Breaking News

ಜಿಲ್ಲೆ

ಭೀಕರ ಅಪಘಾತ…ಹಿಂಬದಿಯಿಂದ ಗುದ್ದಿದ ಬಸ್…ಲಾರಿ ಪಲ್ಟಿ!!!

ಭೀಕರ ಅಪಘಾತ…ಹಿಂಬದಿಯಿಂದ ಗುದ್ದಿದ ಬಸ್…ಲಾರಿ ಪಲ್ಟಿ!!! ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ದುರ್ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ವೇಗದಲ್ಲಿದ್ದ ಖಾಸಗಿ ಬಸ್ಸೊಂದು ಹಿಂಬದಿಯಿಂದ ಟ್ರಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿ, ಟ್ರಕ್ ಪಲ್ಟಿಯಾಗಿದೆ. ಘಟನೆಯಲ್ಲಿ ಟ್ರಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ಎಸ್ ಎಸ್ ಟ್ರಾವೇಲ್ಸ್ ಬಸ್ ಹಾಗೂ ಟ್ರಕ್ ನಡುವೆ …

Read More »

ಕಸದ ರಾಶಿಯಲ್ಲಿ ಮುಳುಗಿರುವ ಬೆಳಗಾವಿ ಅಜಮ್ ನಗರದ ಮೊದಲನೇ ಕ್ರಾಸ್…

ಕಸದ ರಾಶಿಯಲ್ಲಿ ಮುಳುಗಿರುವ ಬೆಳಗಾವಿ ಅಜಮ್ ನಗರದ ಮೊದಲನೇ ಕ್ರಾಸ್… ಕಸ ವಿಲೇವಾರಿಯಾಗುತ್ತಿಲ್ಲ, ನಾಯಿಗಳ ಹಾವಳಿ, ಗಬ್ಬು ವಾಸನೆ… ಪಾಲಿಕೆ ನಿರ್ಲಕ್ಷಕ್ಕೆ ಹಿಡಿ ಶಾಪ ಹಾಕುತ್ತಿರುವ ನಿವಾಸಿಗಳು….. ಬೆಳಗಾವಿ ಅಜಂನಗರ ಕೆಎಲ್ಇ ಕಂಪೌಂಡ ಪಕ್ಕದಲ್ಲಿರುವ ಮೊದಲೇ ಕ್ರಾಸ್ ನಲ್ಲಿ ಬಿದ್ದಿರುವ ಕಸದ ರಾಶಿಯನ್ನು ನೋಡಿದರೆ ಅಕ್ಷರಶಹ ತ್ಯಾಜ್ಯ ವಿಲೇವಾರಿ ಘಟಕದಂತಾಗಿದ್ದು, ಪಾಲಿಕೆ ನಿರ್ಲಕ್ಷ್ಯಕ್ಕೆ ಇಲ್ಲಿಯ ನಿವಾಸಿಗಳು ಹಿಡಿ ಶಾಪ ಹಾಕುತ್ತಿದ್ದಾರೆ ಅಜಮ್ ನಗರ ಮಹಾನಗರ ಪಾಲಿಕೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. …

Read More »

ಬಿಎಸ್‌ವೈ ವಿರುದ್ಧ ಪ್ರಾಸಿಕ್ಯೂಷನ್​ ಅನುಮತಿಗೆ ವಿಳಂಬ: ರಾಜ್ಯಪಾಲರ ಕಚೇರಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ 187 ಕೋಟಿ ರೂ. ಬೆಲೆಬಾಳುವ 116.17 ಎಕರೆ ಜಮೀನನ್ನು ಕೇವಲ 50 ಕೋಟಿ ರೂ.ಗೆ ಸೆಂಟರ್‌ ಫಾರ್‌ ಎಜುಕೇಷನ್‌ ಆ್ಯಂಡ್‌ ಸೋಷಿಯಲ್‌ ಸ್ಟಡೀಸ್‌ (ಸಿಇಎಸ್‌ಎಸ್‌) ಸಂಸ್ಥೆಗೆ ಮಂಜೂರು ಮಾಡಿರುವ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆಗೆ (ಪ್ರಾಸಿಕ್ಯೂಷನ್‌) ಪೂರ್ವಾನುಮತಿ ಕೋರಿ ಸಲ್ಲಿಸಿರುವ ಅರ್ಜಿ ಇತ್ಯರ್ಥಪಡಿಸಲು ವಿಳಂಬ ಮಾಡುತ್ತಿರುವ ಸಂಬಂಧ ರಾಜ್ಯಪಾಲರ ಕಚೇರಿ ಮತ್ತು ಲೋಕಾಯುಕ್ತ ಸಂಸ್ಥೆಗೆ ಹೈಕೋರ್ಟ್‌ ನೋಟಿಸ್‌ ಜಾರಿ …

Read More »

ಸಕ್ಕರೆ ಕಾರ್ಖಾನೆಗಳಿಂದ ಬಿಲ್​​ ಪಾವತಿಸುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ

ಬಾಗಲಕೋಟೆ: ಸಕ್ಕರೆ ಕಾರ್ಖಾನೆಗಳಿಂದ ಬಿಲ್​​​ ಪಾವತಿಸುವಂತೆ ಒತ್ತಾಯಿಸಿ ರೈತರು ಇಲ್ಲಿನ ಜಿಲ್ಲಾಡಳಿತ ಭವನದೆದುರು ಗುರುವಾರ ಪ್ರತಿಭಟನೆ ನಡೆಸಿದರು. ಕಳೆದ ಒಂದು ವರ್ಷದಿಂದ ಸಕ್ಕರೆ ಕಾರ್ಖಾನೆಯವರು ಕಬ್ಬು ನುರಿಸಿದ ರೈತರ ಬಿಲ್ ಹಾಗೂ ಬಾಕಿ ಹಣ ಪಾವತಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ರೈತ ಮುಖಂಡರಾದ ಮುತ್ತಪ್ಪ ಕೋಮಾರ್, ಈರಣ್ಣ ಹಂಚಿನಾಳ ಹಾಗೂ ಯಲ್ಲಪ್ಪ ಹೆಗಡೆ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿದರು. ಜಿಲ್ಲಾಡಳಿತ ಭವನದೊಳಗೆ ಹೋಗಲು ಪೊಲೀಸರು ತಡೆಯೊಡ್ಡಿದ್ದರಿಂದ ರೈತರು …

Read More »

ಕಂದಾಯ ಇಲಾಖೆ ಕಚೇರಿಯಲ್ಲಿ ಲಂಚದ ರೇಟ್ ಕಾರ್ಡ್ ಹಾಕಿ: ಸಚಿವ ಕೃಷ್ಣ ಬೈರೇಗೌಡ ಕಿಡಿ

ಬೆಂಗಳೂರು (ಜೂ.20): ಪ್ರತಿಯೊಂದು ಕೆಲಸಕ್ಕೂ ಲಂಚ, ಅಲೆದಾಟ, ವಿಳಂಬ ನೀತಿಯ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಹೆಚ್ಟುವರಿ ಆಯುಕ್ತರ ಕಚೇರಿಗಳು ಮತ್ತು ತಹಸೀಲ್ದಾರ್ ಕಚೇರಿಗಳಿರುವ ಕಂದಾಯ ಭವನಕ್ಕೆ ಗುರುವಾರ ದಿಢೀರ್ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಇಂಥ ಕೆಲಸಕ್ಕೆ ಇಂತಿಷ್ಟು ಲಂಚ ಆಗುತ್ತದೆ ಎನ್ನುವ ‘ಲಂಚದ ದರ ಫಲಕವನ್ನೇ ಅಳವಡಿಸಿಬಿಡಿ’ ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದರು. ದಿಢೀರ್ ಭೇಟಿಗೆ …

Read More »

ಬ್ರೇಕ್ ಫೆಲ್ಯೂರ್ ಆಗಿ ಬೈಕ್ – ಕಾರಿಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್

ಬೆಂಗಳೂರು : ಬ್ರೇಕ್ ಫೆಲ್ಯೂರ್ ಆಗಿ ಶಾಲಾ ಬಸ್​ವೊಂದು ನಿಯಂತ್ರಣ ತಪ್ಪಿ ಕಾರು ಹಾಗೂ ಬೈಕ್​ಗೆ ಡಿಕ್ಕಿ ಹೊಡೆದಿರುವ ಘಟನೆ ಬುಧವಾರ ಬೆಳಗ್ಗೆ ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕನ್ನಮಂಗಲ ಗೇಟ್​ನಿಂದ ವೈಟ್ ಫೀಲ್ಡ್ ಕಡೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಜೈನ್ ಹೆರಿಟೇಜ್ ಶಾಲೆಯ ಬಸ್ ಇದಾಗಿದೆ. ಮಕ್ಕಳನ್ನ ಶಾಲೆಗೆ ಬಿಟ್ಟು ಇಂಧನ ತುಂಬಿಸಿಕೊಳ್ಳಲು ಬಸ್ ಚಾಲಕ ಪೆಟ್ರೋಲ್ ಬಂಕ್​ಗೆ ಹೋಗುವಾಗ ಬ್ರೇಕ್ …

Read More »

ಇಸ್ರೇಲ್ ನಿಂದ ತವರಿಗೆ ಬಂದ ಕನ್ನಡಿಗರು

ಬೆಂಗಳೂರು : ಪೌರಾಡಳಿತ ಅಧ್ಯಯನಕ್ಕೆಂದು ಇಸ್ರೇಲ್ ಪ್ರವಾಸಕ್ಕೆ ರಾಜ್ಯದಿಂದ ತೆರಳಿದ್ದ 18 ಜನರ ತಂಡ ರಾಜ್ಯಕ್ಕೆ ಗುರುವಾರ ಹಿಂದಿರುಗಿದೆ. ಇಸ್ರೇಲ್ ದೇಶದಲ್ಲಿ ಪೌರಾಡಳಿತ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅಧ್ಯಯನ ಮಾಡುವುದಕ್ಕಾಗಿ ರಾಜ್ಯದಿಂದ ಬಿ ಪ್ಯಾಕ್ ತಂಡದಲ್ಲಿ 18 ಜನರು ತೆರಳಿದ್ದರು. ಇರಾನ್​ -ಇಸ್ರೇಲ್​ ದೇಶಗಳ ನಡುವೆ ಕಳೆದ ಕೆಲ ದಿನಗಳಿಂದ ಭೀಕರ ಯುದ್ಧ ನಡೆಯುತ್ತಿದೆ. ಈ ಮಧ್ಯೆ ಇಸ್ರೇಲ್​ನಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಇಸ್ರೇಲ್ ನಿಂದ ಕುವೈತ್​, ಕುವೈತ್​ನಿಂದ ಮುಂಬೈ …

Read More »

ಜೂನ್ 21 ರಂದು ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯು ಮೂಡಲಗಿ ಪಟ್ಟಣದ ಆರ್ ಡಿ ಎಸ್ ಕಾಲೇಜಿನ ಮೈದಾನದಲ್ಲಿ

ಗೋಕಾಕ- ಜೂನ್ 21 ರಂದು ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯು ಮೂಡಲಗಿ ಪಟ್ಟಣದ ಆರ್ ಡಿ ಎಸ್ ಕಾಲೇಜಿನ ಮೈದಾನದಲ್ಲಿ ಜರುಗಲಿದ್ದು, ಪಟ್ಟಣದ ನಾಗರೀಕರು ಇದರಲ್ಲಿ ಭಾಗಿಯಾಗುವ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸುವಂತೆ ಅರಭಾವಿ ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳು ಮತ್ತು ಸಾರ್ವಜನಿಕಕರಲ್ಲಿ ಮನವಿ ಮಾಡಿಕೊಂಡರು. ಗುರುವಾರದಂದು ನಗರದ ಎನ್ ಎಸ್ ಎಫ್ ಕಚೇರಿಯಲ್ಲಿ ಮೂಡಲಗಿ ಪಟ್ಟಣದ ಮುಖಂಡರು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ …

Read More »

ಅಶೋಕ ಚಂದರಗಿ ಅವರಿಗೆ ಚಂಪಾ ಸಿರಿಗನ್ನಡ ಪ್ರಶಸ್ತಿ”

ಬೆಳಗಾವಿಯ ಅಶೋಕ ಚಂದರಗಿ ಅವರಿಗೆ ಚಂಪಾ ಸಿರಿಗನ್ನಡ ಪ್ರಶಸ್ತಿ” ಬೆಂಗಳೂರಿನ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ವತಿಯಿಂದ ದಿ.ಚಂದ್ರಶೇಖರ ಪಾಟೀಲ ಅವರ ಸ್ಮರಣಾರ್ಥ ಪ್ರತಿವರ್ಷ ನೀಡುವ ” ಚಂಪಾ ಸಿರಿಗನ್ನಡ ಪ್ರಶಸ್ತಿ”ಯನ್ನು ಬೆಳಗಾವಿಯ ಅಶೋಕ ಚಂದರಗಿ ಅವರಿಗೆ ನೀಡಿ ಸನ್ಮಾನಿಸಲಾಯಿತು. ಇಂದು ಬುಧವಾರ ಜೂನ್ 18 ರಂದು ಬೆಂಗಳೂರಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ವತಿಯಿಂದ ದಿ.ಚಂದ್ರಶೇಖರ ಪಾಟೀಲ ಅವರ ಸ್ಮರಣಾರ್ಥ ಖ್ಯಾತ ಸಾಹಿತಿ ಡಾ.ಬರಗೂರು …

Read More »

ಬಾಗಲಕೋಟೆ ನೂತನ ಡಿಸಿಯಾಗಿ ಸಂಗಪ್ಪ ಎಂ. ಅಧಿಕಾರ ಸ್ವೀಕಾರ

ಬಾಗಲಕೋಟೆ ನೂತನ ಡಿಸಿಯಾಗಿ ಸಂಗಪ್ಪ ಎಂ. ಅಧಿಕಾರ ಸ್ವೀಕಾರ ಬಾಗಲಕೋಟೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಂಗಪ್ಪ ಎಂ. ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ನೂತನ ಜಿಲ್ಲಾಧಿಕಾರಿಗೆ ಪುಷ್ಪ ನೀಡಿ ಸ್ವಾಗತಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಉಪವಿಭಾಗ ಅಧಿಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ ಸೇರಿದಂತೆ ಆಯಾ …

Read More »