Breaking News

ಧಾರವಾಡ ಯುವತಿಯ ಹೃದಯ ಬೆಳಗಾವಿ ಯುವಕನಿಗೆ ಕಸಿ

Spread the love

ಬೆಳಗಾವಿ: ಮಿದುಳು ನಿಷ್ಕ್ರಿಯವಾದ ಯುವತಿಯೊಬ್ಬರ ಹೃದಯವನ್ನು ಧಾರವಾಡದಿಂದ ಬೆಳಗಾವಿಗೆ ಝೀರೊ ಟ್ರಾಫಿಕ್ ನಲ್ಲಿ ಸಾಗಿಸಲು ಕ್ಷಿಪ್ರ ಸಿದ್ಧತೆ ನಡೆಸಲಾಗಿದೆ.

ಅಪಘಾತದಿಂದ ಗಾಯಗೊಂಡ ಯುವತಿಯೊಬ್ಬರು ಧಾರವಾಡ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಅವರ ಮಿದುಳು ನಿಷ್ಕ್ರಿಯವಾಗಿದ್ದು, ಹೃದಯ ಬಡಿದುಕೊಳ್ಳುತ್ತಿದೆ.

ಇದೇ ಕಾಲಕ್ಕೆ ಹೃದ್ರೋಗದಿಂದ ಬಳಲುತ್ತಿರುವ ಯುವಕ ಬೆಳಗಾವಿಯ ಕೆಎಲ್‌ಇಎಸ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಯುವಕನಿಗೆ ಹೃದಯ ಕಸಿ ಮಾಡಬೇಕಾಗಿದೆ. ಹೀಗಾಗಿ, ಧಾರವಾಡದ ಯುವತಿಯ ಹೃದಯವನ್ನೇ ಬೆಳಗಾವಿಯ ಯುವಕನಿಗೆ ಕಸಿ ಮಾಡಲು ಯುವತಿ ಪಾಲಕರು ಸಮ್ಮತಿಸಿದ್ದಾರೆ.

ಹೀಗಾಗಿ ಧಾರವಾಡ- ಬೆಳಗಾವಿ ಮಧ್ಯೆ ಝೀರೊ ಟ್ರಾಫಿಕ್ ಮೂಲಕ ಹೃದಯವನ್ನು ತರಲು ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ