ ಅವರು ಮನೆ ಬಿಟ್ಟು ಮೈಸೂರಿಗೆ ಬರುತ್ತಿದ್ದ ಚಲಿಸುತ್ತಿದ್ದ ರೈಲಿನಲ್ಲಿ ಧುಮುಕಲು ಯತ್ನಿಸಿದ್ದಾರೆ. ಇತರೆ ಪ್ರಯಾಣಿಕರು ಅವರನ್ನು ರಕ್ಷಣೆ ಮಾಡಿ ರೈಲ್ವೆ ನಿಲ್ದಾಣಕ್ಕೆ ಕರೆತಂದರು. ಮಾನವ ಹಕ್ಕು ಹೋರಾಟಗಾರ ಪ್ರಸನ್ನ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದರು. ಬಳಿಕ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಬಸವರಾಜು ಅರವಿಂದ ನಗರದ ಜೆಎಸ್‌ಎಸ್‌ …

Read More »

ಮುಂಬೈ ಹೊಟೇಲ್ ಉದ್ಯಮಿ ಕೊಲೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

ಮುಂಬೈ: 2001ರಲ್ಲಿ ಮುಂಬೈನ ಹೊಟೇಲ್ ಉದ್ಯಮಿ ಜಯಾ ಶೆಟ್ಟಿ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಮುಂಬೈ ವಿಶೇಷ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ(MCOCA) ಅಡಿಯಲ್ಲಿ ದಾಖಲಾದ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎ.ಎಂ.ಪಾಟೀಲ್ ಅವರು, ಜಯಾ ಶೆಟ್ಟಿ ಕೊಲೆ ಪ್ರಕರಣದಲ್ಲಿ ರಾಜನ್‌ ಅಪರಾಧಿ ಎಂದು ಘೋಷಿಸಿದರು. ಜಯಾ ಶೆಟ್ಟಿ ಅವರು ಸೆಂಟ್ರಲ್ ಮುಂಬೈನ ಗಮದೇವಿಯಲ್ಲಿ ಗೋಲ್ಡನ್ ಕ್ರೌನ್ ಹೋಟೆಲ್ ನಡೆಸುತ್ತಿದ್ದರು. …

Read More »

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನಕ್ಕೆ 2,000 ಪೊಲೀಸರ ಸರ್ಪಗಾವಲು: ಪ್ರವಾಸಿಗರಿಗೆ, ದೋಣಿಗಳಿಗೆ ನೋ ಎಂಟ್ರಿ!

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನಕ್ಕೆ 2,000 ಪೊಲೀಸರ ಸರ್ಪಗಾವಲು: ಪ್ರವಾಸಿಗರಿಗೆ, ದೋಣಿಗಳಿಗೆ ನೋ ಎಂಟ್ರಿ! ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸುಮಾರು ಎರಡೂವರೆ ತಿಂಗಳ ಕಾಲ ದೇಶಾದ್ಯಂತ ಸುಮಾರು 200 ಚುನಾವಣಾ ರ್‍ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಕೊನೆಯ ಹಂತದ ಚುನಾವಣೆಗೂ ಮುನ್ನ ಕನ್ಯಾಕುಮಾರಿಯ (Kanyakumari) ಪ್ರಸಿದ್ಧ ವಿವೇಕಾನಂದ (Vivekananda) ರಾಕ್ ಸ್ಮಾರಕದಲ್ಲಿ ಎರಡು ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ.   ಇದಕ್ಕಾಗಿ …

Read More »

ವಿದ್ಯಾರ್ಥಿಗಳು ಮಾನಸಿಕ ಸದೃಢತೆ ಕಾಪಾಡಿಕೊಂಡು ಅಧ್ಯಯನಕ್ಕೆ ಸಜ್ಜಾಗಿ: ಪ್ರವೀಣ

ಅಳ್ನಾವರ: ‘ಒತ್ತಡದ ಬದುಕಿನಲ್ಲಿ ಮಾನಸಿಕ ಸಮತೋಲನ ಕಾಪಾಡಿಕೊಂಡು ಅಧ್ಯಯನಕ್ಕೆ ವಿದ್ಯಾರ್ಥಿಗಳು ಸಜ್ಜಾಗಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರವೀಣ ಆನಂದಕಂದಾ ಹೇಳಿದರು. ಕಾಲೇಜಿನಲ್ಲಿ ತೆರೆದ ನೂತನ ಜಿಮ್ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಜಿಮ್‌ನಲ್ಲಿ ಅಧುನಿಕ ಸಲಕರಣೆಗಳನ್ನು ಅಳವಡಿಸಲಾಗಿದೆ. ಸತತ ಓದಿನ ಜೊತೆಗೆ ಏಕಾಗ್ರತೆ ಸಾಧಿಸಲು ಈ ಸಲಕರಣೆಗಳನ್ನು ಬಳಸಿಕೊಂಡು ದೈಹಿಕ ಶ್ರಮ ಹಾಕಬೇಕು’ ಎಂದರು. ಟೇಬಲ್ ಟೆನಿಸ್ ಕೋರ್ಟ್‌ನಲ್ಲಿ ಆಟವಾಡಿದ ಬಳಿಕ ಕ್ರೀಡಾ ವಿಭಾಗದ ಪ್ರಬಾರ ಮುಖ್ಯಸ್ಥ …

Read More »

ಸುಧಾಕರ್​​​ಗೆ ಒಂದೇ ಮತ ಹೆಚ್ಚು ಬಂದ್ರೂ ರಾಜೀನಾಮೆ ನೀಡುವೆ: ಪ್ರದೀಪ್ ಈಶ್ವರ್

ಬೆಂಗಳೂರು: ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಪಕ್ಕಾ ಗೆಲ್ತಾರೆ..ಬಿಜೆಪಿ ಅಭ್ಯರ್ಥಿ ಸುಧಾಕರ್​ ಅವರು ಒಂದೇ ಒಂದು ಮತ ಹೆಚ್ಚು ಪಡೆದರೆ, ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರದೀಪ್​ ಈಶ್ವರ್​ ಸವಾಲು ಹಾಕಿದ್ದಾರೆ. ಅಲ್ಲದೇ ತಮ್ಮ ರಾಜೀನಾಮೆ ಮಾತಿಗೆ ಬದ್ಧನಾಗಿರುತ್ತೇನೆ ಎಂದೂ ತಿಳಿಸಿದ್ದಾರೆ. ಇತ್ತೀಚೆಗೆ ಮಾಜಿ ಸಚಿವ ಸುಧಾಕರ್​​ ಅವರು ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚಿಕ್ಕಬಳ್ಳಾಪುರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಕುಸಿದಿದೆ ಎಂದಿದ್ದ ಮಾತಿಗೂ ಈಶ್ವರ್​ …

Read More »

ಐಪಿಎಲ್​ ಫೈನಲ್ ಪಂದ್ಯ

IPL 2024: ಐಪಿಎಲ್ ಸೀಸನ್ 17ರ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಈ ಪಂದ್ಯದಲ್ಲಿ ರನ್ ಸುರಿಮಳೆಯಾಗುವ ಸಾಧ್ಯತೆಯಿದೆ. ಏಕೆಂದರೆ ಫೈನಲ್​ ಪಂದ್ಯಕ್ಕಾಗಿ ಬ್ಯಾಟಿಂಗ್​ಗೆ ಸಹಕಾರಿಯಾಗುವಂತಹ ಪಿಚ್ ಅನ್ನು ಸಿದ್ಧಪಡಿಸುತ್ತಿರುವುದಾಗಿ ಎಂಎ ಚಿದಂಬರಂ ಮೈದಾನದ ಕ್ಯುರೇಟರ್ ತಿಳಿಸಿರುವುದಾಗಿ ಐಪಿಎಲ್​ ವೀಕ್ಷಕ ವಿವರಣೆಗಾರ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಹೀಗಾಗಿ ಅಂತಿಮ ಹಣಾಹಣಿಯಲ್ಲಿ …

Read More »

ಮಾಮೂಲಿ ಕೊಡದಿದ್ದಕ್ಕೆ ನನ್ನ ಗಂಡನನ್ನು ಪೊಲೀಸರೆ ಹೊಡೆದು ಸಾಯಿಸಿದ್ದಾರೆ : ಮೃತ ಆದಿಲ್ ಪತ್ನಿ ಆರೋಪ

ದಾವಣಗೆರೆ : ಒಂದು ತಿಂಗಳು ಮಾಮೂಲಿ ಕೊಡದಿದ್ದಕ್ಕೆ ನನ್ನ ಪತಿಯನ್ನು ಪೊಲೀಸರು ಹೊಡೆದು ಸಾಯಿಸಿದ್ದಾರೆ ಎಂದು ಮೃತ ಆದಿಲ್ ಪತ್ನಿ ಹೀನಾಬಾನು ಚನ್ನಗಿರಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಟ್ಕಾ ಆಡುತ್ತಿದ್ದ ಎಂದು ಆರೋಪಿಸಿ ಚೆನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ನಿನ್ನೆ ಆದಿಲ್ಲನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು.

Read More »

ಚಾಲಕ ಸಿಬ್ಬಂದಿಗಳಿಗೆ ಸಂಸ್ಥೆಯ ಖಡಕ್ ಎಚ್ಚರಿಕೆ

ಹುಬ್ಬಳ್ಳಿ, ಮೇ 24: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಚಾಲಕ ಚಾಲಕ ಕೊಡೆಯನ್ನು ಹಿಡಿದುಕೊಂಡು ವಾಹನ ಚಾಲನೆ ಮಾಡುವ ವಿಡಿಯೋ ಶುಕ್ರವಾರ ವೈರಲ್ ಆಗಿತ್ತು. ಸಿಬ್ಬಂದಿಗಳನ್ನು ಅಮಾನತು ಮಾಡಿ, ಸಂಸ್ಥೆ ಸ್ಪಷ್ಟೀಕರಣವನ್ನು ನೀಡಿತ್ತು. ಈಗ ಪ್ರಕಟಣೆಯೊಂದರಲ್ಲಿ ಪ್ರಿಯಾಂಗ ಎಂ., ವ್ಯವಸ್ಥಾಪಕ ನಿರ್ದೇಶಕರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಂಸ್ಥೆಯ ಎಲ್ಲಾ ಚಾಲನಾ ಸಿಬ್ಬಂದಿಗಳ ಗಮನಕ್ಕೆ ಎಂದು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.

Read More »