Breaking News
Home / ಜಿಲ್ಲೆ / ಯಾದಗಿರಿ (page 2)

ಯಾದಗಿರಿ

ಈಜಲು ತೆರಳಿದ್ದ ನಾಲ್ವರು ಹುಡುಗರು ನೀರು ಪಾಲಾದ ಘಟನೆ

ಯಾದಗಿರಿ: ಭೀಮಾ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಹುಡುಗರು ನೀರು ಪಾಲಾದ ಘಟನೆ ಯಾದಗಿರಿ ನಗರದ ಹೊರವಲಯದ ಗುರುಸಣಗಿ ಬ್ರಿಡ್ಜ್ ಬಳಿ ಸಂಜೆ ನಡೆದಿದೆ. ನಗರದ ಹೊರವಲಯದ ಗುರಸಣಗಿ ಬ್ರಿಡ್ಜ್ ಬಳಿಯ ಭೀಮಾ ನದಿಗೆ ಈಜಲು ಐವರು ಸ್ನೇಹಿತರು ತೆರಳಿದ್ದಾರೆ. ಇದರಲ್ಲಿ ಅಬ್ದುಲ್‍ನನ್ನು ದಡದಲ್ಲಿ ನಿಲ್ಲಿಸಿ, ಯಾದಗಿರಿಯ ಅಮಾನ್ (16), ಅಯಾನ್ (16), ರೆಹಮಾನ್ (16), ಕಲಬುರಗಿ ಮೂಲದ ರೆಹಮಾನ್ (15 ) ನಾಲ್ವರು ನದಿಗೆ ಈಜಲು ಇಳಿದಿದ್ದಾರೆ. ಈ …

Read More »

ಭರವಸೆ ನೀಡಿದ ಎರಡೇ ದಿನಕ್ಕೆ ಮುಂಬೈಯಿಂದ ದಿನಸಿ ಕಳುಹಿಸಿದ್ದಾರೆ.:ಸೋನು ಸೂದ್

ಯಾದಗಿರಿ: ತ್ರಿವಳಿ ಮಕ್ಕಳ ಜನನದಿಂದಾಗಿ ಚಿಂತೆಗೀಡಾಗಿದ್ದ, ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಪದ್ಮಾ ಕುಟುಂಬಕ್ಕೆ ನಟ ಸೋನು ಸೂದ್ ಕೊಟ್ಟ ಮಾತಿನಂತೆ ಸಹಾಯವನ್ನು ಮಾಡಿದ್ದಾರೆ. ಈ ತಿಂಗಳ 22ರಂದು ಪದ್ಮಾ ದಂಪತಿಗೆ ಏಕಕಾಲದಲ್ಲಿ ಮೂರು ಗಂಡು ಮಕ್ಕಳು ಜನಿಸಿದ್ದವು. ಕಡು ಬಡತನದಲ್ಲಿದ್ದ ಈ ಕುಟುಂಬ ಸಹಾಯ ಹಸ್ತವನ್ನು ಚಾಚಿದ್ದರು, ಈ ಸುದ್ದಿಯನ್ನು ಯಾದಗಿರಿಯ ಮಲ್ಲಿಕಾರ್ಜುನ ರೆಡ್ಡಿಯವರು ನಟ ಸೋನು ಸೂದ್‍ಗೆ ಕಳುಹಿಸಿದ್ದರು. ಸುದ್ದಿ ನೋಡಿದ ಸೋನು ಸೂದ್ ಪದ್ಮಾ ಕುಟುಂಬಕ್ಕೆ …

Read More »

ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ……….

ಯಾದಗಿರಿ: ಎಷ್ಟೋ ಜನ ಒಂದು ಮಗು ಆಗಲಿ ಅಂತ ಹತ್ತಾರು ದೇವರಿಗೆ ವರ ಬೇಡಿಕೊಳ್ಳತಾರೆ. ಇದರಲ್ಲಿ ಕೆಲವರಿಗೆ ದೇವರು ವರ ಕೊಟ್ಟ್ರೆ, ಇನ್ನೂ ಕೆಲವರಿಗೆ ಕೊನೆಯವರೆಗೂ ಮಕ್ಕಳ ಭಾಗ್ಯ ಕರುಣಿಸುವುದಿಲ್ಲ. ಆದರೆ ಇಲ್ಲೊಬ್ಬಳು ಮಹಾ ತಾಯಿ ಏಕಕಾಲದಲ್ಲಿ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಲ್ಲಿದ್ದಾಳೆ ಅದು ಮೊದಲನೆಯ ಹೆರಿಗೆಯಾಗಿ ಬರೊಬ್ಬರಿ 8 ವರ್ಷದ ಬಳಿಕ ಮೂರು ಗಂಡು ಮಕ್ಕಳಿಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಜಿಲ್ಲೆಯ ರಾಮಸಮುದ್ರದ ನಿವಾಸಿಯಾಗಿರುವ …

Read More »

30 ಸಾವಿರ ಲಂಚ ಪಡೆಯುತ್ತಿರುವಾಗACB ಬಲೆಗೆ ಬಿದ್ದ DHO

ಯಾದಗಿರಿ: ಸ್ಟಾಫ್ ನರ್ಸ್ ನೇಮಕಾತಿ ವೇಳೆಯಲ್ಲಿ ಅಭ್ಯರ್ಥಿಯೊಬ್ಬರಿಂದ 30 ಸಾವಿರ ಲಂಚ ಪಡೆಯುತ್ತಿರುವಾಗ ಯಾದಗಿರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.ಸದ್ಯ ಜಿಲ್ಲೆಯಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ಆರೋಗ್ಯ ಇಲಾಖೆಯ ಅಗತ್ಯ ಸಿಬ್ಬಂದಿಯ ಭರ್ತಿ ಕಾರ್ಯ ನಡೆಯುತ್ತಿತ್ತು. ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯಾಧಿಕಾರಿ ಎಸ್.ಎಂ. ಪಾಟೀಲ್ ಭರ್ತಿ ಕಾರ್ಯದ ಮುಖ್ಯಸ್ಥರಾಗಿದ್ದರು. ನೇಮಕಾತಿಗಾಗಿ ಒಬ್ಬೊಬ್ಬ ಅಭ್ಯರ್ಥಿಯಿಂದ 30 ರಿಂದ 50 …

Read More »

ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಕಟ್ಟೆಚ್ಚರ

ಯಾದಗಿರಿ: ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆ ಇಂದು ಬಸವಸಾಗರ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನಾಳೆ ವೇಳೆಗೆ ನೀರಿನ ಹೊರ ಹರಿವು ಜಾಸ್ತಿಯಾಗುವ ಸಾಧ್ಯತೆಯಿದೆ.ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿರುವ ಬಸವಸಾಗರ ಜಲಾಶಯ ಇದಾಗಿದ್ದು, ಈಗಾಗಲೇ ಜಲಾಶಯ ಭರ್ತಿಯಾಗಿದೆ. ಇನ್ನೂ ಮತ್ತೆ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದವಾಗುತ್ತಿದ್ದು, ಕೃಷ್ಣಾ ನದಿ ತೀರಕ್ಕೆ ಜನರು ತೆರಳದಂತೆ ಯಾದಗಿರಿ ಜಿಲ್ಲಾಡಳಿತ ಸೂಚನೆ ನೀಡಿದೆ. ಈಗಾಗಲೇ ನದಿ …

Read More »

ವರುಣನ ಆರ್ಭಟಕ್ಕೆ ಹತ್ತಿ ಬೆಳೆ ನಾಶ

ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ಮಲ್ಲಪ್ಪ ಕಲ್ಮನಿ 7ಎಕರೆ ಜಮೀನು ಮಳೆಯಿಂದ ಜಲಾವೃತಗೊಂಡಿದೆ ವಡಗೇರಾ : ತಾಲೂಕಾದ್ಯಂತ ಗುರುವಾರ ಬೆಳಗಿನ ಜಾವ ಸುರಿದ ಅತಿಹೆಚ್ಚು 73.ಮಿ.ಮೀ.ಪುಷ್ಯ ಮಳೆಯಾಗಿದ್ದು ಮಳೆಯಿಂದಾಗಿ ರಸ್ತೆಗಳು ಕೆಸರು ಗದ್ದೆಯಂತಾಗಿವೆ ವಾಹನ ಸವಾರರ ಪರದಾಟ ಹೇಳತೀರದು ಕಳೆದ ಎರಡು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತರ ಬದುಕು ಅಕ್ಷರಶಃ ಕಣ್ಣಿರಲ್ಲಿ ಕೈ ತೊಳೆಯುವಂತಾಗಿದೆ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ರಾಜ್ಯದಲ್ಲಿ ಮುಂದುವರಿದಿದ್ದು ಇನ್ನೊಂದೆಡೆ ಮಳೆಯ ಅಬ್ಬರ ನಡುವೆ …

Read More »

ಲಾಕ್‍ಡೌನ್ ನಿಯಮ ಉಲ್ಲಂಘನೆ- ಬೇಕಾಬಿಟ್ಟಿ ತಿರುಗಾಡುತ್ತಿದ್ದವರಿಗೆ ಲಾಠಿ ರುಚಿ, ದಂಡ

ಯಾದಗಿರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ ಜಿಲ್ಲಾದ್ಯಂತ ಕಠಿಣ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಕಳೆದ 15ರಂದು ಲಾಕ್‍ಡೌನ್ ಆರಂಭವಾಗಿದ್ದು, ಆಗಲೇ 5 ದಿನ ಕಳೆದಿದೆ. ಆದರೂ ಜನತೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು, ಅಂತಹವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಲಾಕ್‍ಡೌನ್ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಫುಲ್ ಅಲರ್ಟ್ ಆಗಿದ್ದಾರೆ. ಮಾಸ್ಕ್ ಇಲ್ಲದೆ ಬೇಕಾಬಿಟ್ಟಿಯಾಗಿ ನಗರದಲ್ಲಿ ತಿರುಗಾಟ ನಡೆಸಿದವರಿಗೆ ದಂಡ ಜೊತೆಗೆ …

Read More »

ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರಿಗೆ ಗಂಭೀರ ಗಾಯ: ಮಾನವೀಯತೆ ಮರೆತು ವಿಡಿಯೋ ಮಾಡಿದ ಜನ

ಯಾದಗಿರಿ ಜಿಲ್ಲೆ ಅಲ್ಲೀಪುರ ತಾಂಡಾದ ಬಳಿ ಬೈಕ್, ಟಿಪ್ಪರ್ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಗೂರು ಗ್ರಾಮದ ತಾಯಿ, ಮಗ, ಮಗಳು ಗಾಯಗೊಂಡು ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದಾರೆ. ಜನ ನೀರು ಕೊಡದೇ ಅಮಾನವೀಯವಾಗಿ ವರ್ತಿಸಿದ್ದಾರೆ. ಗಾಯಗೊಂಡವರು ನರಳಾಡುತ್ತಾ ಸಹಾಯಕ್ಕಾಗಿ ಗೋಗರೆದರೂ ನೆರವಾಗದೇ ವಿಡಿಯೋ ಮಾಡಿಕೊಂಡು ಅಮಾನವೀಯ ವರ್ತನೆ ತೋರಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಇದೇ ಮಾರ್ಗವಾಗಿ ಬರುವಾಗ ಗಾಯಾಳುಗಳನ್ನು ಗಮನಿಸಿದ್ದು ಆಂಬುಲೆನ್ಸ್ ಗೆ ಕರೆ ಮಾಡಿ …

Read More »

ಸತತ 3 ಗಂಟೆ ಸುರಿದ ಭಾರೀ ಮಳೆ- ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದ ಮಹಿಳೆಯ ರಕ್ಷಣೆ

ಯಾದಗಿರಿ: ಕೊರೊನಾ ದಾಳಿಯಿಂದ ಯಾದಗಿರಿ ಜಿಲ್ಲೆಯ ಜನರು ನಲುಗಿ ಹೋಗಿದ್ರೆ, ಕೊರೊನಾಕ್ಕಿಂತ ನಾನೇನು ಕಮ್ಮಿಯಿಲ್ಲ ಎನ್ನುವಂತೆ ವರುಣರಾಯ ಸತತ ಮೂರು ಗಂಟೆಗಳ ಕಾಲ ಅಬ್ಬರಿಸಿದ್ದಾನೆ. ಮಳೆರಾಯನ ಅಬ್ಬರಕ್ಕೆ ರಸ್ತೆ, ಜಮೀನು ಕೊಚ್ಚಿ ಹೋಗಿವೆ. ಹಳ್ಳಗಳು ತುಂಬಿ ನದಿಯಂತೆ ಹರಿಯುತ್ತಿವೆ. ಜಮೀನಿನಲ್ಲಿ ಮಳೆ ನೀರು ಸಾಗರದಂತೆ ನಿಂತಿವೆ. ರೈತರು ಕೆಲಸ ಮುಗಿಸಿ ಊರಿಗೆ ತೆರಳದಂತಹ ಪರಿಸ್ಥಿತಿ ಯಾದಗಿರಿಯ ವಿವಿಧ ಹಳ್ಳಿಗಳಲ್ಲಿ ನಿರ್ಮಾಣವಾಗಿದೆ. ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನು ಸ್ಥಳೀಯರು ಸಕಾಲಕ್ಕೆ ರಕ್ಷಣೆ …

Read More »

ಕೊರೊನಾ ಪಾಸಿಟಿವ್ ಬಂದ್ರೂ ಸಾರ್ವಜನಿಕವಾಗಿ ಟೀ ಕುಡಿದು ಹರಟೆ ಹೊಡೆದ ಪೊಲೀಸ್ ಸಿಬ್ಬಂದಿ

ಯಾದಗಿರಿ: ಕೊರೊನಾ ಪಾಸಿಟಿವ್ ಬಂದು, ಕೊವಿಡ್ ಆಸ್ಪತ್ರೆಗೂ ಹೋಗುವ ಮುನ್ನ ಪೊಲೀಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿದ ಘಟನೆ ನಡೆದಿದೆ. ಇಂದು ಗುರುಮಠಕಲ್ ಪಿಎಸ್ ಐ ಸೇರಿದಂತೆ 16 ಪೊಲೀಸ್ ಸಿಬ್ಬಂದಿಗೆ ಕೊರೊನಾ ಧೃಡಪಟ್ಟಿದೆ. ಈಗಾಗಲೇ ಠಾಣೆಯನ್ನು ಸೀಲ್ ಡೌನ್ ಸಹ ಮಾಡಲಾಗಿದೆ. ಹೀಗಾಗಿ ಸಿಬ್ಬಂದಿಯನ್ನು ಕೋವಿಡ್ ಆಸ್ಪತ್ರೆಗೆ ಕರೆತರಲು ಸರ್ಕಾರಿ ಬಸ್ ಗುರುಮಿಠಕಲ್ ಪಟ್ಟಣಕ್ಕೆ ಹೋಗಿತ್ತು. ಪಟ್ಟಣ ಸರ್ಕಲ್ ಇನ್ಸ್‍ಪೆಕ್ಟರ್ ಕಚೇರಿ ಎದುರು ಬಸ್ ನಿಂತಿದ್ದ ವೇಳೆ ಅದರಿಂದ ಕೆಳಗಿಳಿದ …

Read More »