Breaking News

ಜಿಲ್ಲೆ

ಕಲಾ ವಿಭಾಗದಲ್ಲಿ 600ಕ್ಕೆ 594

ಬೆಳಗಾವಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಲಿಂಗರಾಜ ಪದವಿ ಪೂರ್ವ ಕಾಲೇಜಿನ‌ ವಿದ್ಯಾರ್ಥಿನಿ ಸೃಷ್ಠಿ ಚಿದಾನಂದ ಸೊಲೋನಿ ಕಲಾ ವಿಭಾಗದಲ್ಲಿ 600ಕ್ಕೆ 594 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 3ನೇ ರ್ಯಾಂಕ್ ಬಂದಿದ್ದಾರೆ. ಸೃಷ್ಠಿ ಮೂಲತಃ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಸೈದಾಪುರ ಗ್ರಾಮದವರು. ತಂದೆ ಚಿದಾನಂದ ಸೊಲೋನಿ ರೈತರಾಗಿದ್ದು, ತಾಯಿ ಹೇಮಲತಾ ಗೃಹಿಣಿ ಆಗಿದ್ದಾರೆ. ಬಡ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿರುವ ಸೃಷ್ಠಿ ಇಂದು ಇಡೀ ರಾಜ್ಯವೇ ಹೆಮ್ಮೆ …

Read More »

ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ್

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ನಿಡಸೋಸಿಯ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಂಕಿತ್ ಭೀಮಪ್ಪ ಕಾರತಗಿ ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ 2ನೇ ರ್ಯಾಂಕ್ ಗಳಿಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ.‌ ಮೂಲತಃ ಗೋಕಾಕ್ ತಾಲ್ಲೂಕಿನ ರಾಜಾಪುರ ಗ್ರಾಮದ ಅಂಕಿತ್ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಕನ್ನಡ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದರೆ, ಇಂಗ್ಲೀಷ ನಲ್ಲಿ ಮಾತ್ರ 98 …

Read More »

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

ಬೆಳಗಾವಿ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಬೈಲಹೊಂಗಲ ತಾಲ್ಲೂಕಿನ ಒಕ್ಕುಂದ ಗ್ರಾಮದ ವಿದ್ಯಾರ್ಥಿನಿ ಜ್ಯೋತಿ ಮಲ್ಲನಗೌಡ ಪಾಟೀಲ 600ಕ್ಕೆ 586 ಅಂಕ ಗಳಿಸಿ, ಅತ್ಯುತ್ತಮ ಸಾಧನೆಗೈದಿದ್ದಾಳೆ. ಹುಕ್ಕೇರಿ ತಾಲ್ಲೂಕಿನ ನಿಡಸೋಸಿಯ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಗಿರುವ ಜ್ಯೋತಿ ಪಾಟೀಲ, ಕನ್ನಡ 100, ಇಂಗ್ಲೀಷ 98, ಭೌತಶಾಸ್ತ್ರ 98, ರಸಾಯನಶಾಸ್ತ್ರ 96, ಜೀವಶಾಸ್ತ್ರ 98, ಗಣಿತ 98 ಅಂಕ ಸಿಕ್ಕಿದೆ. ಮಗಳ ಈ ಸಾಧನೆಗೆ …

Read More »

ಗ್ರಾಮೀಣ ಜಾತ್ರೆಗಳನ್ನು ನೋಡುವುದೇ ಚೆಂದ: ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ಸಂಜೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ನಾಗೇರಹಾಳ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ, ನೂತನ ರಥೋತ್ಸವ ಮತ್ತು ಶ್ರೀ ಗ್ರಾಮದೇವಿಯ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗ್ರಾಮಸ್ಥರಿಗೆ ಶುಭ ಕೋರಿದರು. ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೆಗಳನ್ನು ನೋಡುವುದೇ ಚೆಂದ. ಗ್ರಾಮಸ್ಥರೆಲ್ಲ ಒಟ್ಟಾಗಿ ಭಕ್ತಿ ಹಾಗೂ ಸಂಭ್ರಮದಿಂದ ಜಾತ್ರೆಯನ್ನು ಆಚರಿಸುತ್ತಾರೆ. ಇದು ಗ್ರಾಮಗಳ ಒಗ್ಗಟ್ಟಿನ ಪ್ರತೀಕವೂ ಹೌದು …

Read More »

ದತ್ತಪೀಠದ ತಪ್ಪಲಿನಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶವವಾಗಿ ಪತ್ತೆ

ಚಿಕ್ಕಮಗಳೂರು: ದತ್ತಪೀಠದ ತಪ್ಪಲಿನಲ್ಲಿ ನಾಪತ್ತೆಯಾಗಿದ್ದ ಕೇರಳದ  ಪಾಲಕ್ಕಾಡ್ ಮೂಲದ ಬಾಲಕಿ ಶ್ರೀನಂದಾ (15) ಶವ ಪತ್ತೆಯಾಗಿದೆ. ಅರಿಶಿನಗುಪ್ಪಿಯಿಂದ 5 ಕಿ.ಮೀ ದೂರದ, ಸುಮಾರು 1500 ಅಡಿ  ಪ್ರಪಾತದಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದೆ. ಮಂಗಳವಾರ (ಏ.7) ಸಂಜೆ ಮಾಣಿಕ್ಯಾಧಾರ ಜಲಪಾತ ವೀಕ್ಷಿಸಲು ಹೋಗುವಾಗ ಬಾಲಕಿ ಕಣ್ಮರೆಯಾಗಿದ್ದಳು. 41 ಕುಟುಂಬದ ಸದಸ್ಯರೊಂದಿಗೆ ಹಂಪಿ ಪ್ರವಾಸ ಮುಗಿಸಿ ಇಲ್ಲಿಗೆ ಬಂದಿದ್ದ ಶ್ರೀನಂದಾ, ನಾಪತ್ತೆಯಾಗುವ ಕೇವಲ ಐದು ನಿಮಿಷಗಳ ಮೊದಲು ತಂದೆಯ ಮೊಬೈಲ್‍ನಲ್ಲಿ ಅತ್ಯಂತ ಖುಷಿಯಿಂದ …

Read More »

ನಾಳೆ ಮಾಜಿ ಸಚಿವ ವಿನಯ್ ಕುಲಕರ್ಣಿ ಭವಿಷ್ಯ – ಯೋಗೇಶ್‌ ಗೌಡ ಕೊಲೆ ಕೇಸ್‌ ತೀರ್ಪು

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ  ಕೊಲೆ ಪ್ರಕರಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆ ಪ್ರಕಟಿಸಲಿದೆ. ಕಳೆದ 6 ತಿಂಗಳಿಂದ ಪ್ರಕರಣದ ವಿಚಾರಣೆ ನಡೆಸುತ್ತಾ ಇದ್ದ ನ್ಯಾಯಾಲಯ ಸಂಪೂರ್ಣ ವಾದ-ಪ್ರತಿವಾದ ಆಲಿಸಿತ್ತು. ಮಾರ್ಚ್ ಕೊನೆಯ ವಾರದಲ್ಲಿ ವಾದ ಸಂಪೂರ್ಣವಾಗಿ ಆಲಿಸಿದ್ದ ನ್ಯಾಯಾಲಯ ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರಿಗೆ ಹೆಚ್ಚುವರಿ ಲಿಖಿತ ವಾದ ಸಲ್ಲಿಕೆ ಮಾಡಲು ಅವಕಾಶ ನೀಡಿತ್ತು. ಏಪ್ರಿಲ್ 2 ರಂದು ಎಲ್ಲರೂ …

Read More »

ನೀರು ಕೇಳಿ ಪ್ರತಿಭಟಿಸಿದ್ದ 80 ಮಂದಿ ವಿರುದ್ಧ ಎಫ್‌ಐಆರ್

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ  ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಹಾಕಿ, ಪ್ರತಿಭಟನೆ ಮಾಡಿದ್ದ 80 ಜನರ ವಿರುದ್ಧ ಎಫ್‌ಐಆರ್  ದಾಖಲಾಗಿದೆ. ಪಿಡಿಓ ಅವರು ಪೊಲೀಸ್ ಠಾಣೆಯಲ್ಲಿ ನೀರು ಕೇಳಿದ 80 ಜನ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಈ ಹಿನ್ನೆಲೆ ತನಿಖೆ ನಡೆಸಿ ವರದಿ ನೀಡುವಂತೆ ಸಚಿವ ಶರಣಪ್ರಕಾಶ್ ಪಾಟೀಲ್ ಆದೇಶಿಸಿದ್ದಾರೆ. ರಾಯಚೂರಿನಲ್ಲಿಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು …

Read More »

ಕದಂಬರ ಉಪರಾಜಧಾನಿ ಹಲಸಿಯಲ್ಲಿ ಮಹಾಲಕ್ಷ್ಮೀ ಜಾತ್ರೆ: ಭಕ್ತಿ ಭಾವದ ಹೊನ್ನಾಟದಲ್ಲಿ ಮಿಂದೆದ್ದ ಭಕ್ತಸಾಗರ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹಲಸಿ ಗ್ರಾಮದಲ್ಲಿ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಅತ್ಯಂತ ಅದ್ಧೂರಿಯಾಗಿ ನೆರವೇರುತ್ತಿದೆ. ಕದಂಬರ ಕಾಲದ ಈ ಉಪರಾಜಧಾನಿಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ದೇವಿಯ ಹೊನ್ನಾಟ ನಡೆಯುವ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ಸಿಕ್ಕಿದ್ದು, ಗ್ರಾಮದಾದ್ಯಂತ ಹಬ್ಬದ ವಾತಾವರಣ ಮನೆಮಾಡಿದೆ. ಖಾನಾಪುರ ತಾಲೂಕಿನ ಕದಂಬರ ಕಾಲದ ಐತಿಹಾಸಿಕ ಉಪರಾಜಧಾನಿ ಹಲಸಿ ಗ್ರಾಮದಲ್ಲಿ ಮಹಾಲಕ್ಷ್ಮೀ ಜಾತ್ರೆಯು ಅತ್ಯಂತ ಸಡಗರ ಹಾಗೂ ಭಕ್ತಿ ಭಾವದಿಂದ ಪ್ರಾರಂಭವಾಯಿತು. ಇಂದು ಬೆಳ್ಳಂಬೆಳಿಗ್ಗೆ …

Read More »

ಬೆಳಗಾವಿ ಜಿಲ್ಲೆಯಲ್ಲಿ ಜಲಕ್ಷಾಮದ ಭೀತಿ: ಬೇಸಿಗೆ ಆರಂಭದಲ್ಲೇ ಘಟಪ್ರಭಾ ನದಿ ಖಾಲಿ ಖಾಲಿ!

ಉತ್ತರ ಕರ್ನಾಟಕದ ರೈತರ ಮತ್ತು ಸಾರ್ವಜನಿಕರ ಜೀವನಾಡಿ ಘಟಪ್ರಭಾ ನದಿ ಈಗ ಬರಿದಾಗುತ್ತಿದೆ. ಮಹಾರಾಷ್ಟ್ರದಲ್ಲಿ ಹುಟ್ಟಿ ಕರುನಾಡಿನಾದ್ಯಂತ ಹರಿಯುವ ಈ ನದಿ, ಬೇಸಿಗೆಯ ಆರಂಭದಲ್ಲೇ ಬತ್ತಿ ಹೋಗುತ್ತಿರುವುದು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಜನರಲ್ಲಿ ಆತಂಕ ಮೂಡಿಸಿದೆ. ಹಿಡಕಲ್ ಜಲಾಶಯದ ನೀರಿನ ಮಟ್ಟದಲ್ಲೂ ಗಣನೀಯ ಇಳಿಕೆಯಾಗಿದ್ದು, ಮುಂದಿನ ದಿನಗಳು ಕಷ್ಟಕರವಾಗುವ ಮುನ್ಸೂಚನೆ ಸಿಗುತ್ತಿದೆ. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಸಹಸ್ರಾರು ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಆಧಾರವಾಗಿರುವ ಘಟಪ್ರಭಾ …

Read More »

ಅಶೋಕ ಚಂದರಗಿ ನೇತೃತ್ವದ ಕನ್ನಡ ಸಂಘಟನೆಗಳ ಹೋರಾಟಕ್ಕೆ ಸಂದ ಜಯ ರಾಜ್ಯೋತ್ಸವ ಅನುದಾನ ದುರ್ಬಳಕೆ ತನಿಖೆಗೆ ಸರ್ಕಾರ ಆದೇಶ

ಬೆಳಗಾವಿಯ ಹಿರಿಯ ಹೋರಾಟಗಾರ ಅಶೋಕ ಚಂದರಗಿ ನೇತೃತ್ವದಲ್ಲಿ ನಡೆದ ಕನ್ನಡ ಸಂಘಟನೆಗಳ ಹೋರಾಟಕ್ಕೆ ಕೊನೆಗೂ ದೊಡ್ಡ ಯಶಸ್ಸು ಸಿಕ್ಕಿದೆ. ರಾಜ್ಯೋತ್ಸವದ 50 ಲಕ್ಷ ರೂಪಾಯಿ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ, ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ. ಬೆಳಗಾವಿ ಜಿಲ್ಲಾಡಳಿತವು ಕನ್ನಡ ಸಂಘಟನೆಗಳ ಸಲಹೆಗಳನ್ನು ಕಡೆಗಣಿಸಿ ಹಾಗೂ ಸರ್ಕಾರದ ಶರತ್ತುಗಳನ್ನು ಉಲ್ಲಂಘಿಸಿ ಕಾರ್ಯಕ್ರಮ ಆಯೋಜಿಸಿದ್ದರ ವಿರುದ್ಧ ಅಶೋಕ ಚಂದರಗಿ ಅವರ …

Read More »