Breaking News

ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ: ಶಿವನಗೌಡ ಪಾಟೀಲ

Spread the love

ಬೆಳಗಾವಿ: ಕೃಷಿ ಕಾರ್ಮಿಕರ ಮಕ್ಕಳಿಗೆ ಇದು ಸಂತಸದ ಸುದ್ದಿ. ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ‘ಮುಖ್ಯಮಂತ್ರಿ ರೈತ ವಿದ್ಯಾವಿಧಿ’ ಯೋಜನೆ ವಿಸ್ತರಿಸಲಾಗಿದೆ. ‍ಹಿಂದೆ ತಂದೆ- ತಾಯಿ ಅಥವಾ ಅಜ್ಜ- ಅಜ್ಜಿ ಹೆಸರಿನಲ್ಲಿ ಹೊಲ ಇದ್ದವರು ಮಾತ್ರ ಅರ್ಹರಾಗಿದ್ದರು.

ಪ್ರಸಕ್ತ (2022-23) ವರ್ಷದಿಂದ ಕೃಷಿ ಕಾರ್ಮಿಕರ ಮಕ್ಕಳೂ ಈ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

ರಾಜು ಕಡಕೋಳ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಅವರು, ಹೆಣ್ಣುಮಕ್ಕಳಿಗೆ 8ನೇ ತರಗತಿಯಿಂದಲೇ ‍ಪ್ರತಿ ವರ್ಷ ₹ 2,000 ನಿಧಿ ನೀಡಲಾಗುತ್ತದೆ. ಗಂಡುಮಕ್ಕಳಿಗೆ ಈ ಹಿಂದಿನಂತೆ ಪಿಯು ಮುಗಿದ ಬಳಿಕ ಸಿಗಲಿದೆ. ಶೀಘ್ರದಲ್ಲೇ ಇದರ ಅರ್ಜಿ ಕೂಡ ಕರೆಯಲಾಗುವುದು ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ