ಹಾವೇರಿ : ಹಾವೇರಿನಗರದ ಶಿವಶಕ್ತಿ ಪ್ಯಾಲೆಸ್ ಲಾಡ್ಜ್ ನಲ್ಲಿ ದಾಖಲೆ ಇಲ್ಲದ 58 ಲಕ್ಷ ರೂ ಹಣ ಪತ್ತೆಯಾಗಿದೆ . ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಪೊಲೀಸರು ದಾಖಲೆ ಇಲ್ಲದ ಹಣ ಇಟ್ಟುಕೊಂಡಿದ್ದ ನಾಲ್ವರನ್ನು ವಶಕ್ಕೆ ಪಡೆದು ತನಿಖೆಯನ್ನ ಆರಂಭಿಸಿದ್ದಾರೆ . ಯಾವುದೋ ಅಕ್ರಮ ಎಸಗುವ ಉದ್ದೇಶದಿಂದ ಆರೋಪಿಗಳು ಸೂಕ್ತ ದಾಖಲೆಗಳಿಲ್ಲದ ಹಣ ಇಟ್ಟುಕೊಂಡಿದ್ರು ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ . ಬಂಧಿತ ಅರೋಪಿಗಳನ್ನ ರವಿ , …
Read More »ಸೋಮವಾರ ಸಂಪುಟ ವಿಸ್ತರಣೆ ಸಾಧ್ಯತೆ
ಬೆಂಗಳೂರು, ಮೇ 14- ಎಲ್ಲವೂ ನಿರೀಕ್ಷೆಯಂತೆ ನಡೆದರೆ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಸೋಮವಾರ ನಡೆಯುವ ಸಾಧ್ಯತೆಯಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮುಖರ ಜೊತೆ ಮಾತುಕತೆ ನಡೆಸಿದ್ದಾರೆ. ರೇಸ್‍ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ಗೋವಿಂದ ಕಾರಜೋಳ, ಮಾಜಿ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಮತ್ತಿತರರ ಜೊತೆ ಮಾತುಕತೆ ನಡೆಸಲಾಯಿತು. …
Read More »ಇನ್ಮುಂದೆ ರಾಜ್ಯಾಧ್ಯಂತ ಬೆಳಿಗ್ಗೆ 5 ಗಂಟೆಗೆ ಮಸೀದಿಗಳಲ್ಲಿ ‘ಆಜಾನ್’ ಕೂಗದಿರಲು ‘ಮುಸ್ಲೀಂ ಮುಖಂಡರ ಸಭೆ’ಯಲ್ಲಿ ನಿರ್ಧಾರ
ಬೆಂಗಳೂರು: ರಾಜ್ಯ ಸರ್ಕಾರದಿಂದ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆಯ ಬಗ್ಗೆ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದೆ. ಬೆಳಗಿನ ಜಾವದಲ್ಲಿ ಇಂತಿಷ್ಟೇ ಡೆಸಿಬಲ್ ಶಬ್ದವನ್ನು ಹೊರಸೂಸುವಂತೆ ಧ್ವನಿ ವರ್ಧಕ ಬಳಕೆಗೂ ಖಡಕ್ ಸೂಚನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವಂತ ಮುಸ್ಲೀಂ ಮುಖಂಡರು, ಇನ್ಮುಂದೆ ರಾಜ್ಯಾಧ್ಯಂತ ಬೆಳಿಗ್ಗೆ 5 ಗಂಟೆಯ ಆಜಾನ್ ಕೂಗೋದನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಈ ಕುರಿತಂತೆ ಮುಸ್ಲೀಂ ಮುಖಂಡರು ಸಭೆ ನಡೆಸಿದ ಬಳಿಕ, ಸುದ್ದಿಗಾರರಿಗೆ ಮಾಹಿತಿ ನೀಡಿದಂತ …
Read More »ಮೇಲ್ಮನೆ ಚುನಾವಣೆ : ವಿಜಯೇಂದ್ರ ಕಣಕ್ಕೆ..?
ಬೆಂಗಳೂರು,ಮೇ14- ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಅಭ್ಯರ್ಥಿ ಮಾಡಬೇಕೆಂಬ ಅಭಿಪ್ರಾಯ ಕೋರ್ ಕಮಿಟಿ ಸಭೆಯಲ್ಲಿ ವ್ಯಕ್ತವಾಗಿದೆ. ಮಲ್ಲೇಶ್ವರಂನ ಜಗನ್ನಾಥ ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮೇಲ್ಮನೆಗೆ ವಿಜಯೇಂದ್ರ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ. ಅಂತಿಮವಾಗಿ ಅವರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಬೇಕು. ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕೆಂಬ ಒಂದು ಸಾಲಿನ …
Read More »ವಲಸೆ ತಡೆಗೆ ‘ಕೈ’ಕಮಾಂಡ್ ಸೂಚನೆ; ಆತಂಕ ತಂದ ಕಮಲ ಪಕ್ಷದ ತಂತ್ರ
ಬೆಂಗಳೂರು: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ನಿಂದ ವಲಸೆ ಪರ್ವ ಆಗದಂತೆ ನೋಡಿಕೊಳ್ಳಲು ಹೈಕಮಾಂಡ್ ರಾಜ್ಯ ನಾಯಕರಿಗೆ ಸಂದೇಶ ರವಾನಿಸಿದೆ. ಬಿಜೆಪಿ ಹಳೇ ಮೈಸೂರು ಭಾಗದ ಕಾಂಗ್ರೆಸ್ ನಾಯಕರನ್ನು ಗುರಿಯಾಗಿರಿಸಿಕೊಂಡಿದ್ದು, ಮಾಜಿ ಸಂಸದ ಮುದ್ದಹನುಮೇಗೌಡ ಸೇರಿ ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು ಹಾಗೂ ಮೈಸೂರು ಭಾಗದವರನ್ನು ಸಂಪರ್ಕಿಸಿದೆ ಎಂಬ ಮಾಹಿತಿ ಪಡೆದಿರುವ ಹೈಕಮಾಂಡ್, ಸ್ವಸಾಮರ್ಥ್ಯ ಹಾಗೂ ಪ್ರಭಾವ ಇರುವವರು ಪಕ್ಷ ತ್ಯಜಿಸದಂತೆ ನೋಡಿಕೊಳ್ಳಲು ಸೂಚಿಸಿದೆ. ಚುನಾವಣೆಗೆ ಇನ್ನೊಂದು ವರ್ಷ ಇರುವಾಗ …
Read More »ಮಾತುಕತೆ ಯಶಸ್ವಿ, ಜಿ.ಟಿ ದೇವೇಗೌಡರು ಬಿಜೆಪಿಗೆ??
ಮೈಸೂರು ಭಾಗದಲ್ಲಿ ಪ್ರಬಲ ನಾಯಕರಾಗಿರುವ ಜಿ.ಟಿ ದೇವೇಗೌಡರನ್ನು(GT Devegowda) ಬಿಜೆಪಿಗೆ(BJP) ಸೆಳೆಯಲು ಕಮಲ ಪಾಳಯದಲ್ಲಿ ಭರ್ಜರಿ ಕಸರತ್ತು ನಡೆದಿದೆ. ಈಗಾಗಲೇ ಜೆಡಿಎಸ್‍ನಿಂದ ಒಂದು ಕಾಲು ಹೊರಗಿಟ್ಟಿರುವ ಜಿ.ಟಿ ದೇವೇಗೌಡರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ನಿರಂತರ ಮಾತುಕತೆ ನಡೆಸುತ್ತಿವೆ. ಇದೀಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್(ST Somashekar) ಮತ್ತು ಜಿ.ಟಿ ದೇವೇಗೌಡರು(GT Devegowda) ಮೈಸೂರಿನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಿಜೆಪಿ ಸೇರಲು ಜಿ.ಟಿ …
Read More »ಬೆಳಗಾವಿಯಲ್ಲಿ ದ್ಯಾಮಮ್ಮ, ದುರಗಮ್ಮ ದೇವಿ ಜಾತ್ರೆ , ಭಂಡಾರದೋಕುಳಿಯಲ್ಲಿ ಸಂಭ್ರಮಿಸಿದ ಭಕ್ತರು
ಬೆಳಗಾವಿ ಜಿಲ್ಲೆ ಕಿತ್ತೂರು ಕೋಟೆಯ ಗ್ರಾಮ ದೇವತೆಗಳಾದ ದ್ಯಾಮಮ್ಮ, ದುರಗಮ್ಮ ದೇವಿ ಜಾತ್ರೆಯನ್ನ ದಶಮಾನಗಳ ಬಳಿಕ ಈಗ ಆಚರಿಸಲಾಗ್ತಿದೆ. ಮೇ 4 ರಿಂದ ಜಾತ್ರೆ ಶುರುವಾಗಿದ್ದು, 7 ಹಳ್ಳಿಗಳ ಗ್ರಾಮಸ್ಥರು ಪಲ್ಲಕ್ಕಿಯನ್ನ ಕಿತ್ತೂರಿಗೆ ತಂದ್ರು. ಉತ್ಸವದ ವಿಶೇಷತೆ ಅಂದ್ರೆ ಭಂಡಾರ ಎರಚುತ್ತಾ ಭಕ್ತರು ಹೊನ್ನಾಟದಲ್ಲಿ ತೊಡಗಿ ಭಕ್ತಿ ಅರ್ಪಿಸಿದ್ರು. ಬೆಳಗಾವಿಯ ಜಾತ್ರೆ ಇಷ್ಟಾದ್ರೆ ಕೋಟೆನಾಡಲ್ಲೂ ಕುಲದೇವಿಯ ಉತ್ಸವ ಅದ್ಧೂರಿಯಾಗಿ ನಡೆದಿತ್ತು. ಭಂಡಾರದೋಕುಳಿಯಲ್ಲಿ ಸಂಭ್ರಮಿಸಿದ ಭಕ್ತರು ಚಿತ್ರದುರ್ಗದಲ್ಲಿ ಕೋಟೆ ಆಳಿದ ಪಾಳೇಗಾರರ …
Read More »ಇಲ್ಲಿವರಗೂ ಬಂಧಿಸಿದ್ದ 32 ಜನರ ವಿಚಾರಣೆ ನಿನ್ನೆಗೆ ಮುಕ್ತಾಯ: ಯಾರೊಬ್ಬರಿಗೂ ಜಾಮೀನು ಸಿಗದ ಹಿನ್ನೆಲೆ ಜೈಲು ಭಾಗ್ಯ ಫಿಕ್ಸ್!
ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲ್ಲಿವರಗೆ 32 ಜನರನ್ನು ಸಿಐಡಿ ಅಧಿಕಾರಿಗಳು ಬಂಧಿಸಿತ್ತು. 32 ಜನರ ವಿಚಾರಣೆ ನಿನ್ನೆಗೆ ಮುಕ್ತಾಯವಾಗಿದೆ. ಆರೋಪಿಗಳ ಪೈಕಿ ಯಾರೊಬ್ಬರಿಗೂ ಜಾಮೀನು ಸಿಗದ ಹಿನ್ನೆಲೆ 32 ಜನರಿಗೂ ಇದೀಗ ಜೈಲು ಭಾಗ್ಯ ಫಿಕ್ಸ್! ಆಗಿದೆ. ಎಲ್ಲರನ್ನು ಕಲಬುರಗಿ ಕೇಂದ್ರ ಕಾರಾಗೃಹಗೆ ಸಿಐಡಿ ಸಿಬ್ಬಂದಿ ಬಿಟ್ಟಿದ್ದು, ನಗರದ ಐವಾನ್ ಈ ಶಾಹಿ ಅತಿಥಿ ಗೃಹದಲ್ಲಿರೋ ಸಿಐಡಿ ಕಚೇರಿ, ಕಳೆದ ಒಂದು ತಿಂಗಳಿಂದ ಆರೋಪಿಗಳಿಂದ …
Read More »ಬಿ.ಜೆ.ಪುಟ್ಟಸ್ವಾಮಿ ಪೀಠಾರೋಹಣಕ್ಕೆ ಕೋರ್ಟ್ ಬ್ರೇಕ್
ಬೆಂಗಳೂರು, ಮೇ 13. ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಸ್ಥಾನ ಅಲಂಕರಿಸಲು ಬ್ರೇಕ್ ಬಿದ್ದಿದೆ. ಇದರೊಂದಿಗೆ ಗಾಣಿಗ ಮಠದ ಪೀಠಾಧಿಪತಿ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಪುಟ್ಟಸ್ವಾಮಿ ಪೀಠಾರೋಹಣ ಮಾಡುವುದಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮಧ್ಯಂತರ ಆದೇಶಿಸಿದೆ. ಎನ್. ರಾಜು, ರಂಗಸ್ವಾಮಿ, ಎಂ.ಪಿ. ಹೇಮಾವತಿ, …
Read More »ಎಂ.ಬಿ.ಎ., ಬಿ.ಇ ಮುಗಿಸಿದ ಅವರು ಅದಕ್ಕೆ ತಕ್ಕುದಾದ ನೌಕರಿ ಸಿಕ್ಕಿದರೂ ಅದನ್ನು ತೊರೆದು ಕೃಷಿಕರಾಗಿದ್ದಾರೆ.
ಹಗರಿಬೊಮ್ಮನಹಳ್ಳಿ: ಓದು ಮುಗಿದ ನಂತರ ಮಹಾನಗರಗಳಿಗೆ ತೆರಳಿ, ಕೆಲಸಕ್ಕೆ ಸೇರಿದರೆ ಉದ್ದೇಶ ಈಡೇರಿತು ಎಂಬ ಭಾವನೆ ಹಲವರದು. ಆದರೆ, ತಾಲ್ಲೂಕಿನ ಅಡವಿ ಆನಂದದೇವನಹಳ್ಳಿಯ ದೀಪ್ತಿ ಬಾಲಕೋಟೇಶ್ವರರಾವ್ ವೆಲ್ಲಂಕಿ ಇದಕ್ಕೆ ತದ್ವಿರುದ್ಧ. ಎಂ.ಬಿ.ಎ., ಬಿ.ಇ ಮುಗಿಸಿದ ಅವರು ಅದಕ್ಕೆ ತಕ್ಕುದಾದ ನೌಕರಿ ಸಿಕ್ಕಿದರೂ ಅದನ್ನು ತೊರೆದು ಕೃಷಿಕರಾಗಿದ್ದಾರೆ. ಈಗ ಅವರಿಗೆ 27ರ ಹರೆಯ. ಬದುಕು ಕಟ್ಟಿಕೊಳ್ಳುವ ವಯಸ್ಸು. ತನ್ನೆದುರಿಗೆ ಅನೇಕ ಅವಕಾಶಗಳಿದ್ದರೂ ಅವುಗಳನ್ನು ನಿರ್ಲಕ್ಷಿಸಿ ಕೃಷಿಯಲ್ಲಿ ತೊಡಗಿದ್ದಾರೆ. ಅದು ಕೂಡ ಸಾವಯವ ಕೃಷಿ. …
Read More »