Breaking News

ಕಾಂಗ್ರೆಸ್​-ಬಿಜೆಪಿ ಥರ ಇರೋ ಒಬ್ಬ ಹುಡುಗಿಗೆ 10 ಜನ ಹುಡುಗರನ್ನ ತಯಾರು ಮಾಡಲ್ಲ ಎಂದ ಸಿಎಂ ಇಬ್ರಾಹಿಂ..!

Spread the love

ಬಾಗಲಕೋಟೆ: ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು ರಾಜಕೀಯ ನಾಯಕರು ವಾಗ್ಯುದ್ಧದಲ್ಲಿ ತೊಡಗಿದ್ದಾರೆ. ಅದಲ್ಲದೇ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದ್ದು ನಾಯಕರ ನಡುವೆ ಜಟಾಪಟಿ ನಡೆಯುತ್ತಿದೆ.

 

ಈ ನಡುವೆ ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿಕೆ ನೀಡಿ ಹೊಸ ಬಾಂಬ್​ ಸಿಡಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ವಿಚಾರವಾಗಿ ಮಾತನಾಡಿದ ಅವರು ‘ನಮ್ಮಲ್ಲಿ ಕ್ಯಾಂಡಿಟೇಟ್ ಇಲ್ಲ. ನಮ್ಮಲ್ಲಿ ಒಬ್ಬರೇ ಅಭ್ಯರ್ಥಿ. ಕುಮಾರಸ್ವಾಮಿ ಕಿ ಜೈ’ ಎಂದಿದ್ದಾರೆ.

‘ನಾವು ಬಿಜೆಪಿ ಮತ್ತು ಕಾಂಗ್ರೆಸ್​ನ ಹಾಗಲ್ಲ. ಇರೋದು ಒಬ್ಬ ಹುಡುಗಿ. ಅಲ್ಲಿ ಹತ್ತು ಜನ ಗಂಡಂದಿರು ರೆಡಿ ಆಗಿ ಕೂತಿದ್ದಾರೆ. ಎಲ್ಲಿ ಏನಾಗುತ್ತೋ ಗೊತ್ತಿಲ್ಲ. ನಮ್ಮದು ಹಾಗಲ್ಲ. ಕುಮಾರಸ್ವಾಮಿ ಅವರನ್ನ ಡಿಕ್ಲೇರ್ ಮಾಡಿ ಚುನಾವಣೆಗೆ ಇಳಿತೀವಿ’ ಎಂದಿದ್ದಾರೆ. ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದಿದ್ದರು. ಈಗ ಸಿಎಂ ಇಬ್ರಾಹಿಂ ಹೇಳಿಕೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕು.

 


Spread the love

About Laxminews 24x7

Check Also

ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ – ಮೇ 4 ರಂದು ಫಲಿತಾಂಶ

Spread the loveನವದೆಹಲಿ: 4 ರಾಜ್ಯ  ಮತ್ತು 1 ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಅಸ್ಸಾಂ, ತಮಿಳುನಾಡು,ಕೇರಳ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ