Breaking News

ಕಳ್ಳತನ ಯತ್ನ ವಿಫಲ.. ಸಿಟ್ಟಿಗೆದ್ದ ಖದೀಮ ಅಂಗಡಿಯಲ್ಲಿ ಮಾಡಿದ್ದೇನು ಗೊತ್ತಾ?

Spread the love

ಬೆಂಗಳೂರು: ದಿನವಿಡೀ ಕಾದು ಯತ್ನಿಸಿದರೂ‌ ಕನ್ನ ಹಾಕುವ ಪ್ಲಾನ್ ವಿಫಲವಾಗಿದ್ದಕ್ಕೆ ಸಿಟ್ಟಿಗೆದ್ದ ಕಳ್ಳನೊಬ್ಬ ಸಿಕ್ಕ ಸಿಕ್ಕ ವಸ್ತುಗಳನ್ನು ಕಿತ್ತೆಸೆದು ಪರಾರಿಯಾಗಿದ್ದಾನೆ. ಸೂಪರ್ ಮಾರ್ಕೆಟ್​ನಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಖದೀಮನು ತನ್ನ ಪ್ರಯತ್ನ ಕೈಗೂಡದೆ ಪರಾರಿಯಾಗಿರುವ ಘಟನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 27ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಂಜೆಯಿಂದಲೇ ಹೊಂಚು ಹಾಕಿ ರಾತ್ರಿ ಸೂಪರ್ ಮಾರ್ಕೆಟ್​ ಒಂದಕ್ಕೆ ನುಗ್ಗಿದ್ದ ಖದೀಮ ಆ್ಯಕ್ಸೆಲ್ ಬ್ಲೇಡ್ ಬಳಸಿ ಕ್ಯಾಶ್ ಬಾಕ್ಸ್ ಕತ್ತರಿಸಿದ್ದಾನೆ. ಆದರೆ ಹಣ ಸಿಗದಿದ್ದಾಗ ಕೋಪದಿಂದ ಸೂಪರ್ ಮಾರ್ಕೆಟ್​ನಲ್ಲಿದ್ದ ಹಲವು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿ ಪರಾರಿ ಆಗಿದ್ದಾನೆ.


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ