Breaking News

ಕೋಟಿ ಕೈಗಳಿಗೆ ಕೆಲಸ ನೀಡಿದ ಬೆಳಗಾವಿ; ನರೇಗಾ ಮಾನವ ದಿನ ಸೃಜನೆಯಲ್ಲಿ ರಾಜ್ಯದಲ್ಲೇ ಪ್ರಥಮ

Spread the love

ಬೆಳಗಾವಿ: ಕೊರೊನಾ ಮತ್ತು ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಹೊಸ ಭರವಸೆ ಮೂಡಿಸಿದೆ.

ಜಿಲ್ಲೆಯಲ್ಲಿ ಯೋಜನೆಯಡಿ ಒಂದು ಕೋಟಿ ಮಾನವ ದಿನ ಸೃಜಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದೆ.

ರಾಯಚೂರು ಜಿಲ್ಲೆ 96.40 ಲಕ್ಷ ಮಾನವ ದಿನ ಸೃಜನೆಯೊಂದಿಗೆ 2ನೇ ಸ್ಥಾನದಲ್ಲಿದೆ. 71.91ಲಕ್ಷ ಮಾನವ ದಿನ ಸೃಜಿಸಿರುವ ಕೊಪ್ಪಳ 3ನೇ ಸ್ಥಾನದಲ್ಲಿದ್ದರೆ, ವಿಜಯನಗರ ಜಿಲ್ಲೆ 58.24 ಲಕ್ಷ ಮತ್ತು ಬಳ್ಳಾರಿ ಜಿಲ್ಲೆ 50.89 ಲಕ್ಷ ಸಾಧನೆಯೊಂದಿಗೆ ಅನಂತರದ ಸ್ಥಾನದಲ್ಲಿವೆ. ಕೊನೆಯ ಸ್ಥಾನದಲ್ಲಿರುವ ಕೊಡಗು ಜಿಲ್ಲೆಯಲ್ಲಿ 5.14 ಲಕ್ಷ ಮಾತ್ರ ಮಾನವ ದಿನಗಳನ್ನು ಸೃಜಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 7.26 ಲಕ್ಷ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12.36 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ.

305.23 ಕೋಟಿ ರೂ. ಕೂಲಿ ಪಾವತಿ
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ವರ್ಷ ಎಪ್ರಿಲ್‌ನಿಂದ ಜ.4ರ ವರೆಗೆ ಒಂದು ಕೋಟಿ ಮಾನವ ದಿನ ಸೃಜಿಸಿ ಕಾರ್ಮಿಕರ ಬ್ಯಾಂಕ್‌ ಖಾತೆಗೆ 305.23 ಕೋಟಿ ಕೂಲಿ ಪಾವತಿ ಮಾಡಲಾಗಿದೆ.

1 ಕೋಟಿ ಮಾನವ ದಿನ ಸೃಜನೆಯ ಗುರಿ
2020-21, 2021-22 ಎರಡು ವರ್ಷಗಳಲ್ಲಿ ಸತತ 1 ಕೋಟಿಗೂ ಅಧಿಕ ಮಾನವ ದಿನಗಳನ್ನು ಸೃಜಿಸಿದ್ದು, ಈ ವರ್ಷ 2022-23ನೇ ಸಾಲಿನಲ್ಲೂ ಡಿಸೆಂಬರ್‌ ಅಂತ್ಯದ ವರೆಗೆ 1 ಕೋಟಿಯ ಗುರಿ ತಲುಪಲಾಗಿದೆ. ಜಿಲ್ಲೆಯ ಎಲ್ಲ 500 ಗ್ರಾ.ಪಂ.ಗಳಲ್ಲಿ ನರೇಗಾ ಕಾಮಗಾರಿ ಜಾರಿಯಲ್ಲಿದ್ದು, ಮಹಿಳೆಯರು, ಪುರು ಷರು ಹಾಗೂ ರೈತರು ಯೋಜನೆಯ ಲಾಭ ಪಡೆದಿದ್ದಾರೆ.

ಯೋಜನೆಯಡಿ ಹೊಸ ಕೆರೆ ನಿರ್ಮಾಣ, ಅಮೃತ ಸರೋವರ, ಕೆರೆ ಹೂಳೆತ್ತುವುದು, ನಮ್ಮ ಹೊಲ ನಮ್ಮ ದಾರಿ (ತೋಟ ಪಟ್ಟಿ ರಸ್ತೆ), ಪಂಚ ಸೂತ್ರದಡಿ (ಶಾಲಾ ಕಾಂಪೌಂಡ್‌, ಶಾಲಾ ಪೇವರ್ಸ್‌, ಮೈದಾನ, ಶೌಚಾಲಯ ಮತ್ತು ಅಡುಗೆ ಕೋಣೆ) ಹೀಗೆ ಶಾಲಾ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ