Breaking News

ನಾಳೆ ವಿಜಯಾನಂದ ಸಿನಿಮಾ ಬಿಡುಗಡೆ

Spread the love

ಹುಬ್ಬಳ್ಳಿ: ವಿಆರ್​​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾ ನಾಳೆ (ಡಿ. 9) ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಮುನ್ನಾ ದಿನವಾದ ಗುರುವಾರ ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಬೈಕ್ ರ‍್ಯಾಲಿ ನಡೆಸಿದರು.

 

ಬೈಕ್​ ರ್ಯಾಲಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹೋದರ ಗೋವಿಂದ ಜೋಶಿ ಚಾಲನೆ ನೀಡಿದರು. ಕನ್ನಡ ಧ್ವಜ ಹಿಡಿದು ರ‍್ಯಾಲಿಗೆ ಚಾಲನೆ ನೀಡುತ್ತಿದ್ದಂತೆ ವಿಜಯಾನಂದ ಸಿನಿಮಾದ ಪೋಸ್ಟರ್​ ಹಿಡಿದು ಅಭಿಮಾನಿಗಳು ಬೈಕ್​ ಏರಿದರು. ಚಿತ್ರದ ಯಶಸ್ಸಿಗೆ ಹಾರೈಸಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಹೊರಟ ಬೈಕ್ ರ‍್ಯಾಲಿಗೆ ಡೊಳ್ಳುಕುಣಿತ ಕಲಾವಿದರು ಸಾಥ್​ ನೀಡಿದರು.

ಡೊಳ್ಳು ವಾದ್ಯಕ್ಕೆ ಮನಸೋತ ಹು-ಧಾ ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮತ್ತು ಡಾ.ವಿಜಯ ಸಂಕೇಶ್ವರ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಡಾ.ರಾಜ್​ಕುಮಾರ್​ ಅಭಿಮಾನಿಗಳ ಒಕ್ಕೂಟ ಹಾಗೂ ಪ್ರಲ್ಹಾದ ಜೋಶಿ ಅಭಿಮಾನಿಗಳ ಸಂಘದ ಸದಸ್ಯರೂ ಪಾಲ್ಗೊಂಡಿದ್ದರು.

ಹಾರೈಸಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಹೊರಟ ಬೈಕ್​ ರ‍್ಯಾಲಿಯು ಕೇಶ್ವಾಪುರ, ಸರ್ವೋದಯ ಸರ್ಕಲ್, ಸ್ಟೇಷನ್ ರೋಡ್, ಕೋಯಿನ್ ರೋಡ್, ಕೊಪ್ಪಿಕರ ರೋಡ್, ಲ್ಯಾಮಿಂಗ್ಟನ್ ರಸ್ತೆ, ಹೊಸೂರ, ವಿದ್ಯಾನಗರ ಮಾರ್ಗವಾಗಿ ಬಿವಿಬಿ ಕಾಲೇಜು ತಲುಪಿತು.


Spread the love

About Laxminews 24x7

Check Also

ನೈಋತ್ಯ ರೈಲ್ವೆ ಟಿಕೆಟ್ ಪರಿಶೀಲನೆ ಪ್ರಕರಣ, ದಂಡ ಸಂಗ್ರಹದಲ್ಲಿ ಹೆಚ್ಚಳ

Spread the loveಹುಬ್ಬಳ್ಳಿ: ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಾದ್ಯಂತ ಟಿಕೆಟ್ ಪರಿಶೀಲನೆ ಮತ್ತು ನಿಯಮ ಜಾರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಪರಿಣಾಮವಾಗಿ, ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ