Breaking News

ಕಾಕತಿ ವ್ಯಾಪ್ತಿಯಲ್ಲಿ ಬಿಂದಾಸ್ ಕಳ್ಳತನ..!

Spread the love

ಬೆಳಗಾವಿಯಲ್ಲಿ ಕಳ್ಳರ ಕೈಚಳಕ ಮತ್ತಷ್ಟು ಬಲಗೊಳ್ಳುತ್ತಿದೆ. ಮನೆಗಳ್ಳತನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲೂ ಕಾಕತಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಕಳ್ಳರು ಮಾತ್ರ ಬಿಂದಾಸ್ ಆಗಿ ಕಳ್ಳತನ ಮಾಡುತ್ತಿದ್ದಾರೆ. ಯಾಕೆಂದರೆ ಬಹುಶಃ ಇಲ್ಲಿಯವರೆಗೆ ಆಗಿರುವ ಕಳ್ಳತನಗಳಲ್ಲಿ ಒಂದೇ ಒಂದು ಕಳ್ಳತನ ಪ್ರಕರಣವನ್ನು ಅಲ್ಲಿನ ತನಿಖಾಧಿಕಾರಿಗಳು ಪತ್ತೆ ಹಚ್ಚಿಲ್ಲ. ಹೀಗಾಗಿ ಬಹುಶಃ ಕಳ್ಳರು ಇಲ್ಲಿ ಬಿಂದಾಸಾಗಿ ಹಾಡಹಗಲೇ ಮನೆಗಳಿಗೆ ಕನ್ನ ಹಾಕಿ ದೊಚುತ್ತಿದ್ದಾರೆ.

ನಿನ್ನೆ (ಮಂಗಳವಾರ 19) ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಳಗುಂದಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಸ್ವರಾಜ್ ಕಾಲನಿಯ ನಿವಾಸಿ ಮಾಜಿ ಯೋಧ ಉಮೇಶ ಅಪ್ಟೇಕರ ಎಂಬುವರ ಮನೆಯಲ್ಲಿನ 80 ಗ್ರಾಂ ಚಿನ್ನಾಭರಣ, 85 ಸಾವಿರ ರೂಪಾಯಿ ನಗದು ಹಣ ದೋಚಿ ಪರಾರಿಯಾಗಿದ್ದಾರೆ.

ದೇಶ ಕಾಯುವ ಅತಿ ಹೆಚ್ಚು ಸೈನಿಕರು ಹಾಗೂ ಮಾಜಿ ಯೋಧರಿರುವ ಪ್ರದೇಶದಲ್ಲಿ ಮಾಜಿ ಯೋಧ ಉಮೇಶ ವಾಸಿಸುತ್ತಿದ್ದು, ಸೈನ್ಯದಿಂದ ನಿವೃತ್ತಿಯಾಗಿ ಪ್ರಸ್ತುತ ರೇಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸಕ್ಕೆಂದು ಹೋದಾಗ ಇವರ ಮನೆಯ ಹಿಂದಿನ ಬಾಗಿಲನ್ನು ಮುರಿದು ಕಳ್ಳತನ ಮಾಡಲಾಗಿದೆ ಎಂದು ಪೋಲಿಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನ ನಡೆದ ಸ್ಥಳಕ್ಕೆ ಪಿಐ ಹಳ್ಳೂರ, ಪಿಎಸ್ಐ(ಕ್ರೈಂ) ಆರ್ ಟಿ ಲಕ್ಕನಗೌಡರ, ಸಿಬ್ಬಂದಿ ತುಕಾರಾಮ ದೊಡಮನಿ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ನೇತೃತ್ವವನ್ನು ಧಾರವಾಡದಲ್ಲಿ ಬೀದಿಗೆ ಇಳಿದ ವಿದ್ಯಾರ್ಥಿಗಳು… ರಾಜ್ಯ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಪರಿಹರಿಸಲು ಆಗ್ರಹ.

Spread the love ನೇತೃತ್ವವನ್ನು ಧಾರವಾಡದಲ್ಲಿ ಬೀದಿಗೆ ಇಳಿದ ವಿದ್ಯಾರ್ಥಿಗಳು… ರಾಜ್ಯ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಪರಿಹರಿಸಲು ಆಗ್ರಹ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ