Breaking News

ಹೆಂಡತಿ ಹೊಟ್ಟೆಗೆ ಚೂರಿ ಹಾಕಿದ ಗಂಡ: ಭಯಗೊಂಡು ಆತ್ಮಹತ್ಯೆಗೆ ಶರಣು

Spread the love

ಚಿಕ್ಕೋಡಿ (ಬೆಳಗಾವಿ): ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಂಡ – ಹೆಂಡತಿ ಜಗಳ ವಿಕೋಪಕ್ಕೆ ತಿರುಗಿದ್ದು, ಹೆಂಡತಿ ಹೊಟ್ಟೆಗೆ ಗಂಡ ಚೂರಿ ಹಾಕಿದ್ದಾನೆ. ಬಳಿಕ ಇದರಿಂದ ಭಯಗೊಂಡ ಆತ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಪ್ಪಲಗುದ್ದಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ‌ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ನಿವಾಸಿ ಪ್ರಭು ರಾಮಪ್ಪ ಮೇತ್ರಿ (48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ಪ್ರಭು ರಾಮಪ್ಪ ಮತ್ತು ಆತನ ಹೆಂಡತಿ ಪಾರ್ವತಿ ಮಧ್ಯೆ ಆಗಾಗ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು. ಸೋಮವಾರ ನಡೆದ ಜಗಳವು ವಿಕೋಪಕ್ಕೆ ಹೋದ ಕಾರಣ ಪತ್ನಿ ಪಾರ್ವತಿ ಮೇತ್ರಿ ಹೊಟ್ಟೆಗೆ ಗಂಡ ಪ್ರಭು ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ.

ಇತ್ತ ರಕ್ತದ ಮಡುವಿನಲ್ಲಿ ಬಿದ್ದ ಪಾರ್ವತಿಯನ್ನು ಹತ್ತಿರದ ಸಂಬಂಧಿಕರು ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆಯಿಂದ ಭಯಗೊಂಡ ಪ್ರಭು ಮಧ್ಯರಾತ್ರಿ ಕಪ್ಪಲಗುದ್ದಿ ಗ್ರಾಮದ ಹತ್ತಿರ ಗುರು ಮರಡಿ ಅವರ ತೋಟದ ಬೇವಿನ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಹಾರೂಗೇರಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ