Breaking News

ಕಸ ತೆಗೆಯುವ ವೇಳೆ ಟ್ರಾಕ್ಟರ್ ಗೆ ಸಿಲುಕಿ ರೈತನ ಸಾವು

Spread the love

ತನ್ನ ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ ಕುಂಟೆ ಹೊಡೆಸಿ ಹೊಲವನ್ನು ಬಿತ್ತುಣಿಕೆಗೆ ಹದಗೊಳಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಇಂಜೀನ ಹಿಂಬದಿ ಅಳವಡಿಸಿದ್ದ ಕಬ್ಬಿಣದ ಕುಂಟೆ ಬಡಿದು ರೈತ ಮಲ್ಲಣ್ಣ ಎರೆಡ್ಡಿ (48) ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಗುರುವಾರ ಮದ್ಯಾಹ್ನ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿ ಗ್ರಾಮದಲ್ಲಿ ನಡೆದಿದೆ. ಮೃತ ರೈತನಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.

ಟ್ರ್ಯಾಕ್ಟರ್ ಕಸ ತೆಗೆಯುವ ವೇಳೆ ಮಲ್ಲಣ್ಣ ಹೊಲದ ಒಡ್ಡಿನ ಬಳಿ ನಿಂತಿದ್ದ. ಚಾಲಕ ಟ್ರ್ಯಾಕ್ಟರನ್ನು ತಿರುಗಿಸಿದಾಗ ಹಿಂದೆ ಇದ್ದ ಕಬ್ಬಿಣದ ಕುಂಟೆ ನೇಗಿಲು ಬಡಿದು ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಇಂಗಳಗೇರಿ ಗ್ರಾಮವು ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯಲ್ಲಿದ್ದರೂ ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿ ಹೊಂದಿರುವುದರಿಂದ ಮೃತನ ಪುತ್ರ ಅಲ್ಲಿಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ