Breaking News

ರಾಜಕೀಯ

ತಿರುಪತಿಗೆ ತೆರಳುವ ನಂದಿನಿ ತುಪ್ಪದ ಟ್ಯಾಂಕರ್‌ಗೆ ಜಿಪಿಎಸ್‌ ಕಣ್ಗಾವಲು!

ಬೆಂಗಳೂರು: ತಿರುಪತಿ (Thirupathi) ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಕೆ ನಿಲ್ಲಿಸಿ ಪಾವಿತ್ರ್ಯತೆಗೆ ಒತ್ತು ನೀಡುವ ಸಲುವಾಗಿ ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನ) ಈಗ ಮತ್ತಷ್ಟು ನಂದಿನಿ ತುಪ್ಪ ಪೂರೈಕೆಗಾಗಿ ಕೆಎಂಎಫ್ ಗೆ​​ ಮನವಿ ಮಾಡಿದ್ದರಿಂದ ನಂದಿನಿ ತುಪ್ಪದ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿದೆ. ಅದಕ್ಕಾಗಿ ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಮಾರ್ಗ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ತಿರುಮಲಕ್ಕೆ ಕಳುಹಿಸುವ ತುಪ್ಪದ ಟ್ಯಾಂಕರ್‌ಗಳಿಗೆ …

Read More »

ಆರ್‌ಎಸ್‌ಎಸ್‌ನಿಂದ ಲಿಂಗಾಯತರಲ್ಲಿ ಒಡಕು ಮೂಡಿಸುವ ಹುನ್ನಾರ: ಡಾ.ಜಾಮದಾರ

ಗದಗ: ಬಸವ ತತ್ವ ಒಪ್ಪದ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಲಿಂಗಾಯತರಲ್ಲಿಯೇ ಒಡಕು ಮೂಡಿಸುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ವಚನ ದರ್ಶನ ಕೃತಿ ಒಂದು ನಿದರ್ಶನ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಎಂ. ಜಾಮದಾರ ಆರೋಪಿಸಿದರು.   ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತರಿಂದ ಬರೆಸಿ, ಸಂಪಾದಿಸಿದ ಪುಸ್ತಕವನ್ನು ಆರೆಸ್ಸೆಸ್ ಪ್ರಕಾಶನ ಮಾಡಿದ್ದು ಏಕೆ? ಅಷ್ಟೇ ಅಲ್ಲ, ಈ ಪುಸ್ತಕ ಬೆಂಗಳೂರು, ವಿಜಯಪುರ, ಹಾವೇರಿ, …

Read More »

ತಜ್ಞರ ವರದಿಯಂತೆ ಅಣೆಕಟ್ಟು ನಿರ್ವಹಣೆ

ಕೊಪ್ಪಳ: ತುಂಗಭದ್ರಾ ಜಲಾಶಯ ನಿರ್ಮಾಣವಾಗಿ 68 ವರ್ಷ ಗತಿಸಿವೆ. ಪ್ರತಿ 50 ವರ್ಷಕ್ಕೆ ಡ್ಯಾಂ ಗೇಟ್‌ಗಳನ್ನು ಬದಲಿಸಬೇಕು. ಆದರೆ ತುಂಗಭದ್ರಾ ಡ್ಯಾಂ ಗೇಟ್‌ ನಿರ್ವಹಣೆ ಸರಿಯಾಗಿ ಮಾಡಿದ್ದರಿಂದ 68 ವರ್ಷಗಳ ಬಾಳಿಕೆ ಬಂದಿದೆ. ಗೇಟ್‌ ಮುರಿದ ಬಳಿಕ ತಜ್ಞರ ಸಮಿತಿ ರಚಿಸಿದ್ದು, ಅವರು ಕೊಟ್ಟಿರುವ ವರದಿ ಅನುಸಾರ ಮುಂದೆ ಗೇಟ್‌ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.   ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಡ್ಯಾಂ ಗೇಟ್‌ ಮುರಿದಾಗ …

Read More »

ರೂರು ಗುಡ್ಡ ಕುಸಿತ ಟ್ಯಾಂಕರ್‌ ಎಂಜಿನ್‌, ಸ್ಕೂಟಿ ಪತ್ತೆ

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಗಂಗಾವಳಿ ನದಿಯಲ್ಲಿ ಹುಗಿದು ಹೋಗಿದ್ದ ಇನ್ನಷ್ಟು ಅವಶೇಷಗಳು 3ನೇ ಹಂತದ ಕಾರ್ಯಾಚರಣೆಯಲ್ಲಿ ಪತ್ತೆಯಾಗುತ್ತಿದ್ದು, ರವಿವಾರ ನದಿ ಆಳದಲ್ಲಿ ಟ್ಯಾಂಕರ್‌ನ ಎಂಜಿನ್‌ ಮತ್ತು ಸ್ಕೂಟಿಯೊಂದು ದೊರೆತಿದೆ. ಶನಿವಾರ ಟ್ಯಾಂಕರ್‌ನ ಎರಡು ಚಕ್ರಗಳು ಪತ್ತೆಯಾಗಿದ್ದವು. ರವಿವಾರ ಮುಂಜಾನೆ ಗೋವಾದಿಂದ ಬಂದ ಡ್ರೆಜ್ಜಿಂಗ್‌ ಮಷಿನ್‌ ಜತೆ ಮುಳುಗು ತಜ್ಞ ಈಶ್ವರ ಮಲ್ಪೆ ಕೂಡ ಕಾರ್ಯಾಚರಣೆ ನಡೆಸಿದರು. ಈ ವೇಳೆ ಈಶ್ವರ ಅವರು ಸ್ಕೂಟಿ ಇರುವುದನ್ನು ಪತ್ತೆ ಮಾಡಿದರೆ, …

Read More »

ಮದ್ಯಸೇವಿಸಿ ತೂರಾಡುತ್ತಾ ಐಸಿಯುಗೆ ಬಂದ ಪಿಜಿ ವೈದ್ಯ!

ಮಂಗಳೂರು: ಪಿಜಿ ವೈದ್ಯನೊಬ್ಬ ಕಂಠಪೂರ್ತಿ ಮದ್ಯ ಸೇವಿಸಿ ಎಲ್ಲೋ ಬಿದ್ದು, ಮಣ್ಣಿನಿಂದ ಆವೃತವಾಗಿದ್ದ ಬಟ್ಟೆಯಲ್ಲೇ ಆಸ್ಪತ್ರೆಯ ಐಸಿಯು ಪ್ರವೇಶಿಸಿರುವ ಘಟನೆ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಆಸ್ಪತ್ರೆಯ ಐಸಿಯುನಲ್ಲಿ ಆತನನ್ನು ನೋಡಿದ ಅಲ್ಲಿದ್ದ ರೋಗಿಯ ಕಡೆಯವರು ಆಕ್ರೋಶ ವ್ಯಕ್ತಪಡಿಸಿ, ಪೊಲೀಸರನ್ನು ಕರೆಯುವುದಾಗಿಯೂ ಹೇಳಿದರು. ಕೊನೆಗೆ ಆಸ್ಪತ್ರೆಯ ಭದ್ರತ ವಿಭಾಗದ ಸಿಬಂದಿ ಆತನನ್ನು ಹೊರಗೆ ಕಳುಹಿಸಿದ್ದಾರೆ. ಇಡೀ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Read More »

ನವೆಂಬರ್‌-ಡಿಸೆಂಬರ್‌ನಲ್ಲಿ ದೇಶದಲ್ಲಿ 35 ಲಕ್ಷ ಮದುವೆ

ನವದೆಹಲಿ: ಮುಂಬರಲಿರುವ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಮದುವೆಗಳಿಗಾಗಿ ಬರೋಬ್ಬರಿ 4.55 ಲಕ್ಷ ಕೋಟಿ ರೂ.ಖರ್ಚಾಗಲಿದೆ ಎಂದು ಪ್ರಭುದಾಸ್‌ ಲಿಲ್ಲದೇರ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಅಲ್ಲದೇ, ಈ 2 ತಿಂಗಳಲ್ಲಿ ಬರೋಬ್ಬರಿ 35 ಲಕ್ಷ ಮದುವೆಗಳು ನಡೆಯಲಿದ್ದು, 2023ರ ಇದೇ ತಿಂಗಳುಗಳಲ್ಲಿ 32 ಲಕ್ಷ ಮದುವೆ ದೇಶಾದ್ಯಂತ ನಡೆದಿತ್ತು ಎಂದೂ ತಿಳಿಸಿದೆ. “ಬ್ಯಾಂಡ್‌, ಬಾಜಾ, ಭಾರತ್‌ ಆಯಂಡ್‌ ಮಾರ್ಕೆಟ್ಸ್‌’ ಶೀರ್ಷಿಕೆ ಅನ್ವಯ ಸಂಸ್ಥೆ ಈ ವರದಿಯನ್ನು …

Read More »

Bigg Boss 18: ಬಿಗ್‌ ಬಾಸ್‌ ಆರಂಭಕ್ಕೆ ಡೇಟ್‌ ಫಿಕ್ಸ್; ನಿರೂಪಣೆಗೆ ರೆಡಿಯಾದ ಸಲ್ಮಾನ್

ಮುಂಬಯಿ: ಹಿಂದಿ ಬಿಗ್‌ ಬಾಸ್‌-18 (Bigg Boss -18) ಕಾರ್ಯಕ್ರಮ ಆರಂಭಕ್ಕೆ ಡೇಟ್‌ ಫಿಕ್ಸ್‌ ಆಗಿದೆ. ಆ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ. ಸಲ್ಮಾನ್‌ ಖಾನ್‌ (Salman Khan) ನಡೆಸಿಕೊಡುವ ಬಿಗ್‌ ಬಾಸ್‌ ಕಾರ್ಯಕ್ರಮದ ಪ್ರೋಮೊ ಇತ್ತೀಚೆಗೆ ರಿಲೀಸ್‌ ಆಗಿತ್ತು. “ಬಿಗ್‌ ಬಾಸ್‌ ನೋಡಲಿದ್ದಾರೆ ಮನೆಯವರ ಭವಿಷ್ಯ, ಈಗ ಆಗಲಿದೆ ಸಮಯದ ತಾಂಡವ್”‌ ಎಂದು ಸಲ್ಮಾನ್‌ ಖಾನ್‌ ಅವರ ಹಿನ್ನೆಲೆ ಧ್ವನಿಯಲ್ಲಿ ಹೊಸ ಸೀಸನ್‌ನ ಲೋಗೋ ರಿವೀಲ್‌ ಆಗಿತ್ತು. ಶೋನಲ್ಲಿ ಈ …

Read More »

ಕಾಂಗ್ರೆಸ್ ನ ರಾಜಭವನದ ದುರ್ಬಳಕೆಯ ಬಗ್ಗೆ ದೊಡ್ಡ ಇತಿಹಾಸವೇ ಇದೆ‌: ಶಾಸಕ ಟೆಂಗಿನಕಾಯಿ

ಹುಬ್ಬಳ್ಳಿ: ಬಿಜೆಪಿ ರಾಜಭವನವನ್ನು ಯಾವುದೇ ರೀತಿಯಿಂದ ದುರ್ಬಳಕೆ ಮಾಡಿಕೊಂಡಿಲ್ಲ. ಆದರೆ‌ ಕಾಂಗ್ರೆಸ್ ರಾಜಭವನವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ದೊಡ್ಡ ಇತಿಹಾಸವೇ ಇದೆ‌ ಎಂದು ಶಾಸಕ‌ ಮಹೇಶ ಟೆಂಗಿನಕಾಯಿ‌ (Mahesh Tenginakai) ಆರೋಪಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ದೂರುಗಳು ಬಂದ ಹಿನ್ನೆಲೆಯಲ್ಲಿ‌ ಪರಿಶೀಲಿಸಲು, ಮಾಹಿತಿ ಪಡೆಯಲು‌ ರಾಜ್ಯಪಾಲರು‌ ಮುಂದಾಗಿದ್ದಾರೆ ಇದರಲ್ಲಿ‌ತಪ್ಪೇನಿದೆ. ಅಂತಹ ಅಧಿಕಾರ‌ ರಾಜ್ಯಪಾಲರಿಗಿದೆ ಎಂದರು. ಮುಡಾ, ವಾಲ್ಮೀಕಿ ನಿಗಮದಲ್ಲಿ‌ ಹಗರಣ ಆಗಿಲ್ಲವೆಂದರೆ ಸಿಎಂಗೆ ಭಯ ಯಾಕೆ. ಆರೋಪದ ಹಿನ್ನೆಲೆಯಲ್ಲಿ …

Read More »

ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್‌ಬಾಸ್‌ ಮನೆಯ ಫೋಟೋಸ್ ವೈರಲ್

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ-11 (Bigg Boss Kannada-11) ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಮುಂದಿನ ವಾರದಿಂದಲೇ ದೊಡ್ಮನೆ ಆಟ ಅದ್ಧೂರಿ ಆಗಿಯೇ ಆರಂಭಗೊಳ್ಳಲಿದೆ. ಕಿಚ್ಚ ಸುದೀಪ್ (Kiccha Sudeep) ಟಿಪ್‌ ಟಾಪ್‌ ಆಗಿಯೇ ಬಿಗ್‌ ಬಾಸ್‌ ಮನೆಯ ʼಕಿಂಗ್‌ʼ ಆಗಿ ಈ ಬಾರಿಯೂ ಕಾಣಿಸಿಕೊಳ್ಳಲಿದ್ದಾರೆ. ಅವರೇ ಶೋ ನಡೆಸಿಕೊಡಲಿದ್ದಾರೆ ಎನ್ನುವ ವಿಚಾರ ಬಹಿರಂಗವಾದ ಬಳಿಕ ಪ್ರೇಕ್ಷಕರ ಕುತೂಹಲ ಸೀಸನ್‌ -11ರ ಮೇಲೆ ಹೆಚ್ಚಾಗಿದೆ. ಕಲರ್ಸ್‌ ಕನ್ನಡ …

Read More »

ಅತ್ಯಾಚಾರದಂತಹ ಕೃತ್ಯಕ್ಕೆ ಕೋಮುಬಣ್ಣ ಬಳಿಯುವ ಕೆಲಸವಾಗಬಾರದು

ಮುಧೋಳ : ಅತ್ಯಾಚಾರದಂತಹ ಹೇಯ ಕೃತ್ಯದಲ್ಲಿ ಯಾವುದೇ ಧರ್ಮದವರು ಭಾಗಿಯಾದರೂ ದೊಡ್ಡ ಅಪರಾಧ. ಅಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಸಿಬೇಕು ಎಂದು ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಸರ್ಕಾರಕ್ಕೆ ಒತ್ತಾಯಿಸಿದರು. ನಗರದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ಅಲ್ಪಸಂಖ್ಯಾತ ಸೌಹಾರ್ದ ಸಂಘಟನೆಗಳ ಒಕ್ಕೂಟದ‌ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ‌ ಪಾಲ್ಗೊಂಡು ತಹಸೀಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಅತ್ಯಾಚಾರದಂತಹ ಪ್ರಕರಣಗಳನ್ನು ಮುಂದಿಟ್ಟುಕೊಂಡು ಕೆಲವು ಕೋಮುವಾದ ಸಂಘಟನೆಗಳು ಸಮಾಜದಲ್ಲಿ …

Read More »