Breaking News

ವಿಧಾನ ಪರಿಷತ್​ ಸದಸ್ಯಗೆ ಫುಲ್​ ಕ್ಲಾಸ್​ ತಗೊಂಡ ಸಾರ್ವಜನಿಕರು;

Spread the love

ಕೋಲಾರ: ಆತ‌ ವಿಧಾನಪರಿಷತ್​ ಸದಸ್ಯ. ಗೊತ್ತಿದ್ದೋ ಗೊತ್ತಲ್ಲದೆಯೊ ತಪ್ಪು ನಡೆದು ಹೋಗಿದೆ. ಆಗಿರುವ ತಪ್ಪುನ್ನು ಸಮಾಧಾನವಾಗಿ ಬಗ್ಗೆ ಹರಿಸಿಕೊಳ್ಳದೆ ದರ್ಪ ತೋರಿದ ಎಂಎಲ್​ಸಿಗೆ ಸಾರ್ವಜನಿಕರು ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಕ್ಲಾಸ್​ಗೆ ದಂಗಾದ ಎಂಎಲ್​ಸಿ ಕೆಲಕಾಲ ತಬ್ಬಿಬ್ಬರಾಗಿದ್ದಾರೆ.

 

ಹೌದು, ಕೋಲಾರದ ಲಕ್ಷ್ಮಿ ಸಾಗರ ಗೇಟ್ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೋಲಾರಕ್ಕೆ ಆಗಮಿಸುತ್ತಿದ್ದ ಎಂ.ಎಲ್.ಸಿ ರವಿ ಕುಮಾರ್ ಇದ್ದ ಕಾರು ಹಿಂಬದಿಯಿಂದ ಬೈಕ್​ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದಾನೆ.

ಹೊಸಕೋಟೆ ತಾಲೂಕಿನ‌ ಬೈಕ್​ ಸವಾರ ಗೋಪಾಲ ಗಾಯಗೊಂಡು ನರಳಾಡುತ್ತಿದ್ದರೂ ಕಾರಿನಿಂದ ಕೆಳಗಿಳಿಯದೆ ದರ್ಪ ತೋರಿಸಿದ ಎಂಎಲ್.ಸಿ ರವಿ ಕುಮಾರ್​ಗೆ ಸ್ಥಳೀಯರು ಫುಲ್‌ ಕ್ಲಾಸ್ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನೀನ್ಯಾವ ಸೀಮೆ ಎಂ.ಎಲ್.ಸಿ? ನಿನಗೆ ಮಾನ ಮರ್ಯಾದೆ ಇದೆಯಾ?’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಿನಿಂದ‌ ಕೆಳಗೆ‌ ಇಳಿಯದೆ ದರ್ಪ‌ ತೊರಿದ ವಿಧಾನ ಪರಿಷತ್ ಸದಸ್ಯರ ಮೇಲೆ ಸಾರ್ವಜನಿಕರು‌ ಆಕ್ರೋಶ ವ್ಯಕ್ತಪಡಿಸಿದಲ್ಲದೆ ಕಾರಿ‌ನ ಮುಂದೆ ಕುಳಿತು ಪ್ರತಿಭಟನೆಗೆ ಮುಂದಾದರು.ಈ ಸಂದರ್ಭದಲ್ಲಿ‌ ಕಾರಿನಿಂದ ಹೊರಬಂದ‌ ಎಂ.ಎಲ್​.ಸಿ ರವಿಕುಮಾರ್ ಅಲ್ಲಿದ್ದ ಸಾರ್ವಜನಿಕರ‌ ಜೊತೆ ವಾಗ್ವಾದಕ್ಕೆ ಇಳಿದರು. ಒಬ್ಬ ಜನಪ್ರತಿನಿಧಿಯಾಗಿ ಗಾಯಗೊಂಡ ವ್ಯಕ್ತಿಯ ಆರೋಗ್ಯ ವಿಚಾರಿಸದೆ ದರ್ಪ ತೋರುತ್ತಿದ್ದೀಯಾ ಯಾವ ಮಿನಿಸ್ಟರ್ ಕರೆಸುವೆ ಕರೆಸು ಎಂದು ಎಂಎಲ್‌ಸಿ ಗೆ ಸಾರ್ವಜನಿಕರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.


Spread the love

About Laxminews 24x7

Check Also

ಅತಿವೃಷ್ಟಿ-ಬರ ವೀಕ್ಷಣೆಗೆ ಸಚಿವರಿಗೆ ಫೀಲ್ಡ್ ಟಾಸ್ಕ್: ಬೆಳಗಾವಿ ಹೊಣೆ ವಹಿಸಿಕೊಂಡ ಸತೀಶ್ ಜಾರಕಿಹೊಳಿ!

Spread the love ಅತಿವೃಷ್ಟಿ-ಬರ ವೀಕ್ಷಣೆಗೆ ಸಚಿವರಿಗೆ ಫೀಲ್ಡ್ ಟಾಸ್ಕ್: ಬೆಳಗಾವಿ ಹೊಣೆ ವಹಿಸಿಕೊಂಡ ಸತೀಶ್ ಜಾರಕಿಹೊಳಿ! ರಾಜ್ಯದಲ್ಲಿ ಉಂಟಾಗಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ