Breaking News

Laxminews 24x7

“ನಾನು ಬಾರಿ ಕೆಟ್ಟ ಮನುಷ್ಯ ಇದ್ದಿನಿ.. ಬಾಯಿ ಮುಚ್ಚು ರಾಸ್ಕಲ್” ಎಂದು ಮಹಿಳೆಯರನ್ನು ಗದರಿಸಿದ್ದಾರೆ. ಮಾಧುಸ್ವಾಮಿ

ಬೆಂಗಳೂರು: ಕಾನೂನು ಸಚಿವ ಮಾಧುಸ್ವಾಮಿ ಬುಧವಾರ ಕೋಲಾರದಲ್ಲಿ ರೈತ ಮಹಿಳೆಯನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಇಂದು ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ಗೆ ದುರು ನೀಡಿದ್ದಾರೆ. ಕೆಸಿ ವ್ಯಾಲಿ ಯೋಜನೆಯಿಂದ ತುಂಬಿದ ಕೆರೆಗಳನ್ನು ವೀಕ್ಷಣೆ ಮಾಡುವ ಸಲುವಾಗಿ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ನಿನ್ನೆ ಕೋಲಾರಕ್ಕೆ ಆಗಮಿಸಿದ್ದರು.  ಇದೇ ವೇಳೆ ಅವರು ಅಗ್ರಹಾರ ಕೆರೆ ವೀಕ್ಷಣೆಗಾಗಿಯೂ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಕರ್ನಾಟಕ ರಾಜ್ಯ ರೈತ …

Read More »

ಶಿವಮೊಗ್ಗದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್ ಐಆರ್ ,ಇನ್ಸ್ಪೆಕ್ಟರ್ ನನ್ನು ಅಮಾನತುಗೊಳಿಸಿ: ಡಿಕೆಶಿ ಆಗ್ರಹ

ಬೆಂಗಳೂರು: ಶಿವಮೊಗ್ಗದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್ ಐಆರ್ ದಾಖಲಿಸಿರುವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ  ಬಿಜೆಪಿ ಕಾರ್ಯಕರ್ತನೊಬ್ಬ ನೀಡಿರುವ ಸುಳ್ಳು ದೂರು ಆಧರಿಸಿ ಸೋನಿಯಾಗಾಂಧಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿ ತನ್ನ ಅಧಿಕಾರ‌ ದುರುಪಯೋಗಪಡಿಸಿಕೊಂಡು ಎಫ್​​ಐಆರ್ ದಾಖಲಿಸಿದ್ದಾರೆ. ಕೂಡಲೇ ಆ ಅಧಿಕಾರಿಯನ್ನ ಅಮಾನತು ಮಾಡಬೇಕು ಎಂದು …

Read More »

ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಅಂಗಡಿಗಳೂ ತೆರೆಯುವಂತಿಲ್ಲ.

ಬೆಂಗಳೂರು – ರಾಜ್ಯದಲ್ಲಿ ಮೇ 31ರ ವರೆಗೂ 4ನೇ ಹಂತದ ಲಾಕ್ ಡೌನ್ ಮುಂದುವರಿಯಲಿದೆ. ಆದರೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಟ್ಟುನಿಟ್ಟಾದ ಲಾಕ್ ಡೌನ್ ಇರುವುದಿಲ್ಲ. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಮಾದರಿಯಲ್ಲಿ ಲಾಕ್ ಡೌನ್ ಇರಲಿದೆ. ಎಲ್ಲಾ ಅಂಗಡಿಗಳೂ 7 ಗಂಟೆಗೆ ಬಾಗಿಲು ಹಾಕಬೇಕು. ವಾಹನ ಸಂಚಾರವೂ ಸ್ಥಗಿತವಾಗಬೇಕು. ಜನರೂ ಅನಗತ್ಯವಾಗಿ ಸಂಚರಿಸಬಾರದು. ಇದರ ಜೊತೆಗೆ ಪ್ರತಿ ಭಾನುವಾರ ಸಂಪೂರ್ಣ …

Read More »

ಮೇ 26ರಿಂದ ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭ:ಕೋಟಾ ಶ್ರೀನಿವಾಸ್ ಪೂಜಾರಿ

ಬೆಂಗಳೂರು: ಇಷ್ಟು ದಿನ ಕೊರೊನಾ ವೈರಸ್ ಭೀತಿಗೆ ಬಂದ್ ಆಗಿದ್ದ ದೇವಲಯಗಳಲ್ಲಿ ಈಗ ಭಕ್ತರಿಗೆ ಆನ್‍ಲೈನ್ ಮೂಲಕ ಹಣ ಪಾವತಿಸಿ ಪೂಜೆ ಮಾಡಿಸಲು ಅವಕಾಶ ನೀಡಲಾಗುತ್ತಿದೆ. ಮೇ 26, 27ರಿಂದ ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭ ಆಗಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಆನ್‍ಲೈನ್‍ನಲ್ಲಿ ಭಕ್ತರು ದೇವಸ್ಥಾನಗಳಿಗೆ ಹಣ ಪಾವತಿ ಮಾಡಿ ಪೂಜೆ ಮಾಡಿಸಲು ಅವಕಾಶ ನೀಡಲಾಗುತ್ತದೆ. 15ರಿಂದ 20 …

Read More »

ಎಫ್‍ಬಿ ವಿಶೇಷ ಲಾಕ್ ಫೀಚರ್ – ಭಾರತದ ಬಳಕೆದಾರರಿಗೆ ಮಾತ್ರ ಲಭ್ಯ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಂಬರ್ ಒನ್ ಆಗಿರುವ ಫೇಸ್‍ಬುಕ್ ಭಾರತೀಯ ಬಳಕೆದಾರರಿಗೆ ಮಾತ್ರ ವಿಶೇಷ ಪ್ರೈವೆಸಿಯನ್ನು ಫೀಚರ್ ನೀಡಲು ಮುಂದಾಗುತ್ತಿದೆ. ಇಲ್ಲಿಯವರೆಗೆ ಫೇಸ್‍ಬುಕ್‍ನಲ್ಲಿ ಫ್ರೆಂಡ್ಸ್ ಆಗದೇ ಇದ್ದರೂ ಅವರ ವಾಲ್ ನಲ್ಲಿ ಬರೆದ ಪೋಸ್ಟ್, ಫೋಟೋಗಳನ್ನು ವೀಕ್ಷಿಸಬಹುದಾಗಿತ್ತು. ಆದರೆ ಈಗ ಸಂಪೂರ್ಣವಾಗಿ ಪ್ರೊಫೈಲ್ ಲಾಕ್ ಮಾಡುವ ಫೀಚರ್ ನೀಡಲಿದೆ. ಯಾರೆಲ್ಲ ಈ ಲಾಕ್ ಫೀಚರ್ ಆಯ್ಕೆ ಮಾಡುತ್ತಾರೋ ಅವರ ಪ್ರೊಫೈಲಿನಲ್ಲಿರುವ ಫೋಟೋಗಳು ಸ್ನೇಹಿತರಿಗೆ ಮಾತ್ರ ಕಾಣುತ್ತದೆ. ಬೇರೆ ಯಾರಿಗೂ ಫೋಟೋಗಳು, …

Read More »

ಇಲ್ಲಿದೆ ರಾಜ್ಯದಲ್ಲಿ ಸಂಚಾರ ಆರಂಭಿಸಲಿರುವ ರೈಲುಗಳ ಕಂಪ್ಲೀಟ್ ಡೀಟೇಲ್ಸ್ ……….

ಹುಬ್ಬಳ್ಳಿ,ಮೇ21-ಕಳೆದ ಮಾರ್ಚ್ 22ರಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ರಾಜ್ಯದಲ್ಲಿ ನಾಳೆಯಿಂದ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.ಕೊರೊನಾ ವೈರಸ್ ತಡೆಯಲು ಜಾರಿಗೊಳಿಸಲಾದ ಲಾಕ್‍ಡೌನ್ ಹಿನ್ನೆಲೆಯಲ್ಲಿ , ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಳೆದ ಮಾರ್ಚ್ 22ರಿಂದ ಪ್ರಯಾಣಿಕರ ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಲಾಕ್‍ಡೌನ್ 4.0 ಮೊದಲ ದಿನವಾದ ಮೇ 18ರಂದು ಮುಖ್ಯಮಂತ್ರಿಗಳು, ಕರ್ನಾಟಕದೊಳಗೆ ಅಂತರ ಜಿಲ್ಲಾ ರೈಲುಗಳನ್ನು ಪ್ರಾರಂಭಿಸಬಹುದು ಎಂದು ಹೇಳಿದರು. ರೈಲ್ವೆ ಸಚಿವಾಲಯವು ಈ ಶಿಫಾರಸನ್ನು ಪರಿಗಣಿಸಿ …

Read More »

ವಿವಾಹಿತ ಮಹಿಳೆಯೊಬ್ಬಳು ತನ್ನ ಮಗುವನ್ನು ತವರು ಮನೆಯಲ್ಲಿ ಬಿಟ್ಟು ತನ್ನ ಹಳೆ ಪ್ರಿಯಕರನ ಜೊತೆ ಪರಾರಿ

ಉಡುಪಿ: ವಿವಾಹಿತ ಮಹಿಳೆಯೊಬ್ಬಳು ತನ್ನ ಮಗುವನ್ನು ತವರು ಮನೆಯಲ್ಲಿ ಬಿಟ್ಟು ತನ್ನ ಹಳೆ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ನಡೆದಿದೆ. ಅಜೆಕಾರು ಕೈಕಂಬ ನಿವಾಸಿ ಮುನ್ಶಿರಾ ಮೆಹಮೂಬ್(ಹೆಸರು ಬದಲಾಯಿಸಲಾಗಿದೆ) ಪರಾರಿಯಾದ ಮಹಿಳೆ. ಮದುವೆಗೆಂದು ಮಂಗಳೂರಿಗೆ ಹೋದ ಕಾರಣಕ್ಕೆ ಈ ಮಹಿಳೆ, ತಾಯಿ ಮತ್ತು ಸಹೋದರನ ಜೊತೆ ಹೋಂ ಕ್ವಾರಂಟೈನ್ ಆಗಿದ್ದಳು. ಹೋಂ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ತನ್ನ ಹಳೆಯ ಪ್ರಿಯಕರನ ಜೊತೆ ಮಹಿಳೆ ಪರಾರಿಯಾಗಿದ್ದಾಳೆ. …

Read More »

ರಾಜ್ಯದಲ್ಲಿ 1578ಕ್ಕೇರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ

ಬೆಂಗಳೂರು: ಕೊರೊನಾ ವೈರಸ್ ಇಂದು ಬೆಳಗ್ಗೆ ಶತಕ ಬಾರಿಸಿದ್ದು, ಒಂದೇ ದಿನ 116 ಮಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾದಿಂದ ಗುಣಮುಖರಾಗಿ 14 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 1578 ಸೋಂಕಿರ ಪೈಕಿ 612 ಜನ ಗುಣಮುಖರಾಗಿದ್ದು, 966 ಮಂದಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕಿತರ ವಿವರ: 1. ರೋಗಿ- 1463: ಬೆಂಗಳೂರಿನ 40 ವರ್ಷದ ಮಹಿಳೆ- ರೋಗಿ 1208ರ ಸಂಪರ್ಕ 2. …

Read More »

ಬೆಳಗಾವಿ ಜಿಲ್ಲೆಗೆ ಕೊರೋನಾ ವೈರಸ್ ಮತ್ತೆಶಾಕ್ ಕ್ಮಿಡ್ ಡೇ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ. 9 ಜನರಲ್ಲಿ ಸೊಂಕು ಪತ್ತೆ

ಬೆಳಗಾವಿ- ಬೆಳಗಾವಿ ಜಿಲ್ಲೆಗೆ ಕೊರೋನಾ ವೈರಸ್ ಮತ್ತೆ ಶಾಕ್ ನೀಡಿದೆ.ಇಂದು ಗುರುವಾರ ಬಿಡುಗಡೆಯಾದ ಮಿಡ್ ಡೇ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ. 9 ಜನರಲ್ಲಿ ಸೊಂಕು ಪತ್ತೆಯಾಗಿದೆ ಇಂದು ಪತ್ತೆಯಾಗಿರುವ ಕೊರೋನಾ ಸಂಕಿತರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 125 ಕ್ಕೇ ಏರಿದಂತಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ 8 ಜನ ಅಜ್ಮೇರ್ ದರ್ಗಾ ದರ್ಶನ ಮಾಡಿ ಸಂಪಗಾಂವ ಮರಳಿದ್ದರು ಇವರನ್ನು …

Read More »

ಉಡುಪಿಯಲ್ಲಿ ಕೊರೊನಾ ಆತಂಕ- 950 ವರದಿಗಳ ನಿರೀಕ್ಷೆಯಲ್ಲಿ ಜಿಲ್ಲಾಡಳಿತ

ಉಡುಪಿ: ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಇಂದು ಫುಲ್ ಆತಂಕದಲ್ಲಿದೆ. ಜಿಲ್ಲೆಯಲ್ಲಿ ಏಕಾಏಕಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುವ ಆತಂಕವಿದೆ. ಮುಂಬೈ ಜೊತೆ ಇಂದು ದುಬೈ ಪ್ರಯಾಣಿಕರ ವರದಿಯನ್ನು ಜಿಲ್ಲಾಡಳಿತ ನಿರೀಕ್ಷೆ ಮಾಡುತ್ತಿದೆ. ಡಿಎಚ್‍ಒ ಕೊಡುವ ಮಾಹಿತಿ ಪ್ರಕಾರ ಇಂದು 950ಕ್ಕೂ ಹೆಚ್ಚು ಮಂದಿಯ ವೈದ್ಯಕೀಯ ವರದಿ ಕೈಸೇರಲಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 22 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಓರ್ವ ಸೋಂಕಿತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ದುಬೈನಿಂದ ಬಂದಿದ್ದ 49 …

Read More »