Breaking News

Laxminews 24x7

ಜನರಿಗೆ ಪಂಗನಾಮ ಹಾಕಲು ವಂಚಕರು ಹೊಸ ಹೊಸ ದಾರಿ

ಇಡೀ ದೇಶ ಕ್ಯಾಶ್​ಲೆಸ್​ ವ್ಯವಹಾರದ ಕಡೆ ತಿರುಗುತ್ತಿದ್ದು, ಆನ್​ಲೈನ್​ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರಿಗೆ ಪಂಗನಾಮ ಹಾಕಲು ವಂಚಕರು ಹೊಸ ಹೊಸ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. Googlepay, phonepe ಮತ್ತು paytm ಇಂದ ಹಣ ಪಾವತಿಸುವುದನ್ನು ನೋಡಿದ್ದೇವೆ. ಹಣ ಪಾವತಿ ಆಗಿದೆಯೋ? ಇಲ್ಲವೋ? ಎಂಬುದನ್ನು ಪ್ರತಿ ಪೇಮೆಂಟ್​ ವೇಳೆ ಖಾತರಿಪಡಿಸಿಕೊಳ್ಳುತ್ತೇವೆ. ಆದರೆ, ಇದೀಗ ವೈರಲ್​ ಆಗಿರುವ ವಿಡಿಯೋ ಒಂದರಲ್ಲಿ ಆನ್​ಲೈನ್​ ವಂಚಕರ ಕೈಚಳಕ ನೋಡಿ ಜನರು ಶಾಕ್​ ಆಗಿದ್ದಾರೆ. ಹಣ …

Read More »

ರಾಜ್ಯದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ಈ ಬಾರಿಯೂ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಅನುಮಾನ!

ಬೆಂಗಳೂರು : ರಾಜ್ಯದ 8 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು , ಕೊರೊನಾ ಕಾರಣದಿಂದ ಸರ್ಕಾರಿ / ಅನುದಾನಿತ ಶಾಲೆಗಳ 8 ನೇ ತರಗತಿ ವಿದ್ಯಾರ್ಥಿಗಳಿಗೆ ಈ ಬಾರಿಯೂ ಸೈಕಲ್ ಸಿಗುವುದು ಅನುಮಾನ ಎನ್ನಲಾಗಿದೆ . ಕೊರೊನಾ ಸೋಂಕಿನಿಂದಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರಿದ್ದರಿಂದಾಗಿ ಈ ವರ್ಷವೂ 8ನೇ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ಬೈಸಿಕಲ್ ಯೋಜನೆ ಮುಂದುವರೆಸುವುದು ಅನುಮಾನವಾಗಿದೆ.   2019-20 ನೇ ಸಾಲಿನಲ್ಲಿ ರಾಜ್ಯದಲ್ಲಿ 2,44,901 ಬಾಲಕಿಯರು ಹಾಗೂ 2,59,624 ಬಾಲಕರಿಗೆ ಸೈಕಲ್ ವಿತರಣೆ ಮಾಡಲಾಗಿತ್ತು. ಕಳೆದ ವರ್ಷ 5 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವ ಅಂದಾಜು ಇತ್ತು. ಆದರೆ ಕೊರೊನಾ ಲಾಕ್ ಡೌನ್, ಅನುದಾನದ ಕೊರತೆ ಕಾರಣಗಳಿಂದಾಗಿ ಸೈಕಲ್ ವಿತರಣೆ ಕೈಬಿಡಲಾಗಿತ್ತು. …

Read More »

ಪ್ರಯಾಣಿಕರೇ ಎಚ್ಚರ…ಇನ್ಮುಂದೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಜೋರಾಗಿ ಶಬ್ದ ಮಾಡುವಂತಿಲ್ಲ..!

ಬೆಂಗಳೂರು: ಸರ್ಕಾರಿ ಬಸ್ ಪ್ರಯಾಣದ ವೇಳೆ ಜೋರಾಗಿ ಶಬ್ದ ಮಾಡುವುದನ್ನು ನಿಷೇಧಿಸಿ ಕೆಎಸ್ಆರ್​ಟಿಸಿ ಎಂ.ಡಿ ಶಿವಯೋಗಿ ಕಳಸದ್​ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಬಸ್​ನಲ್ಲಿ ಪ್ರಯಾಣಿಸುವಾಗ ಹಾಡು, ಸಿನಿಮಾ ಮುಂತಾದವುಗಳನ್ನು ಜೋರಾಗಿ ಹಾಕುವಂತಿಲ್ಲ. ಒಂದು ವೇಳೆ ಹಾಕಿದ್ರೂ ಕೂಡ ಮೊದಲು ಬಸ್ ನಿರ್ವಾಹಕ ಪ್ರಯಾಣಿಕರಲ್ಲಿ ಮನವಿ ಮಾಡಿಕೊಳ್ಳಬೇಕು. ಮನವಿ ಕಡೆಗಣಿಸಿದರೆ ಬಸ್ ಅರ್ಧಕ್ಕೆ ನಿಲ್ಲಿಸಿ ಆ ಪ್ರಯಾಣಿಕನನ್ನು ಅಲ್ಲೇ ಇಳಿಸಿ, ಮುಂದುವರೆಯಬೇಕು. ಈ ಬಗ್ಗೆ ಏನಾದರು ಸಮಸ್ಯೆಗಳು ಎದುರಾದರೆ ತಕ್ಷಣವೇ ಸ್ಥಳೀಯ ಪೊಲೀಸ್ …

Read More »

ಹಾಡಹಗಲೇ ಬೈಕ್ ಗೆ ಅಡ್ಡ ಬಂದ ಚಿರತೆ!

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಹಾಡಹಗಲೇ ಚಿರತೆಯೊಂದು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಇಂದು ಬೆಳಗ್ಗೆ ಬೆಟ್ಟಕ್ಕೆ ತೆರಳುತ್ತಿದ್ದ ಬೈಕ್ ಸವಾರರೊಬ್ಬರ ಮುಂಭಾಗವೇ ಚಿರತೆ ಬಂದಿದೆ. ಇದರಿಂದ ಬೈಕ್ ಸವಾರ ಆತಂಕಗೊಂಡಿದ್ದು, ತನ್ನ ಮೊಬೈಲ್ ನಲ್ಲಿ ಚಿರತೆ ದೃಶ್ಯವನ್ನು ಸೆರೆ ಹಿಡಿದಿದ್ದಾನೆ.ಕಳೆದ ವರ್ಷ ಕೂಡಾ ಇದೇ ಅವಧಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಚಿರತೆಯೊಂದು ಗಾಯಗೊಂಡಿತ್ತು.   #MysuruLeopard spotted at #Chamundihill. A bike rider on his way to …

Read More »

ಮಿನಿಸ್ಟರಿಗೆಲ್ಲಾ ಹಣ ಹೋಗಿದೆ: ಐಪಿಎಸ್‌ ಅಧಿಕಾರಿ – ಕಾನ್‌ಸ್ಟೆಬಲ್‌ ಸಂಭಾಷಣೆ

ಬೆಂಗಳೂರು: ಹ್ಯಾಕರ್‌ ಶ್ರೀಕೃಷ್ಣ ಪೊಲೀಸರ ಸುಪರ್ದಿಯಲ್ಲಿದ್ದಾಗಲೇ ಆತನ ಮೂಲಕ ಬಿಟ್‌ಕಾಯಿನ್‌ಗಳನ್ನು ರಾಜ್ಯದ ಪ್ರಭಾವಿ ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗಿತ್ತು ಎಂಬ ಸುಳಿವು ನೀಡುವ ದೂರವಾಣಿ ಸಂಭಾಷಣೆಯೊಂದರ ತುಣುಕು ಶುಕ್ರವಾರ ಬಹಿರಂಗಗೊಂಡಿದೆ.   ಐಪಿಎಸ್‌ ಅಧಿಕಾರಿಯೊಬ್ಬರು ಸಿಐಡಿಯ ಸೈಬರ್‌ ಅಪರಾಧ ವಿಭಾಗದ ಪೊಲೀಸ್‌ ಅಧಿಕಾರಿಯೊಬ್ಬರ ಜತೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯಲ್ಲಿ ಶ್ರೀಕೃಷ್ಣ ಪೊಲೀಸ್‌ ಕಸ್ಟಡಿಯಲ್ಲಿದ್ದಾಗ ನಡೆದಿರುವ ಘಟನಾವಳಿಗಳ ಮಾಹಿತಿ ಇದೆ. ಪೊಲೀಸ್ ಅಧಿಕಾರಿಗಳ ಸಂಭಾಷಣೆಯ ಪೂರ್ಣಪಾಟ ಹೀಗಿದೆ… ಸಿಐಡಿ …

Read More »

ಇಂದು ಸಹ ಮಳೆ, ಬೆಂಗಳೂರಿನಲ್ಲಿ ಹೆಚ್ಚಾದ ಚಳಿ

ಬೆಂಗಳೂರಿನ (Bengaluru) ಕೆಲ ಭಾಗಗಳಲ್ಲಿ ಜಿಟಿ ಜಿಟಿ ಮಳೆ(Rainfall)ಯಾಗಲಿದೆ. ಕಳೆದ ಮೂನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನ  ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಮಳೆ ಜೊತೆಗೆ ಶೀತಗಾಳಿ ಸಹ ಬೀಸುತ್ತಿರುವ ಪರಿಣಾಮ ಚಳಿ ಪ್ರಮಾಣ ಸಹ ಏರಿಕೆಯಾಗಿದೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ 19 ಮಿ.ಮೀ.ನಷ್ಟು ಮಳೆಯಾಗಿದೆ. ವಿಮಾನ ನಿಲ್ದಾಣ ಭಾಗದಲ್ಲಿ 10.4 ಮಿ.ಮೀ., ಹೆಚ್ಎಎಲ್ ನಲ್ಲಿ 15.6 ಮಿ.ಮೀ.ನಷ್ಟು ಮಳೆಯಾಗಿದೆ. ಇಂದು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು …

Read More »

ರೈತರು ಬೆಳೆ ಬೆಳೆದ ಜಮೀನಿನ ಮೇಲೆ ಬೆಳೆ ಕಟಾವು ಆಗುವವರೆಗೂ ಕಾಮಗಾರಿ ನಡೆಸಲ್ಲ ಅಂತಾ ಡಿಸಿ ಭರವಸೆ ನೀಡಿದ್ದರೂ ಬೆಳೆಯ ಮೇಲೆ ಜೆಸಿಬಿ

ಬೆಳಗಾವಿ  ಬೆಳಗಾವಿ ತಾಲೂಕಿನ (Belagavi) ಹಲಗಾ ಮತ್ತು ಮಚ್ಛೆ ಗ್ರಾಮದ ಮಧ್ಯೆ 9.5 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ 4 ಎ ಬೈಪಾಸ್ ರಸ್ತೆ ಕಾಮಗಾರಿ (National Highway By Pass Constuction) ರೈತರ ವಿರೋಧದ (Farmers Objection) ‌ನಡುವೆಯೂ ಶುರುವಾಗಿದೆ. ನಿನ್ನೆ ಕಾಮಗಾರಿ ಆರಂಭಗೊಂಡ ವೇಳೆ ರೈತರು ಪ್ರತಿಭಟನೆ ನಡೆಸಿದ್ದರು. ಜಮೀನು ಮಾಲೀಕನ ಪುತ್ರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇದಾದ ಬಳಿಕ …

Read More »

ದೇವೇಗೌಡರ ಹಾಗೂ ಕುಮಾರಸ್ವಾಮಿ ಹೆಸರು ಹೇಳಿದಂತೆ ಓಡಿ ಬಂದು ಒತ್ತೋರು ಯಾರೂ ಇಲ್ಲ. :

ಹಾಸನ: ಜನವರಿಯಲ್ಲಿ ತೆರವಾಗುತ್ತಿರುವ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ (Council Election) ಘೋಷಣೆ ಹಿನ್ನೆಲೆ ಜಿಲ್ಲೆಯ ಸಂಸದ ಪ್ರಜ್ವಲ್​​ ರೇವಣ್ಣ(Prajwal Revanna) ಅವರ ಅಧಿಕೃತ ನಿವಾಸದಲ್ಲಿ ಜೆಡಿಎಸ್ ಶಾಸಕರು, ಮುಖಂಡರು, ಕಾರ್ಯಕರ್ತರ ಸಭೆ (JDS Meeting) ನಡೆಸಿದರು. ಅಭ್ಯರ್ಥಿ ಆಯ್ಕೆ ಸಂಬಂಧ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(H. D. Deve Gowda), ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರುಗಳಾದ ಎಚ್.ಡಿ.ರೇವಣ್ಣ, ಕೆ.ಎಸ್.ಲಿಂಗೇಶ್, ಮಾಜಿಶಾಸಕರು, ಜಿ.ಪಂ. ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಯಿತು. ಟಿಕೆಟ್​​ ಗಾಗಿ …

Read More »

ಏಕದಿನ ನಾಯಕತ್ವಕ್ಕೂ ವಿದಾಯ ಹೇಳಲಿದ್ದಾರೆ ಕೊಹ್ಲಿ; ರವಿಶಾಸ್ತ್ರಿ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ತೊರೆದಿದ್ದು, ಇದೀಗ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಲಿದ್ದಾರೆ. ಕೊಹ್ಲಿ ಇನ್ನೂ ODI ಮತ್ತು ಟೆಸ್ಟ್ ತಂಡಗಳ ನಾಯಕರಾಗಿದ್ದಾರೆ, ಆದರೆ ಇತರ ಎರಡೂ ಸ್ವರೂಪಗಳಲ್ಲಿ ಅವರ ನಾಯಕತ್ವದ ಭವಿಷ್ಯವು ಪ್ರಶ್ನೆಯಾಗಿಯೇ ಉಳಿದಿದೆ. ಕೊಹ್ಲಿಯೊಂದಿಗೆ ಸತತ 4 ವರ್ಷಗಳಿಂದ ಟೀಂ ಇಂಡಿಯಾಗಾಗಿ ಕೆಲಸ ಮಾಡಿದ್ದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಮುಂದಿನ ದಿನಗಳಲ್ಲಿ ಭಾರತದ ಹಿರಿಯ ಬ್ಯಾಟ್ಸ್‌ಮನ್ ಇತರ …

Read More »

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ದೆಹಲಿ: ಇಂದು (ನವೆಂಬರ್ 13, ಶನಿವಾರ) ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸತತ ಒಂಬತ್ತನೇ ದಿನವೂ ಇಂಧನ ದರ (Fuel Price) ಸ್ಥಿರವಾಗಿದೆ. ನವೆಂಬರ್ 3ನೇ ತಾರೀಕಿನಂದು ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಮನ್ನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಅನೇಕ ರಾಜ್ಯಗಳು ವ್ಯಾಟ್ ಅನ್ನು ಕಡಿಮೆ ಮಾಡಿತ್ತು. ಆ ಬಳಿಕ ಹಲವೆಡೆ ಇಂಧನ ದರದಲ್ಲಿ ಕೊಂಚ ಇಳಿಕೆ ಆಗಿತ್ತು. ನಿರಂತರ ಏರಿಕೆ ಕಾಣುತ್ತಿದ್ದ ಪೆಟ್ರೋಲ್ (Petrol …

Read More »