Breaking News
Home / ರಾಜಕೀಯ (page 331)

ರಾಜಕೀಯ

ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ: ಸೇನೆಯ ಕರ್ನಲ್, ಮೇಜರ್ ಸೇರಿ ಮೂವರು ಹುತಾತ್ಮ

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ವೇಳೆ ಭಾರತೀಯ ಸೇನೆಯ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಸೇನೆಯ ಮೇಜರ್, ಕರ್ನಲ್​ ಹಾಗೂ ಡಿಎಸ್​​ಪಿ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಕಾಶ್ಮೀರ ಪೊಲೀಸರು, ಅನಂತ್​ನಾಗ್​ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಭಾರತೀಯ …

Read More »

ಹನಿಟ್ರ್ಯಾಪ್ ಕೇಸ್​ನ ಕಿಂಗ್ ಪಿನ್ ಆಗಿದ್ದ ಮಹಿಳೆನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ.

ಬೆಂಗಳೂರು: ಮಧ್ಯಪ್ರದೇಶದ ಇಂದೋರ್​ನಲ್ಲಿ ಹನಿಟ್ರ್ಯಾಪ್ ಕಿಂಗ್ ಪಿನ್ ಎಂದೇ ಕುಖ್ಯಾತಿಗೊಂಡು ಕೆಲವು ತಿಂಗಳುಗಳಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಕಳ್ಳತನ ಪ್ರಕರಣದಲ್ಲಿ ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರತಿ ದಯಾಳ್ ಬಂಧಿತ ಆರೋಪಿ.‌ ಕಳ್ಳತನ ಮಾಡಿದ‌ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಜಯವಾಡದಲ್ಲಿ ಈಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ. ಈಕೆ ಕಳೆದ ಒಂದು ತಿಂಗಳ ಹಿಂದಷ್ಟೇ ಆರತಿ ನಗರಕ್ಕೆ ಬಂದಿದ್ದಳು. ಪಿಜಿಯೊಂದರಲ್ಲಿ ವಾಸವಾಗಿದ್ದ ವೇಳೆ ರೂಮ್​ಮೇಟ್​ಳ ಚಿನ್ನದ ಆಭರಣ ಕದ್ದು ಎಸ್ಕೇಪ್‌ ಆಗಿದ್ದಳು. …

Read More »

ಐಎಎಸ್ ಆಧಿಕಾರಿ ರೋಹಿಣಿ ಸಿಂಧೂರಿಗೆ ಆರು ತಿಂಗಳ ನಂತರ ಹುದ್ದೆ: ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಆರು ತಿಂಗಳ ನಂತರ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹುದ್ದೆಗೆ ನಿಯುಕ್ತಿ ಮಾಡಲಾಗಿದೆ. ಇವರು ಸೇರಿದಂತೆ ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರು ತಿಂಗಳ ಹಿಂದೆ ಐಪಿಎಸ್‌ ಅಧಿಕಾರಿ ಡಿ.ರೂಪ ಮತ್ತು ರೋಹಿಣಿ ಸಿಂಧೂರಿ ನಡುವೆ ಕೆಲ ವಾದ – ಪ್ರತಿವಾದಗಳು ನಡೆದಿದ್ದವು. ಅವರೊಂದಿಗಿನ ವಿವಾದದ ಬಳಿಕ ಯಾವುದೇ ಹುದ್ದೆ ತೋರಿಸದೇ ವರ್ಗಾವಣೆ ಮಾಡಿದ್ದ ರೋಹಿಣಿ ಸಿಂಧೂರಿ ಅವರಿಗೆ ಈಗ ಕಡೆಗೂ …

Read More »

ನಿಜಾಮುದ್ದೀನ್​​ ಎಕ್ಸ್​ಪ್ರೆಸ್​​ ರೈಲಿನಲ್ಲಿ ವಿಷಾಹಾರ ಸೇವಿಸಿ ಅಸ್ವಸ್ಥರಾಗಿದ್ದ ಯುವಕರು ಚೇತರಿಸಿಕೊಂಡಿದ್ದಾರೆ

ಬೆಳಗಾವಿ : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಸ್ವಸ್ಥಗೊಂಡಿದ್ದ ಉತ್ತರ ಪ್ರದೇಶ ರಾಜ್ಯದ ಝಾನ್ಸಿ ಮೂಲದ 8 ಜನ ಯುವಕರು ಚೇತರಿಸಿಕೊಂಡಿದ್ದಾರೆ ಎಂದು ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ತಿಳಿಸಿದ್ದಾರೆ. ಈ ಘಟನೆ ಹಿಂದೆ ಚಾಕೊಲೇಟ್ ಗ್ಯಾಂಗ್ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹೌದು ಸೆ. 11ರಂದು ರಾತ್ರಿ ಗೋವಾದಿಂದ ಉತ್ತರಪ್ರದೇಶಕ್ಕೆ ಹೋಗುತ್ತಿದ್ದ ನಿಜಾಮುದ್ದೀನ್ ಎಕ್ಸ್​ಪ್ರೆಸ್ ರೈಲಿನಲ್ಲಿ ವಿಷಾಹಾರ ಸೇವಿಸಿ 8 ಯುವಕರು ಬೆಳಗಾವಿ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಅಸ್ವಸ್ತಗೊಂಡಿದ್ದರು. ತಕ್ಷಣವೇ …

Read More »

ಸರ್ಕಾರಕ್ಕೆ ಧಮ್ಮು, ತಾಕತ್ತು ಎರಡೂ ಇಲ್ಲ: H.D.K.

ಬೆಂಗಳೂರು: ಮಣ್ಣಿನ ಮಕ್ಕಳಿಂದ‌ ಕಾವೇರಿಗೆ ದ್ರೋಹ ಆಗಿರೋದು ಅಂತ ಹೇಳಿದ್ದಾರೆ. ಎರಡು ವರ್ಷ ಸಿಎಂ ಆಗಿ ಮನೆಗೆ ಹೋಗುವಾಗ ಸಂಬಳ ಕೊಡಲು ವೆಸ್ಟ್‌ ಬೆಂಗಾಲ್‌ ಪಿಯರ್‌ಲೆಸ್‌ನಿಂದ ಸಾಲ ತಂದು ರಾಜ್ಯವನ್ನು ಅಡ ಇಟ್ಟ ಮಹಾನುಭಾವ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಾಜಿ ಸಿಎಂ ವೀರಪ್ಪ ಮೊಯ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೆಪಿ ನಗರದ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತಮಾಡಿದ ಅವರು, ನಿನ್ನೆಯ ದಿನ ನೆಲಮಂಗಲದಲ್ಲಿ ರಾಜ್ಯದ ಮಾಜಿ …

Read More »

ಕಾವೇರಿ ಜಲಾನಯನ ಪ್ರದೇಶದ ಜನರಿಗೆ, ರೈತರಿಗೆ ಸಂಕಷ್ಟ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಾವೇರಿ : ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿಗಳು ಇಂದು ಸರ್ವಪಕ್ಷ ಸಭೆ ಕರೆದಿದ್ದರು. ಇದಕ್ಕೆ ಹೋಗಲು ನನಗೆ ತಡರಾತ್ರಿ ಆಹ್ವಾನ‌ ಬಂದಿತ್ತು. ಹೀಗಾಗಿ ಅದಕ್ಕೆ ಅಟೆಂಡ್ ಮಾಡೊಕೆ ಆಗಿಲ್ಲ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಹಾವೇರಿ ಜಿಲ್ಲಾ ಸವಣೂರಲ್ಲಿ ಮಾತನಾಡಿದ ಅವರು, ನಾನು ಇಂದು ಪ್ರವಾಸದಲ್ಲಿದ್ದೇನೆ. ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. ಈಗಾಗಲೇ 15,16 ಟಿಎಂಸಿಯ 15,000 ಕ್ಯೂಸೆಕ್​ ನೀರು ಹರಿಸಿದ್ದಾರೆ. ಮತ್ತೆ ನೀರು ಬಿಡಿ ಎನ್ನುವುದು …

Read More »

ವಿಶ್ವ ವಿಖ್ಯಾತ ಹಂಪಿ ಉತ್ಸವ ಮುಂದೂಡಿಕೆ: ಫೆಬ್ರವರಿಯಲ್ಲಿ ನಡೆಸಲು ಸರ್ಕಾರ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಹಂಪಿ ಉತ್ಸವ ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ವಿಜಯನಗರ – ಬಳ್ಳಾರಿ ಸೇರಿದಂತೆ ಬಹುತೇಕ ಜಿಲ್ಲೆಗಳ ಹೆಚ್ಚಿನ ಸಂಖ್ಯೆಯ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಹೀಗಾಗಿ ಇಂತಹ ಸ್ಥಿತಿಯಲ್ಲಿ ಉತ್ಸವ …

Read More »

ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ ಮೀಸಲಾತಿ ಕೈತಪ್ಪಲ್ಲ: ಎಸ್.ಎಂ. ಜಾಮದಾರ

ಬೆಳಗಾವಿ: ಲಿಂಗಾಯತ ಧರ್ಮಕ್ಕೆ ಸಾಂವಿಧಾ‌ನಿಕ ಮಾನ್ಯತೆ ಸಿಕ್ಕರೆ, ಈಗಿರುವ ಮೀಸಲಾತಿ ಕೈತಪ್ಪುತ್ತದೆ ಎಂದು ಕೆಲವರು ಹೇಳುತ್ತಿರುವುದು ಶುದ್ಧ ಸುಳ್ಳು. ನಾವು ಪ್ರತ್ಯೇಕ ಧರ್ಮದ ಹೋರಾಟ ಆರಂಭಿಸಿದ ಮೊದಲ ದಿನದಿಂದಲೂ ತಮ್ಮ ಅಸ್ತಿತ್ವ ಮತ್ತು ಸ್ವಾರ್ಥಕ್ಕಾಗಿ ಈ ರೀತಿ ಅಪಪ್ರಚಾರ ಮಾಡುತ್ತಲೇ ಇದ್ದಾರೆ, ಇದು ಅನ್ಯಾಯ ಎಂದು ಜಾಗತಿಕ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಕಿಡಿಕಾರಿದರು. ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ರೈಸ್ತರು, ಮುಸ್ಲಿಮರು, ಜೈನರು ಸೇರಿದಂತೆ ಇತರ …

Read More »

ಕಾವೇರಿಗಾಗಿ ಭಿಕ್ಷಾ ಪಾತ್ರೆ ಹಿಡಿದು ರಕ್ಷಣಾವೇದಿಕೆಯಿಂದ ವಿಶೇಷ ಪ್ರತಿಭಟನೆ

ಮಂಡ್ಯ : ಮತ್ತೆ ತಮಿಳುನಾಡಿಗೆ ನೀರು ಬಿಡಲು ನಿಯಂತ್ರಣ ಸಮಿತಿ ಸೂಚನೆ ಹಿನ್ನೆಲೆಯಲ್ಲಿ ಮಂಡ್ಯದ ಸಂಜಯ ವೃತ್ತದಲ್ಲಿ ವಿಶೇಷವಾಗಿ ಭಿಕ್ಷೆ ಪಾತ್ರೆ ಹಿಡಿದು ರೈತರು ಪ್ರತಿಭಟನೆ ನಡೆಸಿದರು. ಹರಕಲು ಅಂಗಿ, ಚಡ್ಡಿ ಧರಿಸಿ, ಕೆಲವರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು. ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ವಿನೂತನ ಹೋರಾಟ ನಡೆದಿದ್ದು, ಮತ್ತೆ ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯದ ಜನರು ಭಿಕ್ಷೆ ಎತ್ತಬೇಕಾಗುತ್ತೆ ಎಂದು ಅಣಕಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಈಗಾಗಲೇ ನಮ್ಮನ್ನ …

Read More »

ಕಾವೇರಿಗಾಗಿ ಭಿಕ್ಷಾ ಪಾತ್ರೆ ಹಿಡಿದು ರಕ್ಷಣಾವೇದಿಕೆಯಿಂದ ವಿಶೇಷ ಪ್ರತಿಭಟನೆ

ಮಂಡ್ಯ : ಮತ್ತೆ ತಮಿಳುನಾಡಿಗೆ ನೀರು ಬಿಡಲು ನಿಯಂತ್ರಣ ಸಮಿತಿ ಸೂಚನೆ ಹಿನ್ನೆಲೆಯಲ್ಲಿ ಮಂಡ್ಯದ ಸಂಜಯ ವೃತ್ತದಲ್ಲಿ ವಿಶೇಷವಾಗಿ ಭಿಕ್ಷೆ ಪಾತ್ರೆ ಹಿಡಿದು ರೈತರು ಪ್ರತಿಭಟನೆ ನಡೆಸಿದರು. ಹರಕಲು ಅಂಗಿ, ಚಡ್ಡಿ ಧರಿಸಿ, ಕೆಲವರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು. ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ವಿನೂತನ ಹೋರಾಟ ನಡೆದಿದ್ದು, ಮತ್ತೆ ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯದ ಜನರು ಭಿಕ್ಷೆ ಎತ್ತಬೇಕಾಗುತ್ತೆ ಎಂದು ಅಣಕಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಈಗಾಗಲೇ ನಮ್ಮನ್ನ …

Read More »