Breaking News

ಬಾವಿಗೆ ಬೇಕಾದ್ರೂ ಬೀಳುವೆ; ಕಾಂಗ್ರೆಸ್‌ ಸೇರಲ್ಲ: ನಿತಿನ್‌ ಗಡ್ಕರಿ

Spread the love

ವದೆಹಲಿ: ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ, ಅಂದು ಕಾಂಗ್ರೆಸ್‌ನಲ್ಲಿ ಸಚಿವರಾಗಿದ್ದ ಶ್ರೀಕಾಂತ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದ್ದರು. ಆದರೆ ನಾನು, “ಬೇಕಾದರೆ ಬಾವಿಗೆ ಬೀಳುತ್ತೇನೆ. ನಿಮ್ಮ ಪಕ್ಷ ಸೇರುವುದಿಲ್ಲ, ನನಗೆ ನಿಮ್ಮ ಪಕ್ಷದ ಸಿದ್ಧಾಂತ ಇಷ್ಟವಿಲ್ಲ’ ಎಂದಿದ್ದೆ ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

 

ನಾಗ್ಪುರದಲ್ಲಿ ನಡೆದ ಉದ್ಯಮಿಗಳ ಸಭೆಯಲ್ಲಿ ಅವರು ಹಳೆಯ ದಿನಗಳ ಈ ನೆನಪನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ, ಅಗತ್ಯವಿದ್ದಾಗ ಒಬ್ಬರನ್ನು ಉಪಯೋಗಿಸಿಕೊಂಡು, ನಂತರ ಅವರನ್ನು ಹೊರಗೆಸೆಯುವುದು ತಪ್ಪು. ಒಬ್ಬನ ಕೈಯನ್ನು ನೀವು ಹಿಡಿದುಕೊಂಡಿದ್ದೀರೆಂದರೆ ಆತ ನಿಮ್ಮ ಸ್ನೇಹಿತ ಎಂದರ್ಥ. ಅವನ ಕೈಬಿಡಲೇಬಾರದು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹಾರಾಟ ಕಡಿಮೆ: ರಾಜ್ಯಸಭೆಯಲ್ಲಿ ಸಂಸದ ಈರಣ್ಣ ಕಡಾಡಿ ಆಕ್ರೋಶ

Spread the loveನವದೆಹಲಿ: ಕರ್ನಾಟಕದ ಎರಡನೇ ರಾಜಧಾನಿ ಎಂದೇ ಖ್ಯಾತವಾದ ಬೆಳಗಾವಿ  ನಗರವು ಶಿಕ್ಷಣ, ಉದ್ಯಮ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ