Breaking News

ಕಾಂಗ್ರೆಸ್ ‘ಪೇ ಸಿಎಂ’ ಬಾಣಕ್ಕೆ ಬಿಜೆಪಿಯಿಂದ ‘ಸ್ಕ್ಯಾಮ್‌ ರಾಮಯ್ಯ’ ಪ್ರತಿಬಾಣ

Spread the love

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿದ್ದ ಕಾಂಗ್ರೆಸ್ ಈಗ ” ಪೇಸಿಎಂ” ಎಂಬ ವಿಶಿಷ್ಟ ಅಭಿಯಾನ ಆರಂಭಿಸಿದ್ದು, ಬಿಜೆಪಿ ‘ಸ್ಕ್ಯಾಮ್‌ ರಾಮಯ್ಯ’ ಎಂದು ತಿರುಗೇಟು ನೀಡುತ್ತಿದೆ.

ಬೆಂಗಳೂರಿನ ಆಯಕಟ್ಟಿ‌ನ ಸ್ಥಳಗಳಲ್ಲಿ “ಪೇಸಿಎಂ” ಪೋಸ್ಟರ್ ಅಂಟಿಸಿ, ಸಾಮಾಜಿಕ ಜಾಲತಾಣದಲ್ಲೂ ” ಪೇಸಿಎಂ” ಅಭಿಯಾನ ತೀವ್ರಗೊಳಿಸಿತ್ತು.

ಪ್ರತಿಯಾಗಿ ಬಿಜೆಪಿ ಹೋರಾಟಕ್ಕಿಳಿದು ಸಿದ್ದರಾಮಯ್ಯ ವಿರುದ್ಧ ಸಮರ ಸಾರಿದೆ.

 

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ‘ಸ್ಕ್ಯಾಮ್‌ ರಾಮಯ್ಯ’ ಎಂಬ ವ್ಯಂಗ್ಯವಾದ ಚಿತ್ರಗಳುಳ್ಳ, ಹಲವು ಆರೋಪಗಳುಳ್ಳ ಪುಸ್ತಕವನ್ನು ಬಿಡುಗಡೆ ಮಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ . ರವಿ ಕುಮಾರ್, ಸಿದ್ದರಾಜು, , ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ಮುಖ್ಯ ವಕ್ತಾರ ಎಂ. ಜಿ. ಮಹೇಶ್ ಉಪಸ್ಥಿತರಿದ್ದರು.

‘ಸ್ಕ್ಯಾಮ್‌ ರಾಮಯ್ಯನ ಹಗರಣಗಳ ಪುರಾಣದ ಕುರಿತಾದ ʼಸ್ಕ್ಯಾಮ್‌ ರಾಮಯ್ಯʼ ಪುಸ್ತಕವನ್ನು ಬಿಡುಗಡೆ ಮಾಡಿರುವುದಾಗಿ ನಳಿನ್ ಕುಮಾರ್ ಕಟೀಲ್ ಹೇಳಿದರು.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ