Breaking News

ರಾಜ್ಯ

ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಬಳ್ಳಾರಿ ಎಂಟ್ರಿಗೆ ಸುಪ್ರೀಂ ಕೋರ್ಟ್​ ಅಸ್ತು

ಬಳ್ಳಾರಿ: ಗಣಿನಾಡು ಎಂದೇ ಪ್ರಖ್ಯಾತಿ ಹೊಂದಿರುವ ಬಳ್ಳಾರಿ (Bellary) ಜಿಲ್ಲೆಗೆ ಪ್ರವೇಶಿಸಲು ನಿಷೇಧ ಹೇರಲಾಗಿತ್ತು. ಕಳೆದ ಒಂದೂವರೆ ದಶಕಗಳಿಂದ ಬಳ್ಳಾರಿಯತ್ತ ಸುಳಿಯದ ಹಾಲಿ ಶಾಸಕ ಜರ್ನಾದನ ರೆಡ್ಡಿಗೆ (Janardhan Reddy) ಇದೀಗ ಸುಪ್ರೀಂ ಕೋರ್ಟ್​ ಬಿಗ್ ರಿಲೀಸ್ ನೀಡಿದ್ದು, ಜಿಲ್ಲೆಯೊಳಗೆ ಪ್ರವೇಶಿಸಲು ಅನುಮತಿ ನೀಡಿದೆ.   ಅಕ್ರಮ ಗಣಿಗಾರಿಕೆ ಕೇಸ್​ನಲ್ಲಿ ಪ್ರಮುಖ ಆರೋಪಿಯಾಗಿದ್ದ ಜರ್ನಾದನ ರೆಡ್ಡಿಯನ್ನು 2011ರಲ್ಲಿ ಸಿಬಿಐ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆಂಧ್ರಪ್ರದೇಶದ ಚರ್ಲಪಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ …

Read More »

ಲೋಕಾಯುಕ್ತ SIT ಕೆಲಸಕ್ಕೆ ಅಡ್ಡಿಪಡಿಸಿದರೆ ಪೊಲೀಸರಿಂದ ಕ್ರಮ: ಜಿ. ಪರಮೇಶ್ವರ

ಬೆಂಗಳೂರು: ‘ಲೋಕಾಯುಕ್ತ ವಿಶೇಷ ತನಿಖಾ ದಳದ (ಎಸ್‌ಐಟಿ) ಕೆಲಸಕ್ಕೆ ಅಡ್ಡಿಪಡಿಸಿದರೆ ಅವರದ್ದೇ ಆದ ಕೆಲವು ಕ್ರಮಗಳನ್ನು ಪೊಲೀಸ್‌ನವರು ತೆಗೆದುಕೊಳುತ್ತಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ಎಚ್.ಡಿ. ಕುಮಾರಸ್ವಾಮಿ ಮತ್ತು ಎಡಿಜಿಪಿ ಚಂದ್ರಶೇಖರ್ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಚಂದ್ರಶೇಖರ್ ನೇತೃತ್ವದ ಎಸ್‌ಐಟಿಯನ್ನು ಕಾನೂನು ಪ್ರಕಾರವೇ ರಚಿಸಲಾಗಿದೆ. ಅವರು ಅವರ ಕೆಲಸ ಮಾಡ್ತಾರೆ. ಕೆಲಸಕ್ಕೆ ಅಡ್ಡಿಪಡಿಸಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ’ ಎಂದು ಎಚ್ಚರಿಕೆ ನೀಡಿದರು. ‘ಚಂದ್ರಶೇಖರ್ ಅವರು ತಮ್ಮ …

Read More »

ಯಜಮಾನಿಯರಿಗೆ ಬಿಗ್ ಶಾಕ್ : ಈ ಮಹಿಳೆಯರಿಗೆ ಬರಲ್ಲ ಜುಲೈ ತಿಂಗಳ `ಗೃಹಲಕ್ಷ್ಮಿ’ ಹಣ!

ಬೆಂಗಳೂರು: ರಾಜ್ಯ ಸರ್ಕಾರದಿಂದ ಆದಾಯ ತೆರಿಗೆ ಪಾವತಿಸುತ್ತಿದ್ದರೂ, ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳೂ 2000 ಪಡೆಯುತ್ತಿದ್ದಂತ 1.78 ಲಕ್ಷ ಯಜಮಾನಿಯರಿಗೆ ಹಣ ಪಾವತಿ ಮಾಡದಂತೆ ತಡೆ ಹಿಡಿಯಲಾಗಿದೆ. ಈ ಮೂಲಕ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಲಾಗಿದೆ.   ಗೃಹ ಲಕ್ಷ್ಮೀ ಯೋಜನೆಯ ನಿಯಮಾನುಸಾರ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಈ ಯೋಜನೆಯಡಿ ಪ್ರಯೋಜನ ಸಿಗುವುದಿಲ್ಲ. ಆದರೂ ಯೋಜನೆಗೆ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೂ …

Read More »

ಅ.1 ರಿಂದ ಏನೆಲ್ಲಾ ಬದಲಾವಣೆಯಾಗಲಿದೆ..?

ಅಕ್ಟೋಬರ್ 1 ರಿಂದ ಹಲವಾರು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಸಣ್ಣ ಉಳಿತಾಯ ಯೋಜನೆಗಳಿಂದ ಹಿಡಿದು ಆಧಾರ್ ಕಾರ್ಡ್ಗಳಿಗೆ ಸಂಬಂಧಿಸಿದ ನವೀಕರಣಗಳವರೆಗೆ, ಪರಿಣಾಮಕಾರಿ ಬಜೆಟ್ ನಿರ್ವಹಣೆಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡುವುದು ಅತ್ಯಗತ್ಯವಾಗಿದೆ. ಅ.1 ರಿಂದ ಏನೆಲ್ಲಾ ಬದಲಾವಣೆಯಾಗಲಿದೆ..?   ಬೋನಸ್ ಷೇರುಗಳು: ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಬೋನಸ್ ಷೇರುಗಳ ವ್ಯಾಪಾರವನ್ನು ಸುಗಮಗೊಳಿಸಲು ಹೊಸ ಚೌಕಟ್ಟನ್ನು ಜಾರಿಗೆ ತಂದಿದೆ. ಅಕ್ಟೋಬರ್ 1, 2024 ರಿಂದ …

Read More »

ಬಿಜೆಪಿಯಿಂದ ಮುಂದೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಈಗ ಚುನಾವಣೆ ನಡೆದರೆ ಬಿಜೆಪಿ 140 ಸ್ಥಾನ ಗೆಲ್ಲಲಿದೆ: ಯತ್ನಾಳ

ರಾಮದುರ್ಗ: ‘ಕಾಂಗ್ರೆಸ್‌ ಬಗ್ಗೆ ರಾಜ್ಯದ ಜನರಲ್ಲಿ ಈಗ ಆಕ್ರೋಶ ಮಡುಗಟ್ಟಿದೆ. ಈಗಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆ ನಡೆಸಿದರೆ, ಬಿಜೆಪಿ ಸುಮಾರು 140 ಸ್ಥಾನ ಗೆಲ್ಲಲಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು. ತಾಲ್ಲೂಕಿನ ಬಟಕುರ್ಕಿ ಗ್ರಾಮದಲ್ಲಿ ವಿಶ್ವ ಹಿಂದು ಪರಿಷತ್‌ ಹಾಗೂ ಭಜರಂಗ ದಳ ಶನಿವಾರ ಹಮ್ಮಿಕೊಂಡಿದ್ದ 60ನೇ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಅವರು ಮಾತನಾಡಿದರು.   ‘ಕಾಂಗ್ರೆಸ್‌ನಲ್ಲಿ ಎಲ್ಲರೂ ಸಿದ್ದರಾಮಯ್ಯ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಹಾಗಾಗಿ ಸಿ.ಎಂ ಸ್ಥಾನಕ್ಕಾಗಿ …

Read More »

ನೈತಿಕ ಹೊಣೆಹೊತ್ತು ಸಿ.ಎಂ ರಾಜೀನಾಮೆ ನೀಡಲಿ: ಎನ್.ರವಿಕುಮಾರ

ಎಂ.ಕೆ.ಹುಬ್ಬಳ್ಳಿ: ‘ಮುಡಾ ಹಗರಣದಲ್ಲಿ ಆರೋಪಿಯಾಗಿರುವ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹೇಳಿದರು. ಚನ್ನಮ್ಮನ ಕಿತ್ತೂರು ತಾಲೂಕಿನ ಕಾದರವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ಈ ಮುಂಚೆ ರಾಜೀನಾಮೆ ಕೇಳಿದಾಗ, ಪ್ರಕರಣ ದಾಖಲಾಗಿದೆಯಾ ಎಂದು ಪ್ರಶ್ನಿಸುತ್ತಿದ್ದರು. ಈಗ ಎಫ್‌ಐಆರ್ ದಾಖಲಾಗಿದೆ. ಈಗ್ಯಾಕೆ ರಾಜೀನಾಮೆ ಕೊಡಲು ಹಿಂಜರಿಯುತ್ತಿದ್ದೀರಾ? ತಪ್ಪು ಮಾಡದಿದ್ದರೆ, ಹೆದರುವ ಅವಶ್ಯಕತೆ ಇಲ್ಲ’ …

Read More »

ಜಾತಿ ವ್ಯವಸ್ಥೆ ಒಳ್ಳೆಯದು, ನಾನು ಯಾವ ಜಾತಿ ಎಂಬುದೇ ಗೊತ್ತಿರಲಿಲ್ಲ: ಯದುವೀರ್

ಉಡುಪಿ: ಚುನಾವಣೆಗೆ ಮೊದಲು ನನಗೆ ನಾನು ಯಾವ ಜಾತಿ ಎಂಬುದೇ ಗೊತ್ತಿರಲಿಲ್ಲ. ಮೈಸೂರು ರಾಜ ವಂಶಸ್ಥರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬುದು ನನಗೆ ತಿಳಿದಿರಲಿಲ್ಲ. ಆದರೆ ಚುನಾವಣೆಯ ಸಂದರ್ಭದಲ್ಲಿ ನಾನು ಹಿಂದುಳಿದ ವರ್ಗಗಳ ಅಭ್ಯರ್ಥಿ ಎಂಬ ವಿಚಾರದಿಂದ ನನ್ನ ಜಾತಿ ಗೊತ್ತಾಯಿತು ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.   ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ರವಿವಾರ (ಸೆ.29) ಕುಂಜಿಬೆಟ್ಟು ಶಾರದ ಕಲ್ಯಾಣ ಮಂಟಪದಲ್ಲಿ …

Read More »

ಸರಕಾರದ ನಿಯಂತ್ರಣದಿಂದ ದೇವಸ್ಥಾನಗಳು ಮುಕ್ತವಾಗಲಿ

ವೈದ್ಯಶಾಸ್ತ್ರ ಪರಿಣತಿ ಹೊಂದಿದವರಿಂದಲೇ ವೈದ್ಯಕೀಯ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುತ್ತೇವೆ. ಅಡುಗೆ ಬಲ್ಲವರಿಂದಲೇ ಅಡುಗೆ ಮಾಡಿಸಿಕೊಳ್ಳುತ್ತೇವೆ. ಅದರಂತೆಯೇ ಧಾರ್ಮಿಕ ವಿಧಿ ವಿಧಾನಗಳನ್ನು ಬಲ್ಲವರ ಮುಖೇನವೇ ಮಾಡಿಸಬೇಕು. ಲೆಕ್ಕಪರಿಶೋಧನೆಯನ್ನು ಬೇರೆ ಯಾವುದೋ ಹುದ್ದೆಯವರು ಮಾಡಲು ಸಾಧ್ಯವಿಲ್ಲ. ಲೆಕ್ಕಪರಿಶೋಧಕರೇ ಅದನ್ನು ನಿರ್ವಹಿಸಬೇಕು. ಹಾಗೆಯೇ ದೇವಸ್ಥಾನ/ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ನಿರ್ವಹಣೆಯನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ನಡೆಸಬೇಕೇ ಹೊರತು ಸರಕಾರ ಅಲ್ಲ. ಹಿಂದೂ ದೇವಸ್ಥಾನ, ಧಾರ್ಮಿಕ ಕೇಂದ್ರಗಳು ಸರಕಾರದ ಹಿಡಿತದಿಂದ ಹೊರಬರಬೇಕು ಎಂಬ ಆಂದೋಲನ ದಶಕಗಳಿಂದ …

Read More »

ಸಾಂಸ್ಕೃತಿಕ ನಗರಿಯಲ್ಲಿ ರೇವ್‌ ಪಾರ್ಟಿ: ಪೊಲೀಸ್‌ ದಾಳಿ, 50ಕ್ಕೂ ಹೆಚ್ಚು ಮಂದಿ ಬಂಧನ

ಮೈಸೂರು: ಖಾಸಗಿ ಜಮೀನಿನಲ್ಲಿ ನಡೆದ ರೇವ್ ಪಾರ್ಟಿಯ ಮೇಲೆ ಮೈಸೂರು ಪೊಲೀಸರು ದಾಳಿ ನಡೆಸಿದ್ದಾರೆ. ಒಟ್ಟು 50 ಕ್ಕೂ ಜನರನ್ನು ಪೊಲೀಸರು ಬಂಧಿಸಿದ್ದು, ಹಲವು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಂದರ್ಭದಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಮೈಸೂರಿನ ಹೊರವಲಯದಲ್ಲಿ ರೇವ್ ಪಾರ್ಟಿ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ಪಾರ್ಟಿ ಮೇಲೆ ದಾಳಿ ಮಾಡಿದ್ದಾರೆ. 50ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಎ.ಎಸ್.ಪಿ ಪಿ.ನಾಗೇಂದ್ರ ಹಾಗೂ ಡಿವೈಎಸ್ಪಿ ಕರೀಂ …

Read More »

ಬೈಕ್-ಲಾರಿ ಡಿಕ್ಕಿ : ಓರ್ವ ಸ್ಥಳದಲ್ಲಿ ಸಾವು

ಸಿರವಾರ: ಪಟ್ಟಣದ ಲಿಂಗಸೂರು ಮುಖ್ಯರಸ್ತೆಯ ಬಂಗ್ಲೆ ಹಳ್ಳದ ಸಮೀಪ ರವಿವಾರ (ಸೆ.29) ಅನ್ನಭಾಗ್ಯದ ಅಕ್ಕಿಯ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ರಾಯಚೂರಿನಿಂದ ಲಿಂಗಸೂರು ಕಡೆಗೆ ಹೊರಟಿದ್ದ ಅನ್ನಭಾಗ್ಯದ ಲಾರಿಯು ಬೈಕ್ ನಲ್ಲಿ ತೆರಳುತ್ತಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಕೆ.ಗುಡದಿನ್ನಿ ಗ್ರಾಮದ ಚನ್ನಪ್ಪ (27) ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡಿರುವ ಚನ್ನಬಸವ ಎಂಬುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಸ್ಥಳಕ್ಕೆ …

Read More »