Breaking News

ಜಿಲ್ಲೆ

ಸಿಲಿಂಡರ್ ಬ್ಲಾಸ್ಟ್ – ಧಗಧಗಿಸಿದ ಕಟ್ಟಡ, ಇಬ್ಬರಿಗೆ ಗಂಭೀರ ಗಾಯ

ಬೆಂಗಳೂರು: ಕೆ.ಆರ್.ಪುರಂನ  ಮಂಜುನಾಥ್ ಲೇಔಟ್‍ನಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ ಕಟ್ಟಡಕ್ಕೆ ಬೆಂಕಿ ಆವರಿಸಿದೆ. ಈ ಅವಘಡದಲ್ಲಿ  ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಪೂರ್ಣಿಮ (46), ವೆಂಕಟೇಶ್ (40) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೂರ್ಣಿಮಾ ಅವರ ಸ್ಥಿತಿ ಗಂಭೀರವಾಗಿದೆ. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More »

ಶ್ರೀ ಸಿದ್ಧಾರೂಢಸ್ವಾಮಿ ರಥೋತ್ಸವ 16ರಂದು

ಹುಬ್ಬಳ್ಳಿ: ಶಿವನ ಅವತಾರಿಯಾದ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಗಳು ಪ್ರಾರಂಭಿಸಿದ ಶಿವರಾತ್ರಿ ಉತ್ಸವ 123 ವರ್ಷ ಪೂರೈಸಿದ್ದು, 124ನೇ  ಶಿವರಾತ್ರಿ ಉತ್ಸವ ಫೆ. 10ರಿಂದ ಆರಂಭಗೊಂಡು ಫೆ. 18ರಂದು ಸಂಪನ್ನಗೊಳ್ಳಲಿದೆ ಎಂದು ಶ್ರೀ ಸಿದ್ಧಾರೂಢಮಠ ಟ್ರಸ್ಟ್ ಕಮಿಟಿ ಚೇರಮನ್ ಚನ್ನವೀರ ಮುಂಗುರವಾಡಿ ಹೇಳಿದರು. ಶ್ರೀ ಸಿದ್ಧಾರೂಢಮಠದ ಸಭಾಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಫೆ. 15ರಂದು ಶ್ರೀಗಳವರ ಪಾಲಕಿ ನಗರದಲ್ಲಿ ಸಂಚರಿಸಿ ರಾತ್ರಿ ಶ್ರೀಮಠಕ್ಕೆ ಬಂದ ನಂತರ ಅಹೋರಾತ್ರಿ ಜಾಗರಣೆ ನಡೆಯಲಿದೆ. 16ರಂದು …

Read More »

ಇಪೌತಿ’ ವಾರಸುದಾರರ ಮನವೊಲಿಸಿ: ಕಂದಾಯ ಸಚಿವ ಕೃಷ್ಣಬೈರೇಗೌಡ

ಗದಗ: ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಜರುಗಿತು. ಇಪೌತಿ, ಕಂದಾಯ ಗ್ರಾಮ, ಹಕ್ಕುಪತ್ರ ವಿತರಣೆ, ಆಕಾರಬಂಧ, ಅನುಬಂಧ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದರ ಸಚಿವರು ಇಲಾಖೆ ಪ್ರಗತಿ ಬಗ್ಗೆ ಸಿಬ್ಬಂದಿಗಳು ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು. ಈ ವೇಳೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ಮೃತರ ಹೆಸರಿನಲ್ಲಿ ಯಾವುದೇ ಯೋಜನೆ, ವಿಮೆ ಪಡೆಯುವಂತಿಲ್ಲ. ವಾರಸುದಾರರಿದ್ದು, ಅವರ ಹೆಸರು ಪಹಣಿಯಲ್ಲಿ ಸೇರ್ಪಡೆ ಆಗದಿದ್ದರೆ ವಾರಸುದಾರರೂ …

Read More »

ಬಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ: ಸಿದ್ಧರ ಗುಹೆಯೊಳಗಿದೆ ಅಪಾರ ಸಂಪತ್ತು

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ (ನಿಧಿ ಸಿಕ್ಕ ಬೆನ್ನಲ್ಲೇ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದೀಗ ನಾಗಾವಿ ಗ್ರಾಮದ ಗುಡ್ಡದಲ್ಲಿನ ನಿಗೂಢ ಗುಹೆಯ ಬಾವಿಗೂ ಲಕ್ಕುಂಡಿಯ ಮುಸುಕಿನ ಬಾವಿಗೆ ಸಂಬಂಧವಿದೆ. ನಾಗಾವಿ ಗುಹೆಯಲ್ಲಿನ ಬಾವಿಯಲ್ಲಿ ವಸ್ತುವೊಂದನ್ನು ತೇಲಿ ಬಿಟ್ಟರೆ ಅದು ಲಕ್ಕುಂಡಿ ಮುಸುಕಿನ ಬಾವಿಗೆ ಹೋಗ್ತಾಯಿತ್ತಂತೆ. ಸಿದ್ಧಿ ಪುರುಷರು ವಾಸವಾಗಿದ್ದ ಗುಹೆಯಲ್ಲಿ ಅಪಾರ ನಿಧಿ ಸಂಪತ್ತಿಗೆ ಹಾವಿನ ಕಾವಲುವಿದೆಯಂತೆ. ಚಿನ್ನದ ನಿಧಿ ಮುಟ್ಟಲು ಬಿಡೋದಿಲ್ಲ. ಇನ್ನೊಂದೆಡೆ ಶತಮಾನಗಳ ಹಿಂದೆ ಆಕಳೊಂದು ಈ ಗುಹೆಯೊಳಗೆ ಹೋಗಿ …

Read More »

ಹುಕ್ಕೇರಿ : ಮುಸ್ಲಿಂ ಮನೆಯಲ್ಲಿ ಬೆಳೆದು ಹಿಂದೂ ಸಂಪ್ರದಾಯದಂತೆ ಮದುವೆ ಯಾದ ಯುವಕ

ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಮುಸ್ಲಿಂ ದಂಪತಿಗಳು ಹಿಂದೂ ಅನಾಥ ಮಕ್ಕಳಿಗೆ ಬೆಳಕಾಗಿ ಸಾಕಿ ಬೆಳೆಸಿ ಶಿಕ್ಷಣ ಕೊಡಿಸಿ ಈಗ ಹಿಂದೂ ವಧುವನ್ನು ಹುಡಕಿ ಮದುವೆ ಮಾಡಿಸಿದ ಅಪರೂಪದ ಘಟನೆ ಜರುಗಿದೆ. ಹೌದು ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ಮುಸ್ಲಿಂ ದಂಪತಿಗಳಾದ ಮೆಹಬೂಬ್ ಹಸನ ನಾಯಿಕವಾಡಿ ಹಾಗೂ ನೂರಜಾನ್ ರವರು ಇಬ್ಬರೂ ಅನಾಥ ಹಿಂದೂ ಮಕ್ಕಳನ್ನು ಸಾಕಿ ಸಲುಹಿ ದೊಡ್ಡವರಾದ ಮೇಲೆ ಇಡಿ ಮುಸ್ಲಿಂ ಕುಟುಂಬಸ್ಥರು ಸೇರಿ ಹಿಂದೂ ವಧುವನ್ನು …

Read More »

ಚಿಕ್ಕೋಡಿ ತಾಲೂಕಿನ 4 ಏತ ನೀರಾವರಿ ಯೋಜನೆಗೆ 2 ಕೋಟಿ ಅನುದಾನ ಮಂಜೂರು: ಎಂಎಲ್ಸಿ ಪ್ರಕಾಶ ಹುಕ್ಕೇರಿ

ಚಿಕ್ಕೋಡಿ:ನನ್ನ ಹಾಗೂ ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದಿಂದ ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯ ಇಂಗಳಿ ಗ್ರಾಮದ-2 ಯಕ್ಸಂಬಾ ಹಾಗೂ ಯಡೂರವಾಡಿ ಗ್ರಾಮಗಳ ಒಟ್ಟು 04 ಏತ ನೀರಾವರಿ ಯೋಜನೆಗಳ 159 ಎಕರೆ ಜಮೀನುಗಳಿಗೆ ರೂ. 2.00 ಕೋಟಿಗಳ ಅನುದಾನ ಮಂಜೂರಾಗಿದೆ ಎಂಎಲ್ಸಿ ಪ್ರಕಾಶ ಹುಕ್ಕೇರಿ ಹೇಳಿದರು. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಂಜೂರಾದ ಆದೇಶ ಪತ್ರವನ್ನು ವಿತರಿಸಿ ಮಾತನಾಡಿ ಅವರು ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯಲ್ಲಿ ಇಂಗಳಿ, ಯಕ್ಸಂಬಾ ಹಾಗೂ ಯಡೂರವಾಡಿ ಗ್ರಾಮದ …

Read More »

ಮೆಟ್ರೋ ಜಟಾಪಟಿ| ʻಕಾಂಗ್ರೆಸ್‌ ಸರ್ಕಾರ ಖಾಲಿ ಟ್ರಂಕ್‌ ಸರ್ಕಾರʼ ಟ್ರಂಕ್‌ ಹಿಡ್ಕೊಂಡು ಬಂದ ತೇಜಸ್ವಿ ಸೂರ್ಯ ವಶಕ್ಕೆ

ಬೆಂಗಳೂರು: ಮೆಟ್ರೋ ದರ  ಏರಿಸಿದ್ದನ್ನು ಖಂಡಿಸಿ ಆರ್‌ವಿ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಸಂಸದ ತೇಜಸ್ವಿ ಸೂರ್ಯ  ಮತ್ತು ಜಯನಗರದ ಶಾಸಕ ರಾಮಮೂರ್ತಿ  ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್‌ ನೀಡಿದ್ದರೂ ಇಂದು ಬಿಜೆಪಿ (BJP) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಖಾಲಿ ಟ್ರಂಕ್‌ ಹಿಡಿದುಕೊಂಡು ಬಂದ ತೇಜಸ್ವಿ ಸೂರ್ಯ ಟ್ರಂಕ್‌ ತೆರೆದು ರಾಜ್ಯ ಸರ್ಕಾರ ಖಾಲಿಯಾಗಿದೆ ಎಂದು ಹೇಳಿದರು. ನಾನು …

Read More »

ಸಮಜಾವೇ ನನ್ನ ಕುಟುಂಬ : ಮಠಕ್ಕೆ ಭಕ್ತರಾಗಿ ಬನ್ನಿ

ಬಾಗಲಕೋಟೆ: ಸಮಾಜವನ್ನೇ ಕುಟುಂಬ ಮಾಡಿಕೊಂಡು ಶ್ರಮಿಸುವ ಕೆಲಸ ಮಠಾಧಿಪತಿಯದಾಗಿದ್ದು ಮಠಕ್ಕೆ ಬರುವಾಗ ರಾಜಕೀಯ ವ್ಯಕ್ತಿಗಳಾಗದೇ ಭಕ್ತರಾಗಿ ಬನ್ನಿ ಎಂದು ನೂತನ ಚರಪಟ್ಟಾಧಿಕಾರಿಯಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಗುರು ಶ್ರೀ ರೇವಣಸಿದ್ದ ಸ್ವಾಮಿಗಳು ಹೇಳಿದರು. ನಗರದ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ಯ ಚರಂತಿಮಠದ ಆವರಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಶೂನ್ಯಪೀಠಾರೋಹಣ ಕಾರ್ಯಕ್ರಮದಲ್ಲಿ ವಿರಕ್ತಮಠದ ಶ್ರೀ ಜಡೆಯ ಶಾಂತಲಿಂಗೇಶ್ವರ ಲಿಂಗಹಸ್ತದಿಂದ ಚಿರಪಟ್ಟಾಧಿಕಾರ ಪಡೆದು ಶೂನ್ಯಪೀಠಾರೋಹಣ ಮಾಡಿ ಅವರು ಮಾತನಾಡಿದರು. ಗುರುವಿಗಾಗಿ …

Read More »

ಶತಮಾನದ ಸಾಧಕ ಡಾ.ಪ್ರಭಾಕರ – ಸಚಿವ ವಿ.ಸೋಮಣ್ಣ

ಬೆಳಗಾವಿ: ಶಿಕ್ಷಣ, ಕೃಷಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಡಾ.ಪ್ರಭಾಕರ ಕೋರೆ ಕೊಡುಗೆ ಅಪಾರವಾದುದು. ಅವರ ಸಮಾಜಮುಖಿ ಸೇವೆ, ಧಾರ್ಮಿಕತೆಯ ಮನಸ್ಸು ಅವರನ್ನು ಎತ್ತರಕ್ಕೆ ಬೆಳೆಸಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶ್ಲಾಘಿಸಿದರು. ನಗರದ ಡಾ.ಪ್ರಭಾಕರ ಕೋರೆಯವರ ಸ್ವಗೃಹಕ್ಕೆ ಶನಿವಾರ ಆಗಮಿಸಿ, ಪದ್ಮಶ್ರೀಗೆ ಭಾಜನರಾಗಿದ್ದಕ್ಕಾಗಿ ಸತ್ಕರಿಸಿ ಬಳಿಕ ಕುಶಲೋಪಹರಿ ವಿಚಾರಿಸಿ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ ಕೋರೆ ಅವರು ಸಮಾಜ ಸೇವೆಯನ್ನು ಒಂದು ವ್ರತವನ್ನಾಗಿಸಿ ಸ್ವೀಕರಿಸಿ ಶ್ರಮಿಸಿದವರು. …

Read More »

ಭೂ ಸ್ವಾಧಿನ ಸಮಸ್ಯೆಯಿಂದಾಗಿ ರೈಲ್ವೆ ಹೊಸ ಯೋಜನೆಗಳು ವಿಳಂಬವಾಗುತ್ತಿವೆ: ಸಚಿವ ವಿ.ಸೋಮಣ್ಣ

ಬೆಳಗಾವಿ: ಬೆಳಗಾವಿ&ಧಾರವಾಡ ನಡುವೆ ನೇರ ರೈಲು ಮಾರ್ಗ, ಬಾಗಲಕೋಟೆ&ಕುಡಚಿ, ಲೋಕಾಪುರ&ಯಾದವಾಡ, ಬೆಂಗಳೂರು&ಕೋಲಾರ ಸೇರಿ ಹತ್ತಕ್ಕೂ ಅಧಿಕ ರೈಲ್ವೆ ಹೊಸ ಯೋಜನೆಗಳು ಭೂ ಸ್ವಾಧಿನ ಸಮಸ್ಯೆಯಿಂದಾಗಿ ವಿಳಂಬವಾಗುತ್ತಿವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ನಿಗದಿತ ವೇಳೆ ಭೂ ಸ್ವಾಧಿನ ಮಾಡಿ ಹಸ್ತಾಂತರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಎಂದರು. ಕೇಂದ್ರ ಸರ್ಕಾರ 2026&27ನೇ ಬಜೆಟ್​ನಲ್ಲಿ ೂಷಿಸಿದಂತೆ ಬೆಂಗಳೂರು ಕೇಂದ್ರದಿಂದ …

Read More »