ಮುಂಡಗೋಡ: ಪಟ್ಟಣದ ಹೊರವಲಯದ ತೋಟವೊಂದರಲ್ಲಿ ಕುರಿ ಸಾಕಾಣಿಕೆ ಘಟಕಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ 78 ಕುರಿಗಳು ಸಜೀವ ದಹನಗೊಂಡ ಘಟನೆ ಬುಧವಾರ(ಆಗಸ್ಟ್ 14) ನಡೆದಿದೆ. ಕಲಘಟಗಿ ರಸ್ತೆಯಲ್ಲಿರುವ ನಜೀರ ಅಹ್ಮದ ದರ್ಗಾವಾಲೆ ಎಂಬುವವರಿಗೆ ಸೇರಿದ ತೋಟ ಇದಾಗಿದ್ದು. ಇವರು ತಮ್ಮ ತೋಟದಲ್ಲಿ ಕುರಿ ಸಾಕಾಣಿಕೆ ಮಾಡಿದ್ದರು. ಬೆಳಿಗ್ಗೆಯಿಂದ ತೋಟದಲ್ಲಿ ಇದ್ದು ಮಧ್ಯಾಹ್ನದ ವೇಳೆ ಊಟಕ್ಕೆಂದು ಮನೆಯ ಕಡೆ ಹೋಗಿದ್ದಾರೆ. ಈ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ …
Read More »ಸೊಸೆ ಮಾಡಿದ ಮೋಸಕ್ಕೆ ಬೀದಿಗೆ ಬಂದ ಬದುಕು
ಗದಗ: ಸೊಸೆ ಮಾಡಿದ ಮೋಸಕ್ಕೆ ಬದುಕು ಬೀದಿಗೆ ಬಂದಿದ್ದು, ನನಗಾಗಿರುವ ಅನ್ಯಾಯಕ್ಕೆ ಸಮಾಜದ ಯಾವುದೇ ವ್ಯಕ್ತಿ, ಅಧಿಕಾರಿಗಳಿಂದ ನ್ಯಾಯ ಸಿಕ್ಕಿಲ್ಲ. ಆದಕಾರಣ, ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಆದಿತ್ಯ ನಗರದ ನಿವಾಸಿ ಅನುಸೂಯ ಬಸವಂತಪ್ಪ ಕರಕಿಕಟ್ಟಿ ಅವರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟು ವರ್ಷಗಳ ಹಿಂದೆ ಮಗನಿಗೆ ಪಾರ್ವತೆವ್ವ ಹುನಗುಂದ ಎಂಬ ಹುಡುಗಿ ನೋಡಿ ವಿವಾಹ ಮಾಡಲಾಗಿತ್ತು. ಮದುವೆಯಾದ ಮೂರು …
Read More »ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ.!
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ ನಡೆದಿದ್ದು, ಪತಿಯೋರ್ವ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಗೌರಿ (26) ಎಂಬ ಮಹಿಳೆ ಕೊಲೆಯಾಗಿದ್ದು, ಸ್ಮಶಾನ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ನಿನ್ನೆ ಸಂಜೆ 7:30 ರ ವೇಳೆಗೆ ಹತ್ಯೆ ನಡೆದಿದ್ದು, ಸ್ಥಳೀಯರು ಮೃತದೇಹ ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.ಘಟನೆ ನಡೆದ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »ಅಪಾಯದಲ್ಲಿವೆ 563 ಶಾಲಾ ಕೊಠಡಿಗಳು
ಚಿಂಚೋಳಿ: ತಾಲ್ಲೂಕಿನಲ್ಲಿ ವಿವಿಧೆಡೆ ಸರ್ಕಾರಿ ಶಾಲೆಗಳು ಸೋರುತ್ತಿದ್ದು ಅಪಾಯದ ಸ್ಥಿತಿಯಲ್ಲಿವೆ. ಕೆಲವು ಶಾಲೆಗಳ ಛತ್ತಿನ ಪ್ಲಾಸ್ಟರ್ ಕಿತ್ತು ಬೀಳುತ್ತಿದ್ದು ಮಕ್ಕಳು ಹೆದರಿಕೆಯಲ್ಲಿಯೇ ಪಾಠ ಪ್ರವಚನ ಆಲಿಸುವಂತಾಗಿದೆ. ತಾಲ್ಲೂಕಿನಲ್ಲಿ 298 ಸರ್ಕಾರಿ ಶಾಲೆಗಳಿವೆ. ಇಲ್ಲಿ 28,340 ಮಕ್ಕಳ ದಾಖಲಾತಿಯಿದೆ. ಇವರಿಗೆ ಪಾಠ ಪ್ರವಚನ ನಡೆಸಲು ಒಟ್ಟು 2,073 ಶಾಲಾ ಕೊಠಡಿಗಳಿದ್ದು, ಈ ಪೈಕಿ 1,200 ಕೊಠಡಿಗಳು ಸುಸ್ಥಿತಿಯಲ್ಲಿವೆ. 308 ಶಿಥಿಲ ಕೊಠಡಿಗಳು ಸೇರಿ 563 ಕೊಠಡಿಗಳು ಅಪಾಯದಲ್ಲಿವೆ. 255 ಕೊಠಡಿಗಳಿಗೆ ಭಾರಿ ದುರಸ್ತಿಯ …
Read More »ಕರ್ನಾಟಕದ 20 ಸೇರಿ 1,037 ಪೊಲೀಸರಿಗೆ `ರಾಷ್ಟ್ರಪತಿ ಪದಕ’ಘೋಷಣೆ
ನವದೆಹಲಿ : ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಸರ್ಕಾರ ಬುಧವಾರ (ಆಗಸ್ಟ್ 14, 2024) ವಿವಿಧ ಕೇಂದ್ರ ಮತ್ತು ರಾಜ್ಯ ಪಡೆಗಳ 1,037 ಪೊಲೀಸ್ ಸಿಬ್ಬಂದಿಗೆ ಸೇವಾ ಪದಕಗಳನ್ನು ಘೋಷಿಸಿದೆ. ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣೆ (ಎಚ್ಜಿ &ಸಿಡಿ) ಮತ್ತು ಸುಧಾರಣಾ ಸೇವೆಗಳ ಒಟ್ಟು 1037 ಸಿಬ್ಬಂದಿಗೆ 2024 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶೌರ್ಯ ಮತ್ತು ಸೇವಾ ಪದಕಗಳನ್ನು ನೀಡಲಾಗಿದೆ. ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪದಕ (ಪಿಎಂಜಿ) ಮತ್ತು …
Read More »ಬದಲಾಗಲಿದೆ ಉತ್ತರ ಕರ್ನಾಟಕ ಭಾಗದ ಪ್ರವಾಸೋದ್ಯಮ
ಬೆಳಗಾವಿ, ಆಗಸ್ಟ್ 14: ಉತ್ತರ ಕರ್ನಾಟಕ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ. ಆದರೆ ಅವುಗಳು ಪ್ರಚಾರದಲ್ಲಿ, ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿವೆ. ಈಗ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇರುವ ಪೂರಕ ಅಂಶಗಳನ್ನು ಗುರುತಿಸಿ ಅವುಗಳ ಮೇಲೆ ಹೆಚ್ಚಿನ ಗಮನ ಹರಿಸಿ, ಈ ಭಾಗದ ಪ್ರವಾಸೋದ್ಯಮದ ಚಿತ್ರಣ ಬದಲಿಸಲು ಯೋಜನೆ ರೂಪಿಸಲಾಗಿದೆ. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಬೆಳಗಾವಿಯ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ಮದ್ಯಸ್ಥಿಕೆಗಾರರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಬೆಳಗಾವಿ ವಿಮಾನ ನಿಲ್ದಾಣದ …
Read More »ದರ್ಶನ್ ಅರೆಸ್ಟ್ ಆಗಿ 2 ತಿಂಗಳ ನಂತರ ಮೊದಲ ಬಾರಿ ಭೇಟಿಗೆ ಬಂದ ಅಭಿಷೇಕ್ ಅಂಬರೀಷ್
ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ (Darshan) ಹಾಗೂ ಗ್ಯಾಂಗ್ ಸದ್ಯ ಹೊರಗೆ ಬರುವಂತೆ ಕಾಣಿಸುತ್ತಿಲ್ಲ. ನಟ ದರ್ಶನ್ ಅವರು ಜೈಲು ಸೇರಿ ಈಗಾಗಲೇ 2 ತಿಂಗಳು ಕಳೆದಿದೆ. ಇದೀಗ ನಟ ಅಭಿಷೇಕ್ ಅಂಬರೀಷ್ (Abhishek Ambareesh)ಅವರು ನಟ ದರ್ಶನ್ ಭೇಟಿಗೆ ಆಗಮಿಸಿದ್ದಾರೆ. ಅಭಿಷೇಕ್ ಅಂಬರೀಷ್, ಧನ್ವೀರ್, ಚಿಕ್ಕಣ್ಣ ಅವರು ದರ್ಶನ್ ಭೇಟಿಗಾಗಿ ಜೈಲಿಗೆ ಬಂದಿದ್ದಾರೆ. ದರ್ಶನ್ ಭೇಟಿ ಮಾಡಲಿರುವ ಆಪ್ತರ ಕಾರು ಪರಪ್ಪನ ಅಗ್ರಹಾರ …
Read More »ಯತ್ನಾಳ್, ಜಾರಕಿಹೊಳಿ ಪಾದಯಾತ್ರೆ ಮಾಡಲಿ, ಆದರೆ, ಹೈಕಮಾಂಡ್ ಅನುಮತಿ ಪಡೆಯಲಿ: BYV
ಬೆಂಗಳೂರು: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಕೆಲವು ಶಾಸಕರು ಸೇರಿ ಉತ್ತರ ಕರ್ನಾಟಕದ ಭಾಗದಲ್ಲಿ ಪಾದಯಾತ್ರೆ ನಡೆಸುವ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ, ಅವರು ವರಿಷ್ಠರ ಅನುಮತಿ ಪಡೆದುಕೊಂಡು ಮಾಡಲಿ’ ಎಂದು ಬಿಜೆಪಿ ರಾಜ್ಯ ಘಟಕದ ಆಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಸಂತನಗರದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಈ ವಿಷಯ …
Read More »ಕಿತ್ತೂರು-ಧಾರವಾಡ ರೈಲು ಮಾರ್ಗ ಶೀಘ್ರ
ಹಿರೇಬಾಗೇವಾಡಿ: ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು. ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಇಲ್ಲಿನ ಪಡಿಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರ ವಿವಿಧ ಬೇಡಿಕೆಗಳ ಮನವಿ ಸ್ವೀಕರಿಸಿ ಮಾತನಾಡಿದರು. ಹಿರೇಬಾಗೇವಾಡಿ ಮಾರ್ಗವಾಗಿ ಧಾರವಾಡಕ್ಕೆ ಹೊಸ ರೈಲು ಮಾರ್ಗ ನಿರ್ಮಾಣ ಕಾರ್ಯದಲ್ಲಿ ಯಾವುದೇ ಅಡೆತಡೆಗಳಿಲ್ಲ. ರೈತರು ಜಮೀನು ನೀಡಲು ಮುಂದಾಗಿದ್ದು, ಅದರಿಂದ ಯಾವುದೇ ರೈತರಿಗೆ ಸಮಸ್ಯೆಗಳಾಗದಂತೆ ಕ್ರಮ ಕೈಗೊಳ್ಳಲಾಗುವುದು. ಭಕ್ತರ ಬೇಡಿಕೆಗನುಸಾರವಾಗಿ …
Read More »ಮನೆ ಹಾನಿಗೆ ತಕ್ಷಣ ಪರಿಹಾರ ಒದಗಿಸಿ’
ಬೆಳಗಾವಿ: ‘ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೆ ಒಳಗಾದ ಮನೆಗಳ ಸ್ಥಳಗಳನ್ನು ಮಹಜರು ಮಾಡಬೇಕು. ವಸತಿ ನಿಗಮದ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಿ ಪರಿಹಾರ ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಜಿಲ್ಲೆಯಲ್ಲಿ ಸಂಪೂರ್ಣ ಹಾನಿಗೀಡಾದ ಮನೆಗಳ ಮಾಹಿತಿ ಲಭ್ಯವಿದೆ. ಅಂಥ ಮನೆಗಳಿಗೆ ತ್ವರಿತವಾಗಿ ಪರಿಹಾರ ವಿತರಿಸಬೇಕು. ಈ …
Read More »