ಚಿಕ್ಕಬಳ್ಳಾಪುರ: ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ (MGNREGA) ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಇಂದು ಚಿಕ್ಕಬಳ್ಳಾಪುರದಲ್ಲಿನಡೆದ ನರೇಗಾ ಬಚಾವ್ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ದೇಶಾದ್ಯಂತ ‘ಮನರೇಗಾವನ್ನು ಉಳಿಸಿ’ ಅಭಿಯಾನ ಪ್ರಾರಂಭಿಸಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಭಾಜಪ ಸರ್ಕಾರ ಮನರೆಗಾವನ್ನು ರದ್ದುಪಡಿಸಿ, ವಿಬಿಜಿರಾಮ್ ಜಿ (VB-G RAM G) ಕಾಯ್ದೆಯನ್ನು …
Read More »ಕೆಡಿಪಿ ಸಭೆಯಲ್ಲಿ ಸಚಿವ ಸಂತೋಷ್ ಲಾಡ್-ಎಂಎಲ್ಸಿ ಎಫ್.ಎಚ್.ಜಕ್ಕಪ್ಪನವರ ನಡುವೆ ವಾಗ್ವಾದ
ಧಾರವಾಡ : ಧಾರವಾಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ಇಂದು(ಸೋಮವಾರ) ನಡೆದಿದ್ದು, ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ವೇಳೆ ಸಚಿವ ಸಂತೋಷ್ ಲಾಡ್ ಹಾಗೂ ಎಂಎಲ್ಸಿ ಎಫ್.ಎಚ್.ಜಕ್ಕಪ್ಪನವರ ನಡುವೆ ತುಸು ಹೊತ್ತು ಏರು ದ್ವನಿಯಲ್ಲಿ ವಾಗ್ವಾದ ನಡೆದ ಪ್ರಸಂಗ ನಡೆಯಿತು. ಜಿಲ್ಲೆಯಲ್ಲಿ ಎಸ್‌ಸಿ, ಎಸ್‌ಟಿ ಸಮಾಜವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಎಸ್‌ಸಿ, …
Read More »ಗಾಂಧಿ ಪಾಕಿಸ್ತಾನದ ಪಿತಾಮಹ, ಓಮರ್ ಅಬ್ದುಲ್ಲಾ, ರಾಹುಲ್ ಗಾಂಧಿ ಒಂದೇ ಪ್ರೊಡಕ್ಷನ್ : ಯತ್ನಾಳ್ ವಿವಾದದ ಹೇಳಿಕೆ ವೈರಲ್!
ಯಾದಗಿರಿ : ಮಹಾತ್ಮ ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ. ಪಾಕಿಸ್ತಾನದ ರಾಷ್ಟ್ರಪಿತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ವೈರಲಾಗಿದೆ. ಶಿವಾಜಿ ಜಯಂತಿಯಲ್ಲಿ ಶಾಸಕ ಬಸನಗೌಡ ಪಾಟೀಲ ಭಾಷಣದ ವಿಡಿಯೋ ಈಗ ವೈರಲ್ ಆಗಿದೆ. ಫೆಬ್ರುವರಿ 21ರಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗಾಂಧೀಜಿಯನ್ನ ಭಾರತದ ರಾಷ್ಟ್ರಪಿತ ಎಂದು ನಾನು ಒಪ್ಪಿಕೊಳ್ಳಲ್ಲ. ಜವಾಹರ್ಲಾಲ್ ನೆಹರೂರನ್ನ ಮೊದಲ ಪ್ರಧಾನಿ ಎಂದು ಒಪ್ಪಿಕೊಳ್ಳಲ್ಲ ನಮ್ಮ ದೇಶದ …
Read More »ಶಾಸಕ ಡಾ.ಚಂದ್ರು ಲಮಾಣಿ ವಿದ್ಯಾವಂತ ಎಂಬ ಕಾರಣಕ್ಕಾಗಿ ಕುತಂತ್ರ ಮಾಡಲಾಗಿದೆ: ರಮೇಶ ಜಾರಕಿಹೊಳಿ
ಬೆಳಗಾವಿ: ‘ವಿದ್ಯಾವಂತ ಎಂಬ ಕಾರಣಕ್ಕೆ ಪರಿಶಿಷ್ಟ ಸಮುದಾಯದ ಶಾಸಕ ಡಾ.ಚಂದ್ರು ಲಮಾಣಿ ವಿರುದ್ಧ ಪಿತೂರಿ ಮಾಡಿ, ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಈ ಕುತಂತ್ರಕ್ಕೆ ಅದೇ ಸಮುದಾಯದ ವ್ಯಕ್ತಿ ಬಳಸಿಕೊಳ್ಳಲಾಗಿದೆ. ಈ ಅನ್ಯಾಯದ ವಿರುದ್ಧ ನಾನೂ ಧ್ವನಿ ಎತ್ತುತ್ತೇನೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಸಮುದಾಯಕ್ಕೆ ಸೇರಿದ ಶಾಸಕರನ್ನು ತುಳಿಯುವ ಕೆಲಸ ಇಂದು, ನಿನ್ನೆಯಿಂದ ಅಲ್ಲ; 20 ವರ್ಷಗಳಿಂದಲೂ ನಡೆಯುತ್ತ ಬಂದಿದೆ. ಶೇ …
Read More »ಬಾಗಲಕೋಟೆ | ಕಲ್ಲು ತೂರಾಟ ನಡೆದ ಮಸೀದಿ ಎದುರೇ ಮತ್ತೆ ಶಿವಾಜಿ ಜಯಂತಿ ಆಚರಣೆಗೆ ನಿರ್ಧಾರ
ಬಾಗಲಕೋಟೆ: ಶಿವಾಜಿ ಜಯಂತಿಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದ ಬಾಗಲಕೋಟೆಯ ಕಿಲ್ಲಾ ಓಣಿ ಸಹಜ ಸ್ಥಿತಿಗೆ ಬಂದಿದೆ. ಕೊತ್ತಲೇಶ್ವರ ದೇವಸ್ಥಾನ ಹಾಗೂ ಪಂಕಾ ಮಸೀದಿ ಆವರಣದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಆರಂಭವಾಗಿದೆ. ಈ ಬೆನ್ನಲ್ಲೇ ಹಿಂದೂ ಸರ್ವ ಸಮಾಜದ ಮುಖಂಡರು ಭಾನುವಾರ (ಫೆ.22) ನಡೆಸಿದ ಸಭೆಯಲ್ಲಿ ಮತ್ತೊಮ್ಮೆ ಶಿವಾಜಿ ಜಯಂತಿ ಆಚರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಬಾಗಲಕೋಟೆ ಶಿವಾನುಭವ ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಫೆ.26 ರಂದು ಶಿವಾಜಿ …
Read More »ಬಾಗಲಕೋಟೆ ಕಲ್ಲುತೂರಾಟ| ಬಂಧನಕ್ಕೆ ಒಳಗಾದ 7 ಮಂದಿ ಅಮಾಯಕರು: ಬಿಡುಗಡೆ ಮಾಡುವಂತೆ ಮುಸ್ಲಿಮರ ಮನವಿ
ಬಾಗಲಕೋಟೆ: ಕಲ್ಲು ತೂರಾಟದಲ್ಲಿ ಬಂಧನಕ್ಕೆ ಒಳಗಾದ 7 ಮಂದಿ ಅಮಾಯಕರಾಗಿದ್ದು ಅವರನ್ನು ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮುಸ್ಲಿಮ್ ಮುಖಂಡರು ಮನವಿ ಮಾಡಿದ್ದಾರೆ. ಶುಕ್ರವಾರ ನಡೆದ ಶಾಂತಿ ಸಭೆಗೆ ಮುಸ್ಲಿಮರು ಗೈರಾಗಿದ್ದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಡಳಿತ ನವನಗರದ ಜಿಲ್ಲಾಡಳಿತ ಭವನದಲ್ಲಿ ಉಸ್ತುವಾರಿ ಸಚಿವ ತಿಮ್ಮಾಪೂರ ನೇತೃತ್ವದಲ್ಲಿ ಮತ್ತೆ ಶಾಂತಿ ಸಭೆಯನ್ನು ಆಯೋಜಿಸಿತ್ತು. ಆದರೆ ಇಂದಿನ ಸಭೆಗೆ ಹಿಂದೂ ಮುಖಂಡರು ಹಾಜರಾಗಿರಲಿಲ್ಲ. ಈ ಸಭೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮಾತ್ರ ಭಾಗಿಯಾಗಿ ತಮ್ಮ ಅಹವಾಲುಗಳನ್ನ …
Read More »ಏಕಕಾಲಕ್ಕೆ ಪಿಡಿಒಗಳಿಗೆ ಗ್ರೂಪ್ ‘ಬಿ’ಗೆ ಬಡ್ತಿ ನೀಡಲು ಆಗ್ರಹ
ಚಿತ್ರದುರ್ಗ: ’16 ವರ್ಷಗಳಿಂದಲೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಡ್ತಿಯಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಏಕಕಾಲಕ್ಕೆ ಗ್ರೂಪ್ ‘ಬಿ’ಗೆ ಉನ್ನತೀಕರಿಸಲು ರಾಜ್ಯಮಟ್ಟದಲ್ಲಿ ಬೃಹತ್ ಹೋರಾಟ ರೂಪಿಸಲಾಗುತ್ತಿದೆ’ ಎಂದು ಕರ್ನಾಟಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ‘ಬಿ’ ಗ್ರೇಡ್ ಉನ್ನತೀಕರಣ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ನಡಿಗೇರಿ ತಿಳಿಸಿದರು. ರಾಜ್ಯದಲ್ಲಿ ಒಟ್ಟು 5,964 ಗ್ರಾಮ ಪಂಚಾಯಿತಿಗಳಿದ್ದು, 1500 ಪಿಡಿಒಗಳನ್ನು ಮಾತ್ರ ಸರ್ಕಾರ ‘ಬಿ’ ಗ್ರೇಡ್ ಹುದ್ದೆಗೇರಿಸಿದೆ. ಅದರಂತೆ ಉಳಿದ ಎಲ್ಲಾ ಪಂಚಾಯಿತಿಯ ಅಭಿವೃದ್ಧಿ …
Read More »ರಾಹುಲ್ ಗಾಂಧಿ ಉಢಾಳ ಹುಡುಗನಂತೆ ವರ್ತಿಸುತ್ತಾರೆ : ಶೆಟ್ಟರ್ ಟೀಕೆ
ಬೆಳಗಾವಿ: ಸಂಸತ್ತಿನ ನಿಯಮಾವಳಿಗಳ ಅರಿವಿಲ್ಲದಂತೆ ನಡೆದುಕೊಳ್ಳುತ್ತಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೀದಿಯ ಉಢಾಳ ಹುಡುಗನಂತೆ ವರ್ತಿಸುತ್ತಿದ್ದಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಅಪಕ್ವ ನಡವಳಿಕೆಯಿಂದ ಸ್ವತಃ ಕಾಂಗ್ರೆಸ್ ಸಂಸದರೇ ಬೇಸರಗೊಂಡಿದ್ದಾರೆ ದೆಹಲಿಯಲ್ಲಿ ನಡೆದ ಕೃತಕ ಬುದ್ಧಿಮತ್ತೆ ಶೃಂಗಸಭೆಯು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾದಂತಹ ರಾಷ್ಟ್ರಗಳೊಂದಿಗೆ ಮಹತ್ವದ …
Read More »ಬಾಗಲಕೋಟೆಯಲ್ಲಿ ಪರಿಸ್ಥಿತಿ ಪೂರ್ಣ ನಿಯಂತ್ರಣಕ್ಕೆ ಬಂದಿದೆ: ಡಾ.ಪರಮೇಶ್ವರ್
ಬೆಂಗಳೂರು: ‘ಬಾಗಲಕೋಟೆಯಲ್ಲಿ ಮೆರವಣಿಗೆ ಬಗ್ಗೆ ಸ್ಥಳೀಯವಾಗಿ ನೋಡಿಕೊಂಡು ತೀರ್ಮಾನ ಮಾಡುವಂತೆ ಸೂಚಿಸಿದ್ದೇನೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಗಲಕೋಟೆ ಈಗ ಶಾಂತವಾಗಿದೆ. ಪೊಲೀಸ್ ತಕ್ಷಣ ಕಾರ್ಯಪ್ರವೃತ್ತರಾಗಿದ್ದರಿಂದ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಮೆರವಣಿಗೆ ಬಗ್ಗೆ ಸ್ಥಳೀಯವಾಗಿ ನೋಡಿಕೊಂಡು ತೀರ್ಮಾನ ಮಾಡುವಂತೆ ಸೂಚಿಸಿದ್ದೇನೆ ಎಂದರು. ಹಿರಿಯ ಎಡಿಜಿಪಿಯನ್ನು ಕಳುಹಿಸಿದ್ದೇನೆ. ಸಾಕಷ್ಟು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಶಾಂತಿಸಭೆ ನಿರ್ದೇಶನ ನೀಡಲಾಗಿದೆ ಎಂದ ಅವರು, ಘಟನೆಯಲ್ಲಿ ಪೊಲೀಸರಿಗೂ …
Read More »ಗದಗಿನ ಶಿರಹಟ್ಟೀಲಿ ತಗಡು ಶೆಡ್‌ನಲ್ಲಿ ನಿರ್ಮಿಸಿದ್ದ ಅಕ್ರಮ ಮಸೀದಿ ತೆರವು
ಶಿರಹಟ್ಟಿ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಗಾಂವಠಾಣಾ (ಸರ್ಕಾರಿ) ಜಾಗ ಅತಿಕ್ರಮಣ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿದ ತಗಡಿನ ಶೆಡ್‌ಗೆ (ಪ್ರಾರ್ಥನಾ ಮಸೀದಿ) ಗ್ರಾಮದ ಸಾರ್ವಜನಿಕರು, ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಕೊನೆಗೆ ಪೊಲೀಸರ ಸುಪರ್ದಿಯಲ್ಲಿ ತೆರವುಗೊಳಿಸಲಾಯಿತು. ರಂಜಾನ್ ತಿಂಗಳ ನಿಮಿತ್ತ ನಮಾಜ್ ಮಾಡಲು ಗ್ರಾಮದ ಮುಸ್ಲಿಂ ಸಮುದಾಯದವರು (ಜಮಾತ್) ಗ್ರಾಪಂ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಗ್ರಾಪಂ ಅನುಮತಿ ಪಡೆಯದೆ ಏಕಾಏಕಿ ಅನಧಿಕೃತವಾಗಿ ರಾತೋರಾತ್ರಿ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. …
Read More »
Laxmi News 24×7