ಬೆಂಗಳೂರು, ಆಗಸ್ಟ್ 05: ರಾಜ್ಯದಲ್ಲಿ ಆಗಸ್ಟ್ 21ರ ಬಳಿಕ ಖಾಸಗಿ ಶಾಲೆಗಳನ್ನು ಬಂದ್ ಮಾಡಲು ರುಪ್ಸಾ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ನಿರ್ಧಾರ ಮಾಡಲಾಗಿದೆ. ಹಾಗಾದರೆ ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಾಲಾ ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ಹಾಗೂ ಖಾಸಗಿ ಶಾಲೆಗಳ ಮೇಲಿನ ಅನ್ಯಾಯ ವಿರೋಧಿಸಿ ರುಪ್ಸಾ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಸರ್ಕಾರಕ್ಕೆ …
Read More »ಸಿಎಂ ಪತ್ನಿಗೆ ನೀಡಿದ್ದ 14 ನಿವೇಶನ ವಾಪಸ್ ಪಡೆಯಲು ಮನವಿ
ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಅವರಿಗೆ ನೀಡಿರುವ 14 ನಿವೇಶನಗಳನ್ನು ವಾಪಸ್ ಪಡೆಯಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಮುಡಾ ಆಯುಕ್ತ ರಘುನಂದನ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಹಾಂ, ‘ಮೈಸೂರಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464 ರಲ್ಲಿ 2001ರಲ್ಲಿಯೇ ಮುಡಾ ನಿವೇಶನಗಳನ್ನು ರಚಿಸಿ, ನಂತರದಲ್ಲಿ 19 ಫಲಾನುಭವಿಗಳಿಗೆ ಹಂಚಿದೆ. 2004ರಲ್ಲಿ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅದೇ …
Read More »ನಿರಂತರ ಮಳೆಯಿಂದಾಗಿ ಅಂಗನವಾಡಿಗಳಿಗೆ ರಜೆ ಘೋಷಣೆ
ನಿರಂತರ ಮಳೆಯಿಂದಾಗಿ ಅಂಗನವಾಡಿಗಳಿಗೆ ರಜೆ ಘೋಷಣೆ ನಿರಂತರ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರು ಕಿತ್ತೂರು, ಖಾನಾಪುರ, ಮತ್ತು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಾರೆ. ### ರಜೆ ಆದೇಶದ ವಿವರಗಳು – *ಅಂಗನವಾಡಿ ರಜೆ ಅವಧಿ*: – *ಕಿತ್ತೂರು ತಾಲೂಕು*: ಆಗಸ್ಟ್ 6 ರಿಂದ 8ರವರೆಗೆ. – *ಬೆಳಗಾವಿ ಗ್ರಾಮೀಣ ಮತ್ತು ಖಾನಾಪುರ ತಾಲೂಕುಗಳು*: ಆಗಸ್ಟ್ 6 ರಿಂದ 10ರವರೆಗೆ. ಈ ರಜೆ ಆದೇಶವನ್ನು …
Read More »ಮಾದಕ ವಸ್ತುಗಳ ಬಳಕೆ; 251 ಮಂದಿ ವಶಕ್ಕೆ ಪಡೆದ ಪೊಲೀಸರು
ಹುಬ್ಬಳ್ಳಿ: ವಾರದ ಹಿಂದಷ್ಟೇ ಮಾದಕ ವಸ್ತುಗಳ ಬಳಕೆ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಿ 255 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಹು-ಧಾ ಮಹಾನಗರ ಪೊಲೀಸರು, ಭಾನುವಾರ ಮತ್ತೊಮ್ಮೆ ಕಾರ್ಯಾಚರಣೆ ನಡೆಸಿ 251 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾದಕ ವಸ್ತು ಬಳಸುವ ಸಂಶಯಾಸ್ಪದ 467 ಮಂದಿಯನ್ನು ವಶಕ್ಕೆ ಪಡೆದು ಧಾರವಾಡ ಜಿಲ್ಲಾಸ್ಪತ್ರೆ, ಡಿಮಾನ್ಸ್ ಮತ್ತು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು, ಪರೀಕ್ಷೆ ಮಾಡಿಸಿದರು. 251 ಮಂದಿ ಮಾದಕ ವಸ್ತುಗಳನ್ನು ಬಳಸಿರುವುದು ವರದಿಯಾಗಿದ್ದು, …
Read More »ವಯನಾಡು ಭೂಕುಸಿತ: ದೇಣಿಗೆ ನೀಡಿದ ಕಬಡ್ಡಿ ಪಟು
ರಿಪ್ಪನ್‌ಪೇಟೆ: ಕೇರಳದ ವಯನಾಡಿನಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಭೂ ಕುಸಿತದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಇಲ್ಲಿನ ರಾಮಕೃಷ್ಣ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ, ಕಬಡ್ಡಿ ಪಟು ಆರ್. ಶ್ರೇಯಾ ಹಾಗೂ ಆಕೆಯ ಸೋದರ ಶ್ರವಂತ್ ₹ 15,000 ದೇಣಿಗೆ ನೀಡಿದ್ದಾರೆ. ಈಚೆಗೆ ಹೈದರಾಬಾದ್‌ನಲ್ಲಿ ನಡೆದ 14 ವರ್ಷದೊಳಗಿನ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಶ್ರೇಯಾ ಹಾಗೂ ಇದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶ್ರವಂತ್ ಅವರು ಗ್ರಾಮದ ಸವಿತಾ …
Read More »ತುಮರಿ | ಬಸ್ ಕಾಣದ ಗ್ರಾಮಗಳು; ಗ್ರಾಮಸ್ಥರ ಗೋಳು ಕೇಳುವವರಿಲ್ಲ..
ತುಮರಿ: ತಾಲ್ಲೂಕು ಕೇಂದ್ರದಿಂದ 55 ಕಿ.ಮೀ ದೂರದ ಕರೂರು ಹೋಬಳಿಯ ಹಲವು ಗ್ರಾಮಗಳು ಇಂದಿಗೂ ಬಸ್ ಸೌಲಭ್ಯವನ್ನೇ ಕಂಡಿಲ್ಲ. ಇಲ್ಲಿನ ಜನರು ಸಮೀಪದ ತುಮರಿ, ಕರೂರು, ನಿಟ್ಟೂರು, ಇಲ್ಲವೇ ಹೊಳೆಬಾಗಿಲಿಗೆ ಬಂದು ಬಸ್ ಹತ್ತಿ ಕೆಲಸ, ಕಾರ್ಯಗಳಿಗೆ ತೆರಳಬೇಕಿದೆ. ಕೆಲ ಗ್ರಾಮಗಳು ದಶಕಗಳಿಂದ ಬಸ್ ಸೌಲಭ್ಯ ಕಂಡಿಲ್ಲ. ಇನ್ನು ಕೆಲ ಗ್ರಾಮಗಳಲ್ಲಿ ಮೊದಲಿದ್ದ ಖಾಸಗಿ ಬಸ್‌ಗಳು ಕೋವಿಡ್, ಶಕ್ತಿ ಯೋಜನೆಯ ಪರಿಣಾಮ ಸೇವೆ ಸ್ಥಗಿತಗೊಳಿಸಿವೆ. ಸಿಗ್ಗಲು, ಕಳೋಡಿ, ಬೊಬ್ಬಿಗೆ, ಹೆರಾಟೆ …
Read More »ಯಾದಗಿರಿ ಪಿಎಸ್‌ಐ ಸಾವು; ಮೃತ ಪತ್ನಿಗೆ ಸರ್ಕಾರ ಉದ್ಯೋಗ, ಪರಿಹಾರ
ಬೆಂಗಳೂರು: ಯಾದಗಿರಿ ಪಿಎಸ್‌ಐ ಸಾವು ಪ್ರಕರಣದಲ್ಲಿ ಮೃತರ ಪತ್ನಿಗೆ ಸರ್ಕಾರದಿಂದ ಉದ್ಯೋಗ ಕೊಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ಪಿಎಸ್‌ಐ ಸಾವು ಪ್ರಕರಣವನ್ನು ಈಗಾಗಲೇ ಸಿಒಡಿಗೆ ನೀಡಲಾಗಿದೆ. ಅವರು ತನಿಖೆ ಶುರು ಮಾಡಿದ್ದಾರೆ. ಪೋಸ್ಟ್ ಮಾರ್ಟಮ್ ರಿಪೋರ್ಟ್ ನಿರೀಕ್ಷೆ ಮಾಡುತ್ತಿದ್ದೇವೆ. ಅದು ಬಂದ ಮೇಲೆ ಯಾಕೆ ಸಾವಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಾನು ಬುಧವಾರ ಮೃತ ಪಿಎಸ್‌ಐ ಮನೆಗೆ ಹೋಗಿ ಅವರ …
Read More »10 ಮಹಾನಗರ ಪಾಲಿಕೆ ಕಾರ್ಯ ಸ್ಥಗಿತ: ನಾಳೆ ಪಾಲಿಕೆ ನೌಕರರ ಸಭೆ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಆರೋಗ್ಯ ಸೌಲಭ್ಯವನ್ನು ಮಹಾನಗರ ಪಾಲಿಕೆ ನೌಕರರಿಗೂ ವಿಸ್ತರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಂದಿನ ಹೋರಾಟ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಮಂಗಳವಾರ(ಆ.6) ಖಾಸಗಿ ಹೋಟೆಲ್ನಲ್ಲಿ ತುರ್ತು ಸಭೆ ಆಯೋಜಿಸಿದೆ. ವೃಂದ ಮತ್ತು ನೇಮಕಾತಿ(ಸಿ ಆಯಂಡ್ ಆರ್) ನಿಯಾಮವಳಿಗೆ ತಿದ್ದುಪಡಿ, ಪಾಲಿಕೆ ನೌಕರರಿಗೆ ‘ಕರ್ನಾಟಕ ಆರೋಗ್ಯ ಸಂಜೀವಿನಿ’ ಆರೋಗ್ಯ ಸೌಲಭ್ಯ, ಕೆಜಿಐಡಿ ಮತ್ತು ಜಿಪಿಎಸ್ ಯೋಜನೆ ಅನುಷ್ಠಾನ, ಕ್ರೀಡಾಕೂಟಕ್ಕೆ …
Read More »ಉಪ್ಪಾರ ಸಮಾಜಮೀಸಲಾತಿ ಹೋರಾಟ ಕೇಂದ್ರ ಮಟ್ಟದಲ್ಲಿ ಒತ್ತಡ ಹಾಕುವ ಪ್ರಾಮಾಣಿಕಪ್ರಯತ್ನ:ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಕಳೆದ ಹಲವಾರು ವರ್ಷಗಳಿಂದ ಭಗೀರಥ ಉಪ್ಪಾರ ಸಮಾಜವು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದು, ಈ ಸಮಾಜಕ್ಕೆ ಸಿಗಬೇಕಿರುವ ಸರ್ಕಾರದ ಮೀಸಲಾತಿಯನ್ನು ದೊರಕಿಸಿಕೊಡುವ ಸಂಬಂಧ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೇ ನಾವು ಕೂಡಾ ಕೇಂದ್ರ ಮಟ್ಟದಲ್ಲಿ ಒತ್ತಡ ಹಾಕುವ ಪ್ರಾಮಾಣಿಕವಾದ ಪ್ರಯತ್ನ ಮಾಡುವುದಾಗಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸೋಮವಾರದಂದು ಪಟ್ಟಣದ ಹೊರವಲಯದಲ್ಲಿರುವ ಮೂಡಲಗಿ ಕ್ರಾಸ್‍ನಲ್ಲಿ ನೂತನವಾಗಿ ನಿರ್ಮಿಸಿದ ಮಹರ್ಷಿ ಭಗೀರಥ ಮೂರ್ತಿಯನ್ನು ಅನಾವರಣಗೊಳಿಸಿ …
Read More »ಹುಲಿ ಅಂತೆ ಹುಲಿ, ʻಡಿಬಾಸ್ʼ ರಿಲೀಸ್ ಆಗುವಾಗ ಇವನೇ ಸೆಕ್ಯೂರಿಟಿ ಎಂದು ಎಸಿಪಿ ಚಂದನ್‌ರನ್ನು ಟ್ರೋಲ್ ಮಾಡಿದ ಫ್ಯಾನ್ಸ್!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲುಪಾಲಾಗಿರುವನಟ ದರ್ಶನ್(Actor Darshan) ಹಾಗೂ ಆತನ ಗ್ಯಾಂಗ್ ನ್ಯಾಯಾಂಗ ಬಂಧನದಲ್ಲಿದೆ. ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿಬರುತ್ತಿದ್ದಕ್ಕೆ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಹಾಗೂ ವಿಜಯನಗರದ ಎಸಿಪಿ ಚಂದನ್ ಕುಮಾರ್ ಕಾರ್ಯಪ್ರವೃತ್ತರಾಗಿದ್ದರು. ಜೂನ್ 11ರಂದು ಬೆಳಗ್ಗೆ ಮೈಸೂರಿನಲ್ಲಿ ಎಸಿಪಿ ಚಂದನ್, ನಟ ದರ್ಶನ್‌ನನ್ನು ವಶಕ್ಕೆ ಪಡೆದರು.ಎಸಿಪಿ ಚಂದನ್ ಕಾರ್ಯದಕ್ಷತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ನಟ ದರ್ಶನ್ ಅಭಿಮಾನಿಗಳು …
Read More »
Laxmi News 24×7