Breaking News

Laxminews 24x7

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ನಾಳೆಯಿಂದ ಜಿಲ್ಲೆಯಾದ್ಯಂತ ಸಂಚರಿಸಿ ಜನರ ಅಹವಾಲು ಸ್ವೀಕರಿಸಲಿದ್ದಾರೆ.

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ನಾಳೆಯಿಂದ ಜಿಲ್ಲೆಯಾದ್ಯಂತ ಸಂಚರಿಸಿ ಜನರ ಅಹವಾಲು ಸ್ವೀಕರಿಸಲಿದ್ದಾರೆ. ನಾಳೆ ದಿ. 6 ರಂದು ಸ್ವ ಕ್ಷೇತ್ರ ಯಮಕನಮರಡಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಭೇಟಿ ನೀಡಲಿದ್ದಾರೆ. ದಿ.7 ರಂದು ಬೆಳಿಗ್ಗೆ 10 ಗಂಟೆಗೆ ಬೆಳಗಾವಿಯಲ್ಲಿ ಲಭ್ಯವಿರುವ ಅವರು ಖಾನಾಪೂರ ತಾಲೂಕಿನ ಇಟಗಿಯಲ್ಲಿ ಬೆಳಿಗ್ಗೆ 11 ಗಂಟೆಗೆ, ಹಿರೇಮುನ್ನೋಳ್ಳಿಯಲ್ಲಿ 11.30 ಗಂಟೆಗೆ, ಪಾರೀಶ್ವಾಡದಲ್ಲಿ12 ಗಂಟೆಗೆ ಮತ್ತು 12.30. ಗಂಟೆಗೆ ಹಿರೇಹಟ್ಟಿಹೋಳಿಯಲ್ಲಿ ಭೇಟಿ ನೀಡಿ ಜನರ …

Read More »

ಮುಜರಾಯಿ ದೇವಾಲಯಗಳನ್ನೂ ತೆರೆಯಲು ಮುಂದಾದ ಸರ್ಕಾರ; ಸಚಿವ ಶ್ರೀನಿವಾಸ ಪೂಜಾರಿ ಮಾಹಿತಿ

ರಾಜ್ಯದಲ್ಲಿ ಮುಜರಾಯಿ ಇಲಾಖೆ ದೇವಾಸ್ಥಾನಗಳನ್ನು ತೆರೆಯಲಾಗುವುದು. ಆದರೆ, ದೇವಾಲಯದ ಒಳಗೆ ನೂಕು ನುಗ್ಗಲಿಗೆ ಅವಕಾಶ ಇಲ್ಲ. ಭಕ್ತರು ಸರಥಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೆ ದೇವರ ದರ್ಶನ ಪಡೆಯಬೇಕು ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಬೆಂಗಳೂರು (ಮೇ 05); ರಾಜ್ಯದಲ್ಲಿ ಶೀಘ್ರದಲ್ಲೇ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳು ತೆರೆಯಲಿವೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡೇ ದೇವರ ದರ್ಶನ ಪಡೆಯಬೇಕು ಎಂದು ಮುಜಾರಾಯಿ ಇಲಾಖೆ ಸಚಿವ  ಮಾಹಿತಿ ನೀಡಿದ್ದಾರೆ.    …

Read More »

ಇಂದು ಸೋಂಕಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಇಂದು ಒಂದೇ ದಿನದಲ್ಲಿ 22 ಜನರಲ್ಲಿ ಕೊರೊನಾ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಇಂದು ಸೋಂಕಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಇಂದು ಒಂದೇ ದಿನದಲ್ಲಿ 22 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆಯಾಗಿದೆ. ದಾವಣೆಗೆರೆಯಲ್ಲಿ ಕೊರೊನಾ ಸೋಂಕಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಇಂದು ಒಂದೇ ದಿನ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ದಾವಣಗೆರೆ ಜಿಲ್ಲೆಯೊಂದರಲ್ಲೇ ಇಂದು 12 ಜನರಲ್ಲಿ ಸೋಂಕು …

Read More »

ಡೀಸೆಲ್ 7.10 ರೂ., ಪೆಟ್ರೋಲ್ ಬೆಲೆ 1.67 ರೂ. ಏರಿಕೆ…

ನವದೆಹಲಿ: ಮದ್ಯದ ಮೇಲೆ ಶೇ.70 ರಷ್ಟು ‘ವಿಶೇಷ ಕೊರೊನಾ ದರ’ ತೆರಿಗೆ ವಿಧಿಸಿದ ದೆಹಲಿಯ ಕೇಜ್ರಿವಾಲ್ ಸರ್ಕಾರ ಈಗ ಪೆಟ್ರೋಲ್ ಮತ್ತು ಡೀಸೆಲ್ ವ್ಯಾಟ್ ತೆರಿಗೆಯನ್ನು ಏರಿಕೆ ಮಾಡಿದೆ. ಪೆಟ್ರೋಲ್ ಮೇಲೆ ಶೇ.27 ಡೀಸೆಲ್ ಮೇಲೆ ಶೇ.16.75 ವ್ಯಾಟ್ ನಿಗದಿಯಾಗಿತ್ತು. ಆದರೆ ಈಗ ಪಟ್ರೋಲ್ ಮೇಲೆ ಶೇ.30, ಡೀಸೆಲ್ ಮೇಲೆ ಶೇ.30ರಷ್ಟು ವ್ಯಾಟ್ ಏರಿಕೆ ಮಾಡಲಾಗಿದೆ. ವ್ಯಾಟ್ ಏರಿಕೆಯಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.67 ರೂ., ಡೀಸೆಲ್ ಬೆಲೆ …

Read More »

ರಾಯಚೂರಿನಲ್ಲಿ ಮಧ್ಯಾಹ್ನವೇ ಮದ್ಯದಂಗಡಿಗಳು ಕ್ಲೋಸ್

ರಾಯಚೂರು: ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ಮದ್ಯದಂಗಡಿಗಳನ್ನ ತೆರೆದಿರುವ ಕಾರಣಕ್ಕೆ ರಾಯಚೂರಿನಲ್ಲಿ ರಸ್ತೆಗಳಲ್ಲಿ ಜನರ ಓಡಾಟವೂ ಹೆಚ್ಚಾಗಿದೆ. ಮದ್ಯದಂಗಡಿ ಮುಂದೆ ಜನರ ಕ್ಯೂ ದೊಡ್ಡದಿದೆ ಇದರ ಜೊತೆಗೆ ಜನ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಗುಂಪು ಗುಂಪಾಗಿ ಓಡಾಡುತ್ತಿದ್ದಾರೆ. ಹೀಗಾಗಿ ರಾಯಚೂರಿನಲ್ಲಿ ಮಧ್ಯಾಹ್ನ ಎರಡು ಗಂಟೆಗೆ ಎಲ್ಲ ಬಂದ್ ಮಾಡಲಾಗಿದೆ. ನಿನ್ನೆ ಸಂಜೆ 7 ಗಂಟೆವರೆಗೆ ಮದ್ಯದಂಗಡಿ ತೆರೆಯಲಾಗಿತ್ತು. ಜನರ ಓಡಾಟ ವಿಪರೀತವಾಗಿದ್ದರಿಂದ ಇಂದಿನಿಂದ ಮಧ್ಯಾಹ್ನ ಎರಡು ಗಂಟೆಗೆ ಮದ್ಯದಂಗಡಿ ಬಂದ್ …

Read More »

ಫೆಬ್ರುವರಿ ಯಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.ಸುವಿದ್ಯಾ ವೆಬ್​ಸೈಟ್​ನಲ್ಲಿ ಲಭ್ಯ

ಬೆಂಗಳೂರು: ಕಳೆದ ಫೆಬ್ರುವರಿ ಯಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಲಾಕ್​ಡೌನ್​ ಹಿನ್ನೆಲೆ ಸುವಿದ್ಯಾ ವೆಬ್​ಸೈಟ್​ನಲ್ಲಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಪ್ರಥಮ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಸುವಿದ್ಯಾ ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು. ಹಾಗೇ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್​ ನಂಬರ್​ಗಳಿಗೆ ಕೂಡ ಫಲಿತಾಂಶವನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಶಾಲೆಗಳಲ್ಲಿ ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ಗುಂಪು ಸೇರುವ ಸಾಧ್ಯತೆ ಇರುವುದರಿಂದ ಕೊರೊನಾ ಸೋಂಕು ಹರಡುವ ಭೀತಿಯಿಂದ ಸುವಿದ್ಯಾ …

Read More »

ಲಕ್ಷ್ಮಿ ತಾಯಿ ಫೌಂಡೇಶನ್ನಿಂದ ನಿರಂತರ ಸೇವೆ..:ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ – ಲಕ್ಷ್ಮಿ ತಾಯಿ ಫೌಂಡೇಶನ್ ಹಿಂದಿನಿಂದಲೂ ಬಡವರ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದು, ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ. ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರ್ಕಂಡೇಯ ನಗರ, ವಾಲ್ಮೀಕಿ ನಗರ ಹಾಗೂ ಕಲ್ಯಾಣಹಟ್ಟಿ ಪ್ರದೇಶಗಳ ಕೂಲಿ ಕಾರ್ಮಿಕರಿಗೆ, ಬಡ ಜನರಿಗೆ ಹಾಗೂ ನಿರ್ಗತಿಕರಿಗೆ ರೇಷನ್ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.  ಲಕ್ಷ್ಮಿ ತಾಯಿ ಫೌಂಡೇಶನ್ ಕೇವಲ ಕೊರೋನಾ ಸಂದರ್ಭದಲ್ಲಿ ಜನರ ಸೇವೆ ಮಾಡುತ್ತಿಲ್ಲ. ಈ …

Read More »

ವರ್ಗಾವಣೆಯಾಗ್ತಿದ್ದಂತೆ ನಾಲ್ವರಿಗೆ ಮುಂಬಡ್ತಿ ನೀಡಿದ ಕರ್ನಾಟಕ ಭವನದ ನಿವಾಸಿ ಆಯುಕ್ತರು

ನವದೆಹಲಿ: ಕೇಂದ್ರ ಸೇವೆಗೆ ವರ್ಗಾವಣೆಯಾಗಿರುವ ದೆಹಲಿ ಕರ್ನಾಟಕ ಭವನದ ನಿವಾಸಿ ಆಯುಕ್ತ ನಿಲಯ್ ಮಿತಾಶ್ ತಮ್ಮ ನಿರ್ಗಮನ ವೇಳೆ ನಾಲ್ವರು ಉದ್ಯೋಗಿಗಳಿಗೆ ಮುಂಬಡ್ತಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ನಿಲಯ್ ಮಿತಾಶ್ ಅವರು ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ ಗೆ ನೇಮಕವಾದ ಹಿನ್ನೆಲೆ ವಿ. ವಿಧ್ಯಾವತಿಯವರನ್ನು ಕರ್ನಾಟಕ ಭವನದ ನಿವಾಸಿ ಆಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ನಿಲಯ್ ಮಿತಾಶ್ ತಮ್ಮ ನಿರ್ಗಮನದ ಮುನ್ನ ಸಹಾಯಕ ಸಮನ್ವಯ ಅಧಿಕಾರಿಗಳಾಗಿದ್ದ ಕುಸುಮಾ …

Read More »

ಭಟ್ಕಳದಲ್ಲಿ ಯುವತಿಗೆ ಕೊರೊನಾ ಪಾಸಿಟಿವ್- ಹೆಲ್ತ್ ಬುಲೆಟಿನ್‍ನಲ್ಲಿ ತಪ್ಪಾಗಿದ್ದಕ್ಕೆ ಡಿಸಿ ಸ್ಪಷ್ಟನೆ

ಕಾರವಾರ: 20 ದಿನದ ಅಂತರದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಆರೆಂಜ್ ಝೋನ್ ನಿಂದ ಗ್ರೀನ್ ಝೋನ್ ನತ್ತ ಸಾಗುತ್ತಿರುವುದರಿಂದ ಜಿಲ್ಲೆಯ ಜನ ಆತಂಕ ಪಡುವಂತಾಗಿದೆ. ಇಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿ ಭಟ್ಕಳದ 28 ವರ್ಷದ ಯುವಕ ಎಂದು ನಮೂದಾಗಿ ಪ್ರಕಟಗೊಂಡಿತ್ತು. ಆದರೆ ಅದು 18 ವರ್ಷದ ಯುವತಿಯಾಗಿದ್ದು ಸರ್ಕಾರದ ಪ್ರಕಟಣೆಯಲ್ಲಿ ಲೋಪದಿಂದ ಯುವತಿ ಬದಲು ಪುರುಷ …

Read More »

ದೇವನಹಳ್ಳಿ ಬಳಿ ವಿದೇಶದಿಂದ ಕರೆತರುವ ಕನ್ನಡಿಗರ ಕ್ವಾರಂಟೈನ್, ಸ್ಥಳೀಯ ಶಾಸಕರ ವಿರೋಧ

ಬೆಂಗಳೂರು, ಮೇ.5- ವಿದೇಶದಿಂದ ಕರೆತರುತ್ತಿರುವ ಕನ್ನಡಿಗರನ್ನು ದೇವನಹಳ್ಳಿ ಬಳಿ ಕ್ವಾರಂಟೈನ್ ಮಾಡುತ್ತಿರುವ ಸರ್ಕಾರದ ಕ್ರಮಕ್ಕೆ ಸ್ಥಳೀಯ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಕೊರೊನಾ ಮಹಾಮಾರಿ ವ್ಯಾಪಿಸುತ್ತಿರುವುದರಿಂದ ಜನ ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಿದೇಶಿಗರನ್ನು ದೇವನಹಳ್ಳಿಯಲ್ಲಿ ಕ್ವಾರಂಟೈನ್ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಶಾಸಕರಾದ ನಾರಾಯಣಸ್ವಾಮಿ ಹಾಗೂ ವೆಂಕಟರಮಣಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನ ಹೆಮ್ಮಾರಿ ಇಡೀ ಪ್ರಪಂಚವನ್ನೆ ಕಿತ್ತು ತಿನ್ನುತ್ತಿದ್ದು ಲಕ್ಷಾಂತರ ಜನರನ್ನ ಬಲಿ …

Read More »