Breaking News

ರಾಜಕೀಯ

ಹುಬ್ಬಳ್ಳಿ | ಕನ್ನಡ ಬೆಳೆಯಲು ಪುಸ್ತಕ ಓದಿ: ಎಸ್.ಎಲ್. ಭೈರಪ್ಪ

ಹುಬ್ಬಳ್ಳಿ: ‘ಪುಸ್ತಕ ಓದದಿದ್ದರೆ ಕನ್ನಡ ಬೆಳೆಯುವುದಿಲ್ಲ. ಪುಸ್ತಕ ಖರೀದಿಸಿ ಓದಬೇಕು’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಸಲಹೆ ನೀಡಿದರು. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಮತ್ತು ಸಾಹಿತ್ಯ ಪ್ರಕಾಶನವು ಸಾಹಿತ್ಯ ಭಂಡಾರದ ಮ. ಅನಂತಮೂರ್ತಿ ಅವರ ಪುಣ್ಯತಿಥಿ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪ್ರಕಾಶಕರಿಗೆ ಸನ್ಮಾನ, ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ನವೋದಯ ಕಾಲಘಟದಲ್ಲಿ ಹಲವಾರು ಕೃತಿಗಳು ಮೂಡಿಬಂದರೂ, ಸರಿಯಾದ ಪ್ರಕಾಶಕರು …

Read More »

ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ: ಒಬ್ಬರು ವಶಕ್ಕೆ

ಧಾರವಾಡ): ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ರಾಯಣ್ಣ ಪ್ರತಿಮೆಯ ಬಲಗೈ ವಿರೂಪಗೊಳಿಸಲಾಗಿದೆ. ಗ್ರಾಮಸ್ಥರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ‘ಕೃತ್ಯಕ್ಕೆ ಸಂಬಂಧಿಸಿದಂತೆ ಅಶೋಕ ಕಾಲವಾಡ (44) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೋಲೀಸರು ತಿಳಿಸಿದ್ದಾರೆ. ಬಟ್ಟೆ ಸುತ್ತಿ ಪ್ರತಿಮೆಯನ್ನು ಮುಚ್ಚಲಾಗಿದೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Read More »

ಜೈಲಿನಲ್ಲಿ ಟಿವಿ ಬೇಕು ಎಂದಿದ್ದ ದಾಸನಿಗೆ, ಕೇವಲ ದೂರ ‘ದರ್ಶನ’ ವಷ್ಟೇ ವೀಕ್ಷಿಸಲು ಅವಕಾಶ : ಖಾಸಗಿ ವಾಹಿನಿಗಳಿಗೆ ಬ್ರೇಕ್!

ಬಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್ ಸೆಲ್‌ಗೆ ಟಿವಿ ಸೌಲಭ್ಯ ನೀಡಲಾಗಿದೆ. ಟಿವಿಯಲ್ಲಿ ಕೇವಲ ಒಂದೇ ಒಂದು ಚಾನೆಲ್‌ ಬರಲಿದೆ. ಇನ್ನು ಖಾಸಗಿ ಚಾನೆಲ್‌ ನೋಡುವ ಮೂಲಕ ತನ್ನ ಸುದ್ದಿಗಳನ್ನು ತಿಳಿದುಕೊಳ್ಳಬೇಕು ಎಂಬ ನಟನ ಉದ್ದೇಶಕ್ಕೆ ನಿರಾಸೆಯಾಗಿದೆ.   ಹೌದು ಜೈಲಿನಲ್ಲಿರುವ ನಟ ದರ್ಶನ್‌ ತೂಗುದೀಪಗೆ ಟಿವಿ ನೋಡುವ ಸೌಲಭ್ಯ ಸಿಕ್ಕಿದೆ. ಹಲವು ದಿನಗಳ ಬೇಡಿಕೆಯ ಬಳಿಕ ಬಳ್ಳಾರಿ ಜೈಲನಲ್ಲಿ …

Read More »

30 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ

30 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ರಾಮನಗರ : 30 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಬೆಸ್ಕಾಂ AEE ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಬೆಸ್ಕಾಂ ಉಪಕಛೆರಿಯಲ್ಲಿ ನಡೆದಿದೆ. ಹೌದು ರಾಮನಗರ ತಾಲೂಕಿನ ಬಿಡದಿ ಬೆಸ್ಕಾಂ ಉಪಕಛೆರಿಯಲ್ಲಿ ಸಹಾಯಕ ಕಾರ್ಯ ಪಾಲಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್ ಪುಟ್ಟಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. …

Read More »

ಆರ್ ಬಿ ತಿಮ್ಮಾಪೂರ ಮೇಲೆ ಭೂ ಅಕ್ರಮ ಆರೋಪ; ಅರಣ್ಯ, ಕಂದಾಯ ಭೂಮಿ ಕಬಳಿಸಿದ್ರಾ? ಸಚಿವರು

ಆರ್ ಬಿ ತಿಮ್ಮಾಪೂರ ಮೇಲೆ ಭೂ ಅಕ್ರಮ ಆರೋಪ; ಅರಣ್ಯ, ಕಂದಾಯ ಭೂಮಿ ಕಬಳಿಸಿದ್ರಾ? ಸಚಿವರು ರಾಯಚೂರು: ರಾಜ್ಯದಲ್ಲಿ ಈಗಾಗಲೆ ಮುಡಾ ಹಗರಣ (MUDA Scam), ವಾಲ್ಮೀಕಿ ಹಗರಣದಿಂದ (Valmiki Board Scam Karnataka) ವಿವಾದಕ್ಕೆ ಸಿಲುಕಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಂದು ಹಗರಣದ ಆರೋಪ ಕೇಳಿಬಂದಿದೆ. ಸಚಿವ ಆರ್​​ ಬಿ ತಿಮ್ಮಾಪುರ (RB Timmapur) ಅವರ ವಿರುದ್ಧ ಕಂದಾಯ ಇಲಾಖೆ (Revenue Department ) ಹಾಗೂ ಅರಣ್ಯ …

Read More »

ಬಿಎಂಟಿಸಿ ಬಸ್‌ಗೆ ವಿಕಲಚೇತನ ಬಲಿ

ಬೆಂಗಳೂರು, ಸೆಪ್ಟೆಂಬರ್‌, 18: ಬೆಂಗಳೂರಿನ ಜೀವನಾಡಿ ಸಾರೊಗೆಯಲ್ಲೊಂದಾದ ಬಿಎಂಟಿಸಿ ಸುದ್ದಿಯಾಗುತ್ತಲೇ ಇದೆ. ಬಿಎಂಸಿಟಿ ಬಸ್‌ಗಳಿಗೆ ಹಲವರು ಬಲಿಯಾದ ಘಟನೆಗಳು ಈಗಾಗಲೇ ಸುಮಾರು ನಡೆದಿವೆ. ಇದರ ಬೆನ್ನಲ್ಲೇ ಇದೀಗ ಬಿಎಂಟಿಸಿ ಬಸ್‌ಗೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಗರದ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಡೆದಿದೆ.   ಅಪಘಾತಕ್ಕೆ ಕಾರಣ ಏನು.?: ಬಿಎಂಟಿಸಿ ಬಸ್ಸೊಂದು ನಗರದ ಯಶವತಪುರದಿಂದ ಮೆಜೆಸ್ಟಿಕ್‌ಗೆ ಬರುತ್ತಿದ್ದ ವೇಳೆಯೇ ಈ ಅಪಘಾತ ಸಂಭವಿಸಿದೆ. ಇನ್ನು ಘಟನೆಗೆ ಅತಿವೇಗದ ಚಾಲನೆಯೇ ಕಾರಣ ಎಂದು …

Read More »

ಕಿತ್ತೂರು ಉತ್ಸವ | ಈ ಬಾರಿ ವಿದೇಶದ ಮಹಿಳಾ ಕಲಿಗಳ ಕಾದಾಟ

ಬೆಳಗಾವಿ: ಮ್ಯಾಟ್‌ ಕುಸ್ತಿಯೇ ಜನಪ್ರಿಯವಾಗುತ್ತಿರುವ ಈ ಕಾಲಘಟ್ಟದಲ್ಲೂ, ಸಾಂಪ್ರದಾಯಿಕವಾಗಿ ಮಣ್ಣಿನ ಕಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ಕುಸ್ತಿ ಪಂದ್ಯಾವಳಿ ಆಯೋಜನೆಗೆ ತಯಾರಿ ನಡೆದಿದೆ. ಈ ಬಾರಿ ಕಿತ್ತೂರು ಉತ್ಸವದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ವಿದೇಶದ ಮಹಿಳಾ ಕಲಿಗಳು ಕಾದಾಟ ನಡೆಸಲಿದ್ದಾರೆ.   ಪ್ರತಿವರ್ಷ ಅಕ್ಟೋಬರ್‌ 23ರಿಂದ 25ರವರೆಗೆ ಕಿತ್ತೂರು ಉತ್ಸವ ವೈಭವದಿಂದ ನೆರವೇರುತ್ತದೆ. ಕೊನೆಯ ದಿನದಂದು ರಾಷ್ಟ್ರಮಟ್ಟದ ಪುರುಷರು ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ನಡೆಯುತ್ತಿತ್ತು. ಕಳೆದ ವರ್ಷ ಮೊದಲ ಬಾರಿ ನಡೆದಿದ್ದ …

Read More »

ಧಾರವಾಡ ಜಿಲ್ಲಾಸ್ಪತ್ರೆ: ನೋಂದಣಿಗೆ ಗಂಟೆಗಟ್ಟಲೆ ಕಾಯುವ ಸ್ಥಿತಿ

ಧಾರವಾಡ: ನಗರದ ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿಗಳು ನೋಂದಣಿ ಮಾಡಿಸಲು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಕೆಲವೊಮ್ಮೆ ಕೌಂಟರ್‌ ಕೇಂದ್ರದ ‌ಬಾಗಿಲಿನ ಹೊರಗೂ ರೋಗಿಗಳು ಸಾಲುಗಟ್ಟಿ ನಿಂತಿರುತ್ತಾರೆ. ಧಾರವಾಡ ಜಿಲ್ಲೆಯವರು ಮಾತ್ರವಲ್ಲ ಬೆಳಗಾವಿ ಜಿಲ್ಲೆಯ ಕಿತ್ತೂರು, ಬೈಲಹೊಂಗಲ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ದಾಂಡೇಲಿ ಭಾಗದವರು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಪ್ರತಿನಿತ್ಯ ಸುಮಾರು 1300 ಹೊರರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ರೋಗಿ ಜತೆಗೆ ಬಂದವರು ಚೀಟಿ …

Read More »

ಬೆಳಗಾವಿ ಗಣಪತಿ ವಿಸರ್ಜನಾ ಮೆರವಣಿಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿತ

ಬೆಳಗಾವಿ, ಸೆಪ್ಟೆಂಬರ್‌ 18: ರಾಜ್ಯದಲ್ಲಿ ಈ ಬಾರಿ ಗಣೇಶೋತ್ಸವದಲ್ಲಿ ಒಂದಾದ ಮೇಲೊಂದು ಅವಘಡಗಳು ನಡೆಯುತ್ತಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ಬಳಿಕ ಬೆಳಗಾವಿ ಗಣೇಶೋತ್ಸವ ವಿಸರ್ಜನೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಅದ್ಧೂರಿ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ಮೂವರು ಹಾಸ್ಟೆಲ್​ ವಿದ್ಯಾರ್ಥಿಗಳಿಗೆ ಚಾಕು ಇರಿದಿದ್ದಾರೆ. ಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ಮೆರವಣಿಗೆಯಲ್ಲಿ ಈ ಘಟನೆ ನಡೆದಿದ್ದು, ಸಾವಿರಾರು ಜನ ಸೇರಿದ್ದ ಮೆರವಣಿಗೆಯಲ್ಲಿ ಡಿ.ಜೆ ಸದ್ದಿಗೆ ಡ್ಯಾನ್ಸ್ ಮಾಡುವಾಗ ಕಾಲು …

Read More »

ನಟ ದರ್ಶನ್ ಬಂಧನವಾಗಿ 100 ದಿನ: ಜೈಲಿನಲ್ಲೇ ‘ದಾಸ’ ಶತದಿನೋತ್ಸವ

ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಬಂಧನಕ್ಕೆ ಒಳಗಾಗಿ 100 ದಿನ ಪೂರೈಸಿದೆ. ಜೂನ್ 11ರಂದು ಮೈಸೂರಿನಲ್ಲಿ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದರು. ಕೊಲೆ ಪ್ರಕರಣದ ವಿಚಾರಣೆಯ ನಂತರ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ವಿಚರಣಾಧೀನ ಕೈದಿಯಾಗಿದ್ದ ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ …

Read More »