Breaking News

ಸರ್ಕಾರಿ ನೌಕರರಿಗೆ ಬಿಜೆಪಿ ನೀಡಿದಷ್ಟು ಸೌಲಭ್ಯವನ್ನು ಬೇರೆ ಯಾರೂ ನೀಡಿಲ್ಲ: ಈಶ್ವರಪ್ಪ

Spread the love

ಮೈಸೂರು: ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ಅಣ್ಣ ತಮ್ಮನಂತೆ ಇದ್ದಾರೆ. ಷಡಕ್ಷರಿಯನ್ನು ಯಡಿಯೂರಪ್ಪ ಎತ್ತಿಕಟ್ಟಿದ್ದಾರೆ ಎಂದು ಹೇಳುವುದು ಕುತಂತ್ರ ಎಂದು ಕಾಂಗ್ರೆಸ್ ಟ್ವೀಟ್‌ ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದರು.

ಕಾಂಗ್ರೆಸ್‌ ನಲ್ಲಿ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಕಿತ್ತಾಟವಿದೆ. ಅದೇ ರೀತಿ ಬಿಜೆಪಿಯವರೂ ಕಿತ್ತಾಡಲಿ ಎಂದು ಈ ರೀತಿ ಹೇಳುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಬಿಜೆಪಿಯವರು ನೀಡಿದಷ್ಟು ಸೌಲಭ್ಯವನ್ನು ಬೇರೆ ಯಾರೂ ನೀಡಲಿಲ್ಲ. ಹೀಗಿದ್ದರೂ ಮುಷ್ಕರ ಮಾಡುತ್ತೇವೆ ಎಂದರೆ ಏನು ಹೇಳುವುದು ಎಂದರು

 

ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಇವರೆಲ್ಲರನ್ನು ಅನಾರೋಗ್ಯ ಕಾರಣದಿಂದ ಕೆಳಗಿಳಿಸಲಿಲ್ಲ. ರಾಜೀವ್ ಗಾಂಧಿ ನೇರವಾಗಿ ಏರ್ಪೋರ್ಟ್ ನಿಂದಲೇ ಅಪಮಾನ ಮಾಡಿ ಇಳಿಸಿದ್ದರು. ಆದರೆ ಯಡಿಯೂರಪ್ಪನವರು ಅವರಾಗಿಯೇ ರಾಜೀನಾಮೆ ಕೊಟ್ಟಿದ್ದು. ಇವರೆಡಕ್ಕು ಬಹಳ ವ್ಯತ್ಯಾಸವಿದೆ. ರಾಜಕೀಯ ಕುತಂತ್ರದಿಂದ ಈ ರೀತಿ ಹೇಳಿಕೆಗಳನ್ನು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ವೀರೇಂದ್ರ ಪಾಟೀಲ್ ಅವರು ಎಂತಹ ಆಡಳಿತಗಾರರೆಂದು ಎಲ್ಲರಿಗೂ ಗೊತ್ತು. ಶಿವಮೊಗ್ಗ ಜನರು ಅವರ ಹೆಸರಿನಲ್ಲಿ ನೀರು ಕುಡಿಯುತ್ತಿದ್ದೇವೆ ಎಂದು ಈಶ್ವರಪ್ಪ ಹೇಳಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ