Breaking News

Laxminews 24x7

ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಎರಡು ಹೆಜ್ಜೆ ಮುಂದೆ ಹೋಗಿದ್ದೇವೆ: ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಹೈಕಮಾಂಡ್ ಜೊತೆ ವಿಸ್ತೃತ ಚರ್ಚೆ ನಡೆದಿದ್ದು, ಕಳೆದ ಬಾರಿಗಿಂತ ಎರಡು ಹೆಜ್ಜೆ ಮುಂದೆ ಹೋಗಿದ್ದೇವೆ. ಸಂಪುಟ ವಿಸ್ತರಣೆ ವಿಷಯ ಅಂತಿಮ ಹಂತಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಒಂದು ಪ್ರಕ್ರಿಯೆ, ಇದೀಗ ಈ ವಿಷಯದಲ್ಲಿ ಕಳೆದ ಬಾರಿಗಿಂತ ಎರಡು …

Read More »

ಸರ್ ಕೊಲೆ ಮಾಡ್ತಾರೆ ಬದುಕಿಸಿ: ಪೊಲೀಸರಿಗೆ ಗೋಗರೆದು ಶರಣಾದ ರೌಡಿ ಶೀಟರ್ ಸ್ಟಾರ್ ನವೀನ್

ಬೆಂಗಳೂರು : ಬೆಂಗಳೂರು ಸಿಸಿಬಿ ಮತ್ತು ಸೌಥ್ ಪೊಲೀಸರು ಹುಡುಕಾಡುತ್ತಿದ್ದ ರೌಡಿ ಶೀಟರ್ ನವೀನ್ ಅಲಿಯಾಸ್ ಸ್ಟಾರ್ ಇದ್ದಕ್ಕಿದ್ದಂತೆ ಸಿದ್ದಾಪುರ ಪೊಲೀಸರಿಗೆ ಕರೆ ಮಾಡಿ ಸರ್ ನನ್ನ ಉಳಿಸಿ, ಇಲ್ಲದಿದ್ದರೆ ನನ್ನ ಕೊಲೆ ಮಾಡುತ್ತಾರೆ ಎಂದು ಗೋಗರೆದಿದ್ದ. ಇನ್ನೂ ನವೀನ ತಮಿಳುನಾಡಿನಿಂದ ಮೈಸೂರಿಗೆ ಬರುವಾಗ ಫಾಲೋ ಮಾಡಿದ ಗ್ಯಾಂಗ್‌ನಿಂದ ಈತ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಮೈಸೂರಿಗೆ ಎದುರಾಳಿಗಳಿಗೆ ಮೆಸೇಜ್ ಪಾಸ್​ ಮಾಡಿದ್ದ ವಿಷಯ ಕೇಳಿಸಿಕೊಂಡು ಜಾಗೃತನಾದ ರೌಡಿಶೀಟರ್ ನವೀನ ತಕ್ಷಣ ಸಿಸಿಬಿ …

Read More »

8 ತಿಂಗಳು ತಿರುಪತಿ ತಿಮ್ಮಪ್ಪನ ದರ್ಶನ ಬಂದ್.?

ತಿರುಪತಿ: ಗರ್ಭಗುಡಿ ಮೇಲಿನ ಗೋಪುರದ ಚಿನ್ನದ ಲೇಪನ ಕಾರ್ಯ ಕೈಗೊಳ್ಳುವುದರಿಂದ ಎಂಟು ತಿಂಗಳ ಕಾಲ ತಿರುಪತಿ ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಬಂದ್ ಆಗಲಿದೆ. ತಾತ್ಕಾಲಿಕವಾಗಿ ಗರ್ಭಗುಡಿ ನಿರ್ಮಿಸಿ ಭಕ್ತರಿಗೆ ದರ್ಶನ ಕಲ್ಪಿಸಲು ಚಿಂತನೆ ನಡೆದಿದೆ.   ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಾರ್ಷಿಕ ಒಂದು ಕೋಟಿಗೂ ಅಧಿಕ ಭಕ್ತರು ಬರುತ್ತಾರೆ. ಗರ್ಭಗುಡಿಯನ್ನು ಕನಿಷ್ಠ ಆರರಿಂದ ಎಂಟು ತಿಂಗಳ ಕಾಲ ಮುಚ್ಚುವ ಸಾಧ್ಯತೆ ಇದ್ದು, ಗರ್ಭಗುಡಿಯ ಮೇಲೆ ಮೂರು ಅಂತಸ್ತಿನ …

Read More »

ವಿಧಾನಸಭೆಯಲ್ಲಿ `SC-ST’ ಮೀಸಲಾತಿ ಹೆಚ್ಚಳ ಮಸೂದೆ ಪಾಸ್

ಬೆಳಗಾವಿ : ಪರಿಶಿಷ್ಟ ಜಾತಿ (SC) ಮತ್ತು ಪಂಗಡದ (ST) ವರ್ಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಹೆಚ್ಚಿಸುವ ಮಸೂದೆಗೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ನೀಡಿದೆ. ಈ ಮೂಲಕ ಎಸ್ ಸಿ ಗೆ ಪ್ರಸ್ತುತ ಶೇ. 15 ರಷ್ಟು ಇದ್ದ ಮೀಸಲು 17 ಕ್ಕೆ ಹಾಗೂ ಎಸ್ ಟಿ ಗೆ ಇದ್ದ ಶೇ. 3 ರಷ್ಟು ಮೀಸಲು ಶೇ. 7 ಕ್ಕೆ ಹೆಚ್ಚಾಗಲಿದೆ.   ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ …

Read More »

ವರಿಷ್ಠರ ಸಮ್ಮತಿ ದೊರೆಯದ ಕಾರಣ ಮತ್ತೆ ಸಂಪುಟ ವಿಸ್ತರಣೆ ಠುಸ್ ಆಗಿದೆ? ಸಿ.ಎಂ ಬೊಮ್ಮಾಯಿ

ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಿರೀಕ್ಷೆ ಹೊತ್ತು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಎರಡೂವರೆ ಗಂಟೆಗಳ ಕಾಲ ಸಭೆ ನಡೆಸಿದರು. ಆದರೆ ವರಿಷ್ಠರ ಸಮ್ಮತಿ ದೊರೆಯದ ಕಾರಣ, ಸಂಪುಟ ವಿಸ್ತರಣೆ ಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.   ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್, ಕರ್ನಾಟಕ ಉಸ್ತುವಾರಿ ಅರುಣ್ …

Read More »

ಮಾಳಿ ಸಮುದಾಯದ ರಾಜ್ಯಮಟ್ಟದ ಸಮಾವೇಶಕ್ಕೆ ಚಾಲನೆ

ಮುಗಳಖೋಡ: ‘ಮಾಳಿ/ ಮಾಲಗಾರದಂತಹ ಸಣ್ಣ ವೃತ್ತಿಪರ ಸಮುದಾಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹400 ಕೋಟಿ ಅನುದಾನ ಮೀಸಲಿಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದಲ್ಲಿ ಸೋಮವಾರ ನಡೆದ ಅಖಿಲ ಕರ್ನಾಟಕ ಮಾಳಿ/ಮಾಲಗಾರ ಸಮುದಾಯದ ರಾಜ್ಯಮಟ್ಟದ ದ್ವಿತೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.   ‘ಕಂಬಾರ, ಕುಂಬಾರ, ಪತ್ತಾರ, ಕ್ಷೌರಿಕ, ನೇಕಾರ ಸೇರಿದಂತೆ ಹಲವು ಸಣ್ಣ ಸಮಯದಾಯಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಸರ್ಕಾರ ಸದಾ ನಿಮ್ಮೊಂದಿಗೆ ಇರುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ …

Read More »

ಕೆಪಿಟಿಸಿಎಲ್‌ ಮಾದರಿ ಪಿಎಸ್‌ಐಗೆ ಏಕಿಲ್ಲ? PSI ನೇಮಕಾತಿ ‍ಪರೀಕ್ಷೆ ಪಾಸಾದವರ ಅಳಲು

ಬೆಳಗಾವಿ: ಕೆಪಿಟಿಸಿಎಲ್‌ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪಿಗಳನ್ನು ಬಿಟ್ಟು, ಉಳಿದವರಿಗೆ ನೇಮಕಾತಿ ಆದೇಶ ನೀಡಲು ರಾಜ್ಯ ಸಾರ್ಕಾರ ನಿರ್ಧರಿಸಿದೆ. ಇದೇ ರೀತಿಯ ನಿಲುವನ್ನು 545 ಪಿಎಸ್‌ಐ ನೇಮಕಾತಿ ‍ಪರೀಕ್ಷೆ ಬರೆದವರ ಬಗ್ಗೆ ಏಕೆ ತಾಳುತ್ತಿಲ್ಲ ಎಂದು ಅಭ್ಯರ್ಥಿಗಳು ಪ್ರಶ್ನೆ ಎತ್ತಿದ್ದಾರೆ.   ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ, ಒಎಂಆರ್‌ ಶೀಟ್‌ ತಿದ್ದುವ ಮೂಲಕ ಅಕ್ರಮ ಎಸಗಲಾಗಿದೆ. ಇದೇ ಮಾದರಿಯ ಅಕ್ರಮಗಳು ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿಯಲ್ಲೂ ನಡೆದಿವೆ. …

Read More »

ಮತ್ತೆ ವಿದೇಶದತ್ತ ಉಕ್ರೇನ್‌ ಸಂತ್ರಸ್ತ ವೈದ್ಯಕೀಯ ವಿದ್ಯಾರ್ಥಿಗಳು

ವಿಜಯಪುರ: ಉಕ್ರೇನ್‌-ರಷ್ಯಾ ಯುದ್ಧದ ಪರಿಣಾಮ ಜೀವ ಉಳಿಸಿಕೊಂಡು ಭಾರತಕ್ಕೆ ಮರಳಿದ್ದ ನಿರಾಶ್ರಿತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸದ ಕಾರಣಕ್ಕೆ ನಿರಾಶರಾದ ವಿದ್ಯಾರ್ಥಿಗಳು ಇದೀಗ ವಿದೇಶದತ್ತ ಮುಖ ಮಾಡತೊಡಗಿದ್ದಾರೆ.   ಉಕ್ರೇನ್‌ನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮರಳಿದ್ದ ಸುಮಾರು 700 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ನಿರಾಕರಿಸಿದೆ. …

Read More »

ಪಕ್ಷ ಕಟ್ಟುವವರು ಹಾಗೂ ಸ್ಪರ್ಧಿಸುವವರು ಹುಚ್ಚರಿರಬಾರದು’ :ಪ್ರಲ್ಹಾದ ಜೋಶಿ

ಧಾರವಾಡ: ‘ಪಕ್ಷ ಕಟ್ಟುವುದಕ್ಕೆ, ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಂವಿಧಾನ ಅವಕಾಶ ನೀಡಿದೆ. ಆದರೆ ಹಾಗೆ ಪಕ್ಷ ಕಟ್ಟುವವರು ಹಾಗೂ ಸ್ಪರ್ಧಿಸುವವರು ಹುಚ್ಚರಿರಬಾರದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟಾಂಗ್ ಕೊಟ್ಟರು.   ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರ ಹೊಸ ಪಕ್ಷ ಸ್ಥಾಪನೆಯಿಂದ ಬಿಜೆಪಿಗೇನೂ ನಷ್ಟವಿಲ್ಲ. ಬಿಜೆಪಿ ತತ್ವ ಸಿದ್ಧಾಂತಗಳ ಮೇಲೆ ಚುನಾವಣೆ ಎದುರಿಸುತ್ತದೆ’ ಎಂದರು. ನ್ಯಾಯಾಲಯದ ಆದೇಶದಂತೆ ತೆರವು ‘ಹುಬ್ಬಳ್ಳಿಯ …

Read More »

ಬೆಳಗಾವಿ, ಕಾರವಾರ, ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಿ: ಠಾಕ್ರೆ

ಮುಂಬೈ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸುವಂತೆ ಶಿವಸೇನ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರ ವಿಧಾನಸಭೆಗೆ ತಿಳಿಸಿದ್ದಾರೆ.   ‘ಕರ್ನಾಟಕದ ಮುಖ್ಯಮಂತ್ರಿ ಆಕ್ರಮಣಕಾರಿಯಾಗಿದ್ದು, ಮಹಾರಾಷ್ಟ್ರ ಸಿಎಂ ಶಿಂದೆ ಮೌನವಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಬರುವವರೆಗೂ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಬೇಕು. ಪ್ರಸ್ತಾವನೆಯಲ್ಲಿ ಇದನ್ನು ಸೇರಿಸಿ ಸದನ ಅಂಗೀಕರಿಸಬೇಕು’ ಎಂದು ಉದ್ಧವ್ ಹೇಳಿದ್ದಾರೆ. ಉದ್ಧವ್ …

Read More »