Breaking News

ಕಣಬರ್ಗಿಯಲ್ಲಿ ಬುಡಾ ಯಡವಟ್ಟು: ರೈತರ ಜಮೀನಿಗೆ ಕೊಳಚೆ ನೀರು; ಉಗ್ರ ಹೋರಾಟದ ಎಚ್ಚರಿಕೆ

Spread the love

ಬುಡಾ ಮತ್ತು ಖಾಸಗಿ ಲೇಔಟ್’ನಿಂದಾಗಿ ರೈತರ ಜಮೀನುಗಳಿಗೆ ನಾಲೆಯ ನೀರನ್ನು ತಿರಿಗಿಸಲಾಗಿದ್ದು, ಬೆಳೆಹಾನಿಗೊಳಗಾಗುತ್ತಿರುವ ಕಣಬರ್ಗಿಯ ರೈತರು ಸಮಸ್ಯೆ ನೀಗಿಸದಿದ್ದರೇ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಳಗಾವಿಯ ಕಣಬರ್ಗಿಯಲ್ಲಿ ಬುಡಾ ಮತ್ತು ಖಾಸಗಿಯವರು ಲೇಔಟ್ ನಿರ್ಮಿಸಿದ್ದಾರೆ. ಈ ವೇಳೆ ನಾಲೆಯ ನೀರು ಹರಿದು ಹೋಗಲು ಅವೈಜ್ಞಾನಿಕ ಕಾಮಗಾರಿಯನ್ನು ಕೈಗೊಂಡಿದ್ದು, ಕೊಳಚೆ ನೀರು ರೈತರ ಜಮೀನುಗಳಿಗೆ ನುಗ್ಗುತ್ತಿದೆ. ಈ ಹಿನ್ನೆಲೆ ರೈತರು ಬೆಳೆದ ಬೆಳೆ ಹಾಳಾಗುತ್ತಿದ್ದು, ಶ್ರೀ ಸಿದ್ಧೇಶ್ವರ ಶೇತಕರಿ ಸಂಘಟನೆಯೂ ಪ್ರತಿಭಟನೆಯನ್ನು ನಡೆಸಿದೆ. ಕೂಡಲೇ ನಾಲೆಯ ನೀರನ್ನು ನಿಯಂತ್ರಿಸದಿದ್ದರೇ, ಉಗ್ರ ಹೋರಾಟ ನಡೆಸಲಾಗುವುದೆಂದು ರೈತರು ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಬನ್ ಮಾಲಾಯಿ, ನಾರಾಯಣ್ ಪಾಟೀಲ್, ಮಾರುತಿ ಪಾಟೀಲ್. ವಿಠ್ಠಲ ಅಷ್ಠೇಕರ, ಕಿಸನ್ ದಡ್ಡಿಕರ, ಗುರುನಾಥ್ ದಡ್ಡಿಕರ, ರವಳು ಮುಚ್ಚಂಡಿಕರ, ಪೀರಾಜೀ ಕೇಸರಕರ, ಸುನೀಲ್ ದಡ್ಡಿಕರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ