Breaking News

ರಾಜ್ಯ

ಹನಿಟ್ರ್ಯಾಪ್ ವಿರುದ್ಧ ಸಮರಕ್ಕೆ ರಾಜಣ್ಣ ಸಿದ್ಧ

ಬೆಂಗಳೂರು, (ಮಾರ್ಚ್ 23): ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಚಿವ ರಾಜಣ್ಣ (KN Rajanna)  ವಿರುದ್ಧದ ಹನಿಟ್ರ್ಯಾಪ್​ಗೆ (honeytrap Case)ಯತ್ನಿಸಿದ ಕೇಸ್​ಗೆ ಟ್ವಿಸ್ಟ್ ಸಿಕ್ಕಿದೆ. ಸಚಿವ ರಾಜಣ್ಣ ಪುತ್ರ ಪರಿಷತ್ ಸದಸ್ಯ ರಾಜೇಂದ್ರ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿ ದಾಖಲೆ ಸಮೇತ ಹನಿಟ್ರ್ಯಾಪ್ ಪ್ರಕರಣದ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಮುಂದಿನ ವಾರ ಅಧಿಕೃತ ದೂರು ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಈಗಾಗಲೇ ಹನಿಟ್ರ್ಯಾಪ್ ಪ್ರಕರಣ ಸಂಬಂಧ ನ್ಯಾಯಾಂಗ ಹೋರಾಟ ನಡೆಸಲು …

Read More »

ಬಸವರಾಜ್ ಹೊರಟ್ಟಿ ರಾಜೀನಾಮೆ!

ಬೆಂಗಳೂರು/ಹುಬ್ಬಳ್ಳಿ, (ಮಾರ್ಚ್​ 23): ಕರ್ನಾಟಕದಲ್ಲಿ ಹನಿಟ್ರ್ಯಾಪ್​ ಪ್ರಕರಣ ಗದ್ದಲದ ಮಧ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಬಸವರಾಜ್‌ ಹೊರಟ್ಟಿ(basavaraj horatti) ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್​ ಅವರಿಗೆ ರವಾನಿಸಿದ್ದು, ಮೇ 1ರೊಳಗೆ ತಮ್ಮ ರಾಜೀನಾಮೆಯನ್ನು ಅಂಗೀಕರಿಸಿ ಸಭಾಪತಿ ಹುದ್ದೆಯಿಂದ ಮುಕ್ತಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸದಸ್ಯರ ವರ್ತನೆಯು ಸರಿಯಿಲ್ಲ. ಹಾಗಾಗಿ, ನಾನು ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ರಾಜೀನಾಮೆ …

Read More »

ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಬಿಎ ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಬಂದೀಗೌಡ ಬಡಾವಣೆಯಲ್ಲಿ ನಡೆದಿದೆ. ಸುಹಾನಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೈಸೂರಿನಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದ ಸುಹಾನಾ ನಿನೆ ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಬಂದಿದ್ದಾಳೆ. ಮಂಡ್ಯದ ಪೊಲೀಸ್ ಕ್ವಾಟ್ರೆಸ್ ಮನೆಯಿಂದ ಸ್ಕೂಟಿ ತೆಗೆದುಕೊಂಡು ಹೋದವಳು ನೇರವಾಗಿ ರೈಲ್ವೆ ಹಳಿ ಬಂದು ಸ್ಕೂಟಿ ನಿಲ್ಲಿಸಿದವಳೆ ಏಕಾಏಕಿ ರೈಲು ಹಳಿ ಬಳಿ ತೆರಳಿ ರೈಲಿಗೆ …

Read More »

ಹೆಚ್ಚು ಎಚ್ಚರಿಕೆಯಿಂದ ಸಾಮಾಜಿಕ ಜಾಲತಾಣಗಳನ್ನು ಬಳಸಿ!”

ಹೆಚ್ಚು ಎಚ್ಚರಿಕೆಯಿಂದ ಸಾಮಾಜಿಕ ಜಾಲತಾಣಗಳನ್ನು ಬಳಸಿ!” ಭಾಷೆ, ಧರ್ಮ, ಜಾತಿ ಅಥವಾ ಇತರ ಕಾರಣಗಳಿಂದ ದ್ವೇಷ ಮತ್ತು ಭೇದಭಾವವನ್ನು ಹರಡುವ ಪೋಸ್ಟ್‌ಗಳು ಅಥವಾ ಕಾಮೆಂಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದರೆ, ಅವುಗಳಿಗೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪೋಸ್ಟ್ ಮಾಡುವ ಮುನ್ನ, ನಿಮ್ಮ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳು ನಗರದಲ್ಲಿ ಶಾಂತಿಯನ್ನು ಕದಡಬಹುದೆಂದು ಗಮನದಲ್ಲಿಡಿ. ನಾಗರಿಕರೇ, ನಾವು ಎಲ್ಲರೂ ಸೇರಿ ನಮ್ಮ ನಗರವನ್ನು ಶಾಂತಿದಾಯಕ ಮತ್ತು ಸುರಕ್ಷಿತ ಸ್ಥಳವಾಗಿ ರೂಪಿಸೋಣ. ಯಾವುದೇ ಆಕ್ಷೇಪಗಳಿದ್ದಲ್ಲಿ, …

Read More »

ಎಸ್‌ಸಿ., ಎಸ್‌ಟಿ. ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸಿ: ಅಧಿಕಾರಿಗಳಿಗೆ ದಲಿತ ಮುಖಂಡರ ಆಗ್ರಹ..!!

ಎಸ್‌ಸಿ., ಎಸ್‌ಟಿ. ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸಿ: ಅಧಿಕಾರಿಗಳಿಗೆ ದಲಿತ ಮುಖಂಡರ ಆಗ್ರಹ..!! ಕಾಗವಾಡ: ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರ ಸಮಸ್ಯೆಗಳು ಬಹಳಷ್ಟಿದ್ದು, ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡಬೇಕೆಂದು ದಲಿತ ಮುಖಂಡರು ಸಮುದಾಯಗಳ ಕುಂದುಕೊರತೆ ಸಭೆಯಲ್ಲಿ ಒತ್ತಾಯಿಸಿದರು. ಶುಕ್ರವಾರ ದಿ. 21 ರಂದು ಪಟ್ಟಣದ ಬಸವ ನಗರದ ಅಂಬೇಡ್ಕರ ಸಭಾ ಭವನದಲ್ಲಿ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ, ಚುನಾಯಿತ ಸದಸ್ಯರ, ಪ.ಜಾ., ಪ.ಪಂ. ಮುಖಂಡರ, ಸಮಾಜ ಬಾಂಧವರ ಕುಂದುಕೊರತೆ …

Read More »

ಜೊಲ್ಲೆ ಎಜುಕೇಶನ ಸೊಸೈಟಿಯ 8 ವಿಧ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆ

ಚಿಕ್ಕೋಡಿ:ಜೊಲ್ಲೆ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ *ಬಸವಜ್ಯೋತಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ 1)ಹೃತೇಶ ನಾಯಿಕ 2)ಅಜಯ ನವಲೆ 3)ಓಂಕಾರ ತೋಡಕರ 4)ಅಭಿಷೇಕ ನಿಜಕರ 5)ಅಭಿಷೇಕ ಪಾರವತೆ 6)ಭರಮಣ್ಣ ಬಾಗಿ 7)ಕಿಶೋರ ಚೌಗಲಾ 8)ಜ್ಯೋತಿಬಾ ಶೇಡಬಾಳೆಯವರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಚಿಕ್ಕೋಡಿ:ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ನಮ್ಮ ಯುವಕರು ಭಾರತಾಂಬೆಯ ಸೇವೆ ಗೈಯಲು ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ‌. ತಾಯಿ ಭಾರತಿ …

Read More »

ಹನಿಟ್ರ್ಯಾಪ್​ ತಂಡವನ್ನು ಲಾಕ್ ಮಾಡಿದ ಸಚಿವ?

ಬೆಂಗಳೂರು, (ಮಾರ್ಚ್​ 20):  ರಾಜ್ಯ ರಾಜಕಾರಣದಲ್ಲಿ (Karnataka Poliitcs) ಹನಿಟ್ರ್ಯಾಪ್(Honeytrap) ಮತ್ತೆ ಸದ್ದು ಮಾಡತೊಡಗಿದ್ದು, ಇಂದು (ಮಾರ್ಚ್ 20) ವಿಧಾನಸಭೆ ಸದನ  (Assembly Session) ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ. ಶಾಸಕ ಯತ್ನಾಳ್​ ಸಿಡಿಸಿದ ಹನಿಟ್ರ್ಯಾಪ್​ ಬಾಂಬ್,​ ಸಂಚಲನವನ್ನೇ ಸೃಷ್ಟಿಸಿದೆ. ಸಹಕಾರಿ ಸಚಿವರಿಗೆ ಹನಿಟ್ರ್ಯಾಪ್ ಆಗಿದೆ ಎಂದು ಬಹಿರಂಗವಾಗಿಯೇ ಹೇಳಿಬಿಟ್ಟರು. ಬಳಿಕ ಖುದ್ದು ಸಹಕಾರಿ ಸಚಿವ ಕೆಎನ್ ರಾಜಣ್ಣ ಎದ್ದು ನಿಂತು ತಮ್ಮನ್ನು ಹನಿಟ್ರ್ಯಾಪ್​ನಲ್ಲಿ ಸಿಲುಕಿಸುವ ಯತ್ನ ನಡೆದಿತ್ತು …

Read More »

ಸಿಎಂ ಸಿದ್ದರಾಮಯ್ಯಗೆ ಹನಿಟ್ರ್ಯಾಪ್ ದಾಖಲೆ ನೀಡಿದ ರಾಜಣ್ಣ ಪುತ್ರ

ಬೆಂಗಳೂರು, ಮಾರ್ಚ್​ 22: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಚಿವ ರಾಜಣ್ಣ ವಿರುದ್ಧದ ಹನಿಟ್ರ್ಯಾಪ್​ಗೆ (honeytrap) ಯತ್ನಿಸಿದ ಕೇಸ್​ಗೆ ಟ್ವಿಸ್ಟ್ ಸಿಕ್ಕಿದೆ. ಸಚಿವ ರಾಜಣ್ಣ ಪುತ್ರ ಪರಿಷತ್ ಸದಸ್ಯ ರಾಜೇಂದ್ರ ಸಿಎಂ ಸಿದ್ದರಾಮಯ್ಯರನ್ನ (Siddaramaiah) ಭೇಟಿಯಾಗಿ ದಾಖಲೆ ಸಮೇತ ಹನಿಟ್ರ್ಯಾಪ್ ಪ್ರಕರಣದ ಮಾಹಿತಿ ನೀಡಿದ್ದಾರೆ. ಹನಿಟ್ರ್ಯಾಪ್ ಯತ್ನ ಸಂಬಂಧ ಎಲ್ಲಾ ಸಾಕ್ಷ್ಯಗಳನ್ನು ಸಿಎಂಗೆ ನೀಡಿದ್ದೇನೆ. ಸೋಮವಾರ ಅಥವಾ ಮಂಗಳವಾರ ಡಿಜಿ&ಐಜಿಪಿಗೆ ದೂರು ಸಲ್ಲಿಸುವೆ ಎಂದು ಹೇಳಿದ್ದಾರೆ. ನನಗೆ ಹನಿಟ್ರ್ಯಾಪ್ ನಡೆಸಲು ಯತ್ನಿಸಿದ್ದರು: ರಾಜೇಂದ್ರ ರಾಜಣ್ಣ ಸಿಎಂ ಸಿದ್ದರಾಮಯ್ಯ …

Read More »

ಬೆಂಗಳೂರಿನ ಮಳೆಗೆ ಮೊದಲ ಬಲಿ 3 ವರ್ಷದ ಕಂದಮ್ಮ

ಬೆಂಗಳೂರು, (ಮಾರ್ಚ್​ 23): ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದ ಪರಿಣಾಮ ರಕ್ಷಾ ಎಂಬ ಮೂರು ವರ್ಷದ ಹೆಣ್ಣು ಸಾವನ್ನಪ್ಪಿರುವ ಘಟನೆ ನಿನ್ನೆ (ಮಾರ್ಚ್ 22) ಬೆಂಗಳೂರಿನ ರಾತ್ರಿ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೀವನಹಳ್ಳಿಯಲ್ಲಿ ನಡೆದಿದೆ. ಮೂರು ವರ್ಷದ ರಕ್ಷಾ ತನ್ನ ತಂದೆ ಸತ್ಯ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಗಾಳಿ ಮಳೆಗೆ ರಸ್ತೆ ಬದಿ ಮರ ಬಿದ್ದಿದೆ. ಪರಿಣಾಮ ಬೈಕ್ ನಲ್ಲಿ ಮುಂಭಾಗದಲ್ಲಿ ಕುಳಿತ್ತಿದ್ದ ರಕ್ಷಾ ತಲೆ …

Read More »

ಕವಿತಾ ಹಣಮರಡ್ಡಿ ಗೆ ಕಿತ್ತೂರು ರಾಣಿ ಚನ್ನಮ್ಮ ಜಿಲ್ಲಾ ಯುವ ಪ್ರಶಸ್ತಿ ಪ್ರಧಾನ

ಅಥಣಿ : ನಗರದ ಕೆ ಎ ಲೋಕಾಪುರ ಪದವಿ ಮಹಾವಿದ್ಯಾಲಯದ ವಿಧ್ಯಾರ್ಥಿನಿ ಕುಮಾರಿ ಕವಿತಾ ಹಣಮರಡ್ಡಿ ಅವರು ಬಾಲ್ಯದಿಂದ ಕ್ರೀಡಾ ಕ್ಷೆತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತ ಬಂದಿದ್ದಾಳೆ. ಹಲವಾರು ಬಾರಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಜಿಲ್ಲೆ ರಾಜ್ಯ ಮತ್ತು ರಾಷ್ಟ ಮಟ್ಟದ ವೇದಿಕೆಗಳಲ್ಲಿ ಸಾಧನೆ ಮಾಡುತ್ತಾ ಬಹುಮಾನಗಳನ್ನು ಪಡೆದಿರುತ್ತಾಳೆ ಇವಳ ಕ್ರೀಡಾ ಕ್ಷೆತ್ರದ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ತಾಲೂಕಾ …

Read More »