Breaking News

ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಪಶುವೈದ್ಯಾಧಿಕಾರಿಗಳ ವಿರುದ್ಧ ಆಕ್ರೋಶ

Spread the love

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಪಶು ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಮತ್ತು ಸರಿಯಾಗಿ ಕೆಲಸ ಮಾಡದೆ ಇರುವ ಕಾರಣ ರೈತರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಈಗಾಗಲೇ ಮರ‍್ನಾಲ್ಕು ತಿಂಗಳಿನಿಂದ ದನಗಳ ಸಂತೆಯನ್ನು ಕೂಡ ಬಂದ ಮಾಡಲಾಗಿದ್ದು, ರೈತರಲ್ಲಿ ಸಂಕಟ ಉಂಟು ಮಾಡಿದೆ. ಆದರೇ ಸಕ್ಕರೆ ಕಾರ್ಖಾನೆಗಳಿಗೆ ಅಂತರ್ ರಾಜ್ಯಗಳಿಂದ ಬರುತ್ತಿರುವ ಎತ್ತುಗಳಿಂದ ಲಂಪಿ ರೋಗವು ಹೆಚ್ಚಾಗುತ್ತಿದೆ. ದನಗಳ ಸಂತೆಯನ್ನು ರೋಗದ ಕಾರಣ ಬಂದ ಮಾಡಿದ್ದಿರಿ.

ಸಕ್ಕರೆ ಕಾರ್ಖಾನೆಗಳಿಗೆ ಅಂತರ ರಾಜ್ಯದಿಂದ ರೋಗ ಅಂಟಿರುವ ಎತ್ತುಗಳು ಬಂದಿರುವದನ್ನು ಯಾಕೆ ಬಂದು ಮಾಡುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಪಶು ಸಚಿವರೆ ಮತ್ತು ಅಧಿಕಾರಿಗಳೇ ಏನು ಮಾಡುತ್ತೀದ್ದೀರಿ, ರೈತರಿಗೆ ಆಗುವ ಅನ್ಯಾಯದ ಬಗ್ಗೆ ಯಾಕೆ ಪರಿಹರಿಸುತ್ತಿಲ್ಲ ಎಂಬುದು ರೈತರ ಪ್ರಶ್ನೆಯಾಗಿದೆ. ಹಾಗೂ ಇದನ್ನೂ ಕೂಡಲೇ ಸರಿ ಪಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ಪಂಚಾಯಿತಿ ಪಿಡಿಓ ಅಧಿಕಾರಿ ಹಾಗೂ ಅಂಕಲಿ ಪಶು ವೈದ್ಯರ ಮುಖಾಂತರ ಮೇಲಾಧಿಕಾರಿಗಳಿಗೆ ನೀಡಿದ್ದಾರೆ.

ಈ ಕುರಿತು ಅಂಕಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಾತನಾಡಿ, ತಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿಕೊಲಾಗುವುದು ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ