Breaking News

ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಇನ್ಮುಂದೆ ಸಂಕಷ್ಟ..

Spread the love

ಬೆಂಗಳೂರು: ಟ್ರಾಫಿಕ್ ದಂಡ ಕಟ್ಟದೇ ಓಡಾಡ್ತಿದ್ರೆ ನಿಮ್ಮ ವಾಹನಗಳನ್ನ ರೋಡಿಗಿಳಿಸೋಕೆ ಅಗಲ್ಲ, ಪೊಲೀಸರು ದಂಡದ ರಶೀದಿಯನ್ನ ನಿಮ್ಮ ಮನೆಗೆ ಕಳಿಸಿದ್ರೂ ಡೋಂಟ್ ಕೇರ್ ಎಂದವರಿಗೆ ಕಾದಿದೆ ಬಿಗ್ ಶಾಕ್. ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಇನ್ಮುಂದೆ ಸಂಕಷ್ಟ.

ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳ ಮೇಲೆ ಕಾನೂನು ಅಸ್ತ್ರ. ಆರ್​ಟಿಓ ಮತ್ತು ಇನ್ಶೂರೆನ್ಸ್ ಕಂಪನಿಗಳ ಮೂಲಕ ದಂಡ ವಸೂಲಿಗೆ ಫ್ಲಾನ್ ರೂಪಿಸಲಾಗಿದೆ.

ಪೊಲೀಸರು ವೈಟ್ ಮತ್ತು ಯೆಲ್ಲೋ ಬೋರ್ಡ್ ವಾಹನಗಳ ದಂಡ ವಸೂಲಿಗೆ ಮುಂದಾಗಿದ್ದಾರೆ. ದಂಡ ಬಾಕಿ ಉಳಿಸಿಕೊಂಡ ವೈಟ್ ಬೋರ್ಡ್ ವಾಹನಗಳ ಇನ್ಶೂರೆನ್ಸ್ ಗೆ ಬೀಳುತ್ತೆ ಕೊಕ್ಕೆ. ಪ್ರತಿ ವರ್ಷ ವಾಹನದ ಇನ್ಶೂರೆನ್ಸ್ ಗೆ ಹೋದಾಗ ಟ್ರಾಫಿಕ್ ಪೊಲೀಸರಿಂದ ಎನ್​ಓಸಿ ಕೊಡಬೇಕು. ಎನ್​ಓಸಿ ಕೊಡದಿದ್ದಲ್ಲಿ ಇನ್ಶೂರೆನ್ಸ್ ರಿನಿವಲ್ ಅಗದೇ ಇರುವಂತೆ ಮಾಡಲು ಫ್ಲಾನ್ ಮಾಡಲಾಗಿದ್ದು, ಇನ್ಶೂರೆನ್ಸ್ ಕಂಪನಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಯೆಲ್ಲೋ ಬೋರ್ಡ್ ಗಾಡಿಗಳ ಎಫ್​ಸಿ ಮಾಡಲು ಆರ್​ಟಿಓ ಗೆ ಹೋದಾಗ ಫೈನ್ ಕಲೆಕ್ಟ್ ಮಾಡಲು ಚಿಂತನೆ ನಡೆಸಲಾಗಿದ್ದು, ಫೈನ್ ಕಟ್ಟದೇ ಇದ್ದಲ್ಲಿ ಎಫ್​ಸಿ ರಿನಿವಲ್ ಮಾಡದಿರುವ ಬಗ್ಗೆಯೂ ಸಂಚಾರ ಪೊಲೀಸರಿಂದ ಮಾತುಕತೆ ನಡೆಸಿದ್ದು, ಸಂಚಾರ ನಿಯಮ ಉಲ್ಲಂಘನೆ ದಂಡ ಕಲೆಕ್ಟ್ ಮಾಡಲು ಪೊಲೀಸರು ಈ ಎರಡು ಹೊಸ ಫ್ಲಾನ್ ರೂಪಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ