Breaking News

ಮುಂಬೈನ ಈ ಶ್ರೀಮಂತ ಗಣೇಶನಿಗೆ 316 ಕೋಟಿ ರೂ. ವಿಮೆ!

Spread the love

ಣೇಶೋತ್ಸವಕ್ಕೆ ಇಡೀ ದೇಶದಲ್ಲೇ ಮುಂಬೈ ಹೆಚ್ಚು ಖ್ಯಾತಿ ಪಡೆದಿದೆ. ಇಲ್ಲಿನ ಗಣೇಶ ಶ್ರೀಮಂತ ಕೂಡ. ಅಂತಹ ಶ್ರೀಮಂತ ಗಣೇಶನಿಗೆ ಈ ಬಾರಿ 316.40 ಕೋಟಿ ರೂ. ವಿಮೆ ಮಾಡಿಸಲಾಗಿದೆ.

ಮುಂಬೈನ ಗಣೇಶ ಮಂಡಲ್‌ ನ ಗಣೇಶನಿಗೆ ಈ ಬಾರಿ ಗಣೇಶ ಚತುರ್ಥಿ ವೇಳೆ 316.40 ಕೋಟಿ ರೂ.

ವಿಮೆ ಮಾಡಿಸಲಾಗಿದೆ. ಇದರಲ್ಲಿ 31.97 ಕೋಟಿ ರೂ. ಚಿನ್ನ, ಬೆಳ್ಳಿ ಹಾಗೂ ಇನ್ನಿತರ ವಸ್ತುಗಳು ಸೇರಿದ್ದರೆ, 263 ಕೋಟಿ ರೂ. ವೈಯಕ್ತಿಕ ವಿಮೆ ಮಾಡಿಸಲಾಗಿದೆ.

ಮುಂಬೈನ ಗಣೇಶ ಮಂಡಲ್‌ ನಲ್ಲಿ ಬುಧವಾರದಿಂದ 10 ದಿನಗಳ ಕಾಲ ಗಣೇಶೋತ್ಸವ ನಡೆಯಲಿದ್ದು, ಗಣೇಶೋತ್ಸವದ ವೇಳೆ ಸಾರ್ವಜನಿಕ ಸೊತ್ತು ಹಾಗೂ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಸಾರ್ವಜನಿಕರಿಗೂ ವಿಮೆ ಅನ್ವಯವಾಗಲಿದೆ.

ಗಣೇಶೋತ್ಸಕ್ಕೆ ಹಾಕಿದ ಪೆಂಡಾಲ್‌, ಆಡುಗೆ ಮಾಡುವವರು, ಪೂಜಾರಿಗಳು, ಸ್ವಯಂಸೇವಕರು, ಚಪ್ಪಲಿ ನೋಡಿಕೊಳ್ಳುವವರು, ಭದ್ರತಾ ಸಿಬ್ಬಂದಿ, ವಾಹನ ಪಾರ್ಕಿಂಗ್‌ ನೋಡಿಕೊಳ್ಳುವವರು ಸೇರಿದಂತೆ ಎಲ್ಲರಿಗೂ ವಿಮೆ ಅನ್ವಯವಾಗಲಿದೆ.

ಕಿಂಗ್‌ ಸೈಜ್‌ ಸರ್ಕಲ್‌ ನಲ್ಲಿ ನಡೆಯಲಿರುವ ಅದ್ಧೂರಿ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇದಕ್ಕಾಗಿ ಭಾರೀ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಿಎಸ್‌ ಬಿ ಗಣೇಶ ಮಂಡಲ್‌ ಮುಖ್ಯಸ್ಥ ವಿಜಯ್‌ ಕಾಮತ್‌ ತಿಳಿಸಿದ್ದಾರೆ.

ನಾವು ಅತ್ಯಂತ ಶಿಸ್ತುಬದ್ಧವಾಗಿ ಗಣೇಶೋತ್ಸವ ಆಚರಿಸುತ್ತಾ ಬಂದಿದ್ದೇವೆ. ಈ ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಕಾಮತ್‌ ಹೇಳಿದರು.


Spread the love

About Laxminews 24x7

Check Also

ಹಸಿದ ಹೊಟ್ಟೆಗೆ ಆಸರೆ: ಮುನವಳ್ಳಿಯಲ್ಲಿ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ!

Spread the love​”ಬಡವರ ಮತ್ತು ಶ್ರಮಿಕ ವರ್ಗದ ಜನರ ಹಸಿವು ನೀಗಿಸುವ ಉದ್ದೇಶದಿಂದ, ಇಂದು ಮುನವಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ