Breaking News

ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಮೇಲೆ ಐ.ಟಿ.ದಾಳಿ

Spread the love

ಹೊಸದಿಲ್ಲಿ: ದೇಣಿಗೆ ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನೋಂದಾಯಿತ ಮತ್ತು ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಮೇಲೆ ಆದಾಯ ತೆರಿಗೆ ಇಲಾಖೆ ಬುಧವಾರ ದಾಳಿ ನಡೆಸಿದೆ.

ದಿಲ್ಲಿ, ಗುಜರಾತ್‌, ಉ.ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ‌, ಹರಿಯಾಣ ಸೇರಿ ಹಲವು ರಾಜ್ಯಗಳ ಕನಿಷ್ಠ 110 ಸ್ಥಳಗಳಲ್ಲಿ ಏಕಕಾಲ ದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡರು.

 

ಆರ್‌ಯುಪಿಪಿಯಲ್ಲಿರುವ ಕನಿಷ್ಠ 198 ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕುವ ಬಗ್ಗೆ ಇತ್ತೀಚಿಗೆ ಭಾರತೀಯ ಚುನಾವಣ ಆಯೋಗ ಹೇಳಿಕೆ ನೀಡಿತ್ತು. ಜತೆಗೆ ಇದೇ ಮಾದರಿಯ 2,100ಕ್ಕೂ ಹೆಚ್ಚು ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮೇ 25ರಂದು ಘೋಷಿಸಿತ್ತು.

ಹೊಸದಿಲ್ಲಿಯಲ್ಲಿರುವ ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್‌ ಮೇಲೆ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕಾನೂನುಬಾಹಿರ ಮೂಲಗಳ ಮೂಲಕ ಪಕ್ಷದ ದೇಣಿಗೆ ಸಂಗ್ರಹಿಸಿರುವ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ