Breaking News

Laxminews 24x7

ಜೈಲಿನಲ್ಲಿರೋ ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕು ನೀಡಿ: ಸಂಸದ ಈರಣ್ಣ ಕಡಾಡಿ ಮನವಿ

ನವದೆಹಲಿ: ಜೈಲಿನ ಒಳಗಿನಿಂದ ಚುನಾವಣೆಗೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿರುವಾಗ, ಅದೇ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕು ನೀಡುವ ನಿಟ್ಟಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ 1951 ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 62(5) ಕ್ಕೆ ತಿದ್ದುಪಡಿ ತರುಬೇಕು ಎಂದು ಸಂಸದ ಈರಣ್ಣ ಕಡಾಡಿ ಮನವಿ ಮಾಡಿದ್ದಾರೆ. ರಾಜ್ಯಸಭೆಯ ಶೂನ್ಯ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ‘ಸಬ್ ಕಾ ಸಾಥ್‌, ಸಬ್ ಕಾ …

Read More »

ಖಡೇಬಜಾರ್ ಪೊಲೀಸ್ ಠಾಣೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ದಿಢೀರ್ ಭೇಟಿ: ಅಧಿಕಾರಿಗಳಿಗೆ ಮಹತ್ವದ ಸೂಚನೆ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಎಸ್. ಕೋಸಂಬೆ ಅವರು ಶುಕ್ರವಾರ ಬೆಳಗಾವಿಯ ಖಡೆಬಜಾರ್ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಅವರು, ಮಕ್ಕಳ ನ್ಯಾಯ ಕಾಯ್ದೆ-2015ರ ಅನ್ವಯ ಪದಾಧಿಕಾರಿಗಳ ಮಾಹಿತಿ ಹಾಗೂ ಮಕ್ಕಳ ಸಹಾಯವಾಣಿ 1098ರ ಫಲಕಗಳನ್ನು ತಕ್ಷಣವೇ ಶಾಶ್ವತವಾಗಿ ಅಳವಡಿಸುವಂತೆ ಖಡಕ್ ಸೂಚನೆ ನೀಡಿದರು. ಅಲ್ಲದೆ, ಮಕ್ಕಳ ಪ್ರಕರಣಗಳ ರಿಜಿಸ್ಟ್ರಾರ್ …

Read More »

ಬಿಡಿಸಿಸಿ ಬ್ಯಾಂಕ್‌ ಗೆ ಲಾಭವಾಗಲಿ, ನಷ್ಟವಾಗಲಿ ರೈತರಿಗೆ ಸಾಲ ನೀಡಲೇಬೇಕು: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಣ್ಣಾಸಾಹೇಬ್‌ ಜೊಲ್ಲೆ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಬಿಡಿಸಿಸಿ ಬ್ಯಾಂಕ್‌ ಗೆ ಲಾಭವಾಗಲಿ, ನಷ್ಟವಾಗಿಲಿ ರೈತರಿಗೆ ಮಾತ್ರ ಆರ್ ಬಿಐ, ನಬಾರ್ಡ್‌ ನಿರ್ದೇಶನದಂತೆ ಸಾಲವನ್ನು ನೀಡಲೇಬೆಕೆಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಾದವರೊಂದಿಗೆ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್‌ ರೈತರ ಬ್ಯಾಂಕು. ಬ್ಯಾಂಕ್‌ ನಿಂದ ರೈತರಿಗೆ ಸಾಲ ನೀಡಲೇಬೇಕು. ಆದರೆ ಆರ್ …

Read More »

ಜನ್ಮದಿನ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಚನ್ನರಾಜ, ಮೃಣಾಲ್

ಬೆಳಗಾವಿ : ಶನಿವಾರ ಬೆನಕನಹಳ್ಳಿಯ ಗಾರ್ಡನ್ ಕೋರ್ಟ್ ಮುಂಬಾಗದಲ್ಲಿ ಹಿರಿಯ ನಾಗರಿಕರೊಂದಿಗೆ ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶುಕ್ರವಾರ ಸ್ಥಳಕ್ಕೆ ತೆರಳಿ ಕಾರ್ಯಕ್ರಮದ ಸಿದ್ಧತೆಯನ್ನು ಪರಿಶೀಲಿಸಿದರು. ಹಿರಿಯ ನಾಗರಿಕರಿಗಾಗಿ ವಿವಿಧ ಮೋಜಿನ ಆಟಗಳು, ಸಂವಾದ, ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. ಸುಮಾರು 15 ಸಾವಿರ ಹಿರಿಯ ನಾಗರಿಕರು ಸೇರಿದಂತೆ 20 …

Read More »

ಕುಟುಂಬದಲ್ಲಿ ಮಕ್ಕಳು ಬೇರೆ ಕಡೆ ಕೆಲಸ ಮಾಡಿಕೊಂಡು ಆದಾಯ ತೆರಿಗೆ ಪಾವತಿಸುತ್ತಿದ್ದರೆ ತಂದೆ-ತಾಯಿಗೆ ಬಿಪಿಎಲ್‌ ಕಾರ್ಡ್‌ ನೀಡಬಹುದು: ಸಚಿವ ಕೆಹೆಚ್. ಮುನಿಯಪ್ಪ

ಹಾಸನ:ಬಿ.ಪಿ.ಎಲ್ ಕಾರ್ಡ್ ಪರಿಷ್ಕರಣೆ ವೇಳೆ ಮನೆ ಸಾಲ, ಬೈಕ್ ಸಾಲಕ್ಕಾಗಿ ಆದಾಯ ತೆರಿಗೆ ಪಾವತಿಸುತ್ತಿರುವ ವಿನಾಯಿತಿ ನೀಡಬೇಕು, ದೀರ್ಘ ಕಾಲದಿಂದ ತೆರಿಗೆ ಪಾವತಿ ಮಾಡುತ್ತಿರುವರ ಕಾರ್ಡ್ ಗಳನ್ನು ಎ.ಪಿ.ಎಲ್ ಮಾತ್ರ ಪರಿವರ್ತಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಆಹಾರ ಮತ್ತು ನಾಗರಿಕ ಸರಬರಾಜು, ಕಾನೂನು ಮಾಪನ ಶಾಸ್ತ್ರ ಹಾಗೂ ಆಹಾರ ನಿಗಮದ ಇಲಾಖೆಗಳ …

Read More »

ಬೆಳಗಾವಿಗೆ ಐಪಿಎಲ್​ ಮ್ಯಾಚ್​ ತರಲು ಪ್ರಯತ್ನ

ಬೆಳಗಾವಿ: ಐಪಿಎಲ್​ನಂತಹ ಮ್ಯಾಚ್​ಗಳು ಬೆಳಗಾವಿಯಲ್ಲೂ ನಡೆಯುವ ರೀತಿಯಲ್ಲಿ ಇಲ್ಲಿನ ಸ್ಟೇಡಿಯಂ ಅಭಿವೃದ್ಧಿಯಾಗಬೇಕಿದೆ. ಇದಕ್ಕಾಗಿಯೇ ಏಷಿಯನ್​ ಕ್ರಿಕೆಟ್​ ಕೌನ್ಸಿಲ್​ ಸದಸ್ಯ ಆಶೀಷ ಶೇಲಾ ಅವರಿಗೆ ಮನವಿ ಮಾಡಿದ್ದು, ಐಪಿಎಲ್​ ಮ್ಯಾಚ್​ ಬರುವವರೆಗೂ ಪ್ರಯತ್ನ ಮುಂದುವರಿಯುತ್ತದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದ ಸರ್ದಾರ ಮೈದಾನದಲ್ಲಿ ಎಂಪಿ ಫೌಂಡೇಷನ್​ ವತಿಯಿಂದ ಆಯೋಜಿಸಿರುವ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್​ ಪಟುಗಳನ್ನು ಒಳಗೊಂಡಿರುವ “ಆಲ್​ ಇಂಡಿಯಾ ಓಪನ್​ ಟೆನಿಸ್​ ಬಾಲ್​ ಕ್ರಿಕೆಟ್​ ಟೂರ್ನಿ&26′ ಶ್ರೀ ಮುರುಘೇಂದ್ರಗೌಡ …

Read More »

ಕಪ್ಪತ್ತಗುಡ್ಡದಲ್ಲಿ ಮತ್ತೊಂದು ಸಂಪತ್ತಿನ ಗುಹೆ ರಹಸ್ಯ ಬಯಲು: ಸಂಜೀವಿನಿ ಗುಡ್ಡದೊಳಗೊಂದು ವಿಸ್ಮಯ ಲೋಕ

ಗದಗ: ಐತಿಹಾಸಿ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಸಿಕ್ಕ ಬಳಿಕ ಸಂಪತ್ತಿನ ಖಜಾನೆಗಳ ಒಂದೊಂದು ರಹಸ್ಯಗಳು ಬಯಲಾಗುತ್ತಿವೆ. ಲಕ್ಕುಂಡಿ ಸಂಪತ್ತನ್ನೂ ಮೀರಿಸುವ ಸಂಪತ್ತಿನ ಖಜಾನೆಗಳು ಗದಗ ಜಿಲ್ಲೆಯಲ್ಲಿವೆ. ಲಕ್ಕುಂಡಿ ಚಿನ್ನದ ಸಂಪತ್ತು ಆಯ್ತು, ಕಪ್ಪತ್ತಗುಡ್ಡದ ಚಿನ್ನದ ಗುಹೆಗಳ ಬಗ್ಗೆಯೂ ಟಿವಿ9 ಇಂಚಿಂಚು ವರದಿ ಮಾಡಿದೆ. ಆದರೆ ಇದೀಗ ರಹಸ್ಯ ಗವಿಯೊಳಗೆ ಸಂಪತ್ತು ಸುದ್ದಿ ಕೇಳಿದರೆ ನೀವು ಬೆಚ್ಚಿಬೀಳ್ತೀರಾ. ಈ ಸಂಜೀವಿನಿ ಗುಡ್ಡದ  ಗವಿಯೊಳಗೆ ಅನಂತಪದ್ಮನಾಭ, ಕುಬೇರನ ಸಂಪತ್ತಿಗೂ ಅಪಾರವಿದೆಯಂತೆ. ಲಕ್ಕುಂಡಿ ಕಲ್ಯಾಣ ಚಾಲುಕ್ಯರು, …

Read More »

ಭೀಕರ ಸರಣಿ ಅಪಘಾತಕ್ಕೆ 7 ಬಲಿ

ಬೆಂಗಳೂರು: ಹೊರವಲಯ ಹೊಸಕೋಟೆ ಬಳಿ ಬೆಳ್ಳಂ ಬೆಳಗ್ಗೆ ಭೀಕರ ಸರಣಿ ಅಪಘಾತ ಸಂಭವಿದೆ. ಕ್ಯಾಂಟರ್, ಬೈಕ್ ಮತ್ತು ಕಾರಿನ ನಡುವಿನ ಸರಣಿ ಅಪಘಾತಕ್ಕೆ 7 ಜನ ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಒಂದೇ ಕಾರಿನಲ್ಲಿದ್ದ ಆರು ಜನ ಹಾಗೂ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಹೊಸಕೋಟೆಯಿಂದ ದೇವನಹಳ್ಳಿ ಕಡೆ ಅತಿವೇಗವಾಗಿ ಬರ್ತಿದ್ದ ಎಕ್ಸ್ಯುವಿ ಕಾರು, ಬೈಕ್‌ಗೆ ಡಿಕ್ಕಿಯಾಗಿ ನಂತರ …

Read More »

ಭಾರತದ ಜವಳಿ ಉತ್ಪನ್ನಗಳಿಗೂ ಅಮೆರಿಕದಲ್ಲಿ 0% ಸುಂಕ: ಪಿಯೂಷ್ ಗೋಯಲ್

ನವದೆಹಲಿ: ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದದ  ಅಡಿಯಲ್ಲಿ ಬಾಂಗ್ಲಾದೇಶಕ್ಕೆ ವಿಸ್ತರಿಸಿದಂತೆಯೇ ಭಾರತವು ಜವಳಿ ಉತ್ಪನ್ನಗಳಿಗೆ ಶೂನ್ಯ ಸುಂಕ ಪ್ರಯೋಜನ ಪಡೆಯುವ ಸಾಧ್ಯತೆಯಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಆದ್ರೆ ಭಾರತ – ಅಮೆರಿಕ ಒಪ್ಪಂದದ ಜಂಟಿ ಹೇಳಿಕೆಯಾಗಲಿ ಅಥವಾ ಶ್ವೇತಭವನ ಫ್ಯಾಕ್ಟ್‌ಶೀಟ್ ಆಗಲಿ ಈ ಷರತ್ತನ್ನ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವ್ಯಾಪಾರ ಒಪ್ಪಂದದಲ್ಲಿ ಬಾಂಗ್ಲಾದೇಶವು ಭಾರತಕ್ಕಿಂತ ಹೆಚ್ಚಿನ ಪ್ರಯೋಜನ ಪಡೆದುಕೊಂಡಿದೆ ಎಂಬ ರಾಹುಲ್‌ …

Read More »

ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಮೇಕೆದಾಟು, ಯುಕೆಪಿ ಯೋಜನೆಗಳ ಜಾರಿ: ಡಿಕೆಶಿ

ಬೆಂಗಳೂರು: ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಿದರೆ ಕರ್ನಾಟಕ  ಸರ್ಕಾರವು ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಬಾಕಿ ಯೋಜನೆಗಳನ್ನು ಜಾರಿ ಮಾಡಲಿದೆ. ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುವ ಭರವಸೆ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಜೆಜೆ ಟಾಟಾ ಸಭಾಂಗಣದಲ್ಲಿ ನಜೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದ (ICDS) ಉದ್ಘಾಟನಾ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು. …

Read More »