Breaking News

ರಾಜ್ಯದಲ್ಲಿ ‘ಜೆಡಿಎಸ್ ಪಕ್ಷ’ ಅಧಿಕಾರಕ್ಕೆ ಬಂದ್ರೇ.. ‘LKGಯಿಂದ ಪಿಯುಸಿ’ವರೆಗೆ ‘ಉಚಿತ ಶಿಕ್ಷಣ’ – ಮಾಜಿ ಸಿಎಂ ಕುಮಾರಸ್ವಾಮಿ

Spread the love

ತುಮಕೂರು: ಮುಂಬರುವಂತ 2023ರ ವಿಧಾನಸಭಾ ಚುನಾವಣೆಯಲ್ಲಿ ( Assembly Election ) ಜೆಡಿಎಸ್ ಪಕ್ಷ ( JDS Party )ಬಹುಮತದಿಂದ ಗೆದ್ದು ಅಧಿಕಾರಕ್ಕೆ ಬಂದ್ರೇ.. ಎಲ್ ಕೆ ಜಿಯಿಂದ ದ್ವಿತೀಯ ಪಿಯುಸಿವರೆಗೆ ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಹೈಟೆಕ್ ಶಾಲೆಗಳನ್ನು ತೆರೆದು, ಉಚಿತ ಶಿಕ್ಷಣ ( Free Education ) ನೀಡುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ತುಮಕೂರಿನ ಶಿರಾದಲ್ಲಿ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದಂತ ಅವರು, ನಾನು ಮತ್ತೆ ಸಿಎಂ ಆಗಬೇಕು ಎನ್ನುವ ಉದ್ದೇಶದಿಂದ ಈ ಜನತಾ ಜಲಧಾರೆ ಯಾತ್ರೆ ಮಾಡುತ್ತಿಲ್ಲ. ಈಗಾಗಲೇ ಬಹುಮತ ಬಾರದೇ ಇದ್ದರೂ ಎರಡು ಬಾರಿ ಸಿಎಂ ಆಗಿದ್ದೇನೆ. ರಾಜ್ಯದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡೋ ಉದ್ದೇಶದಿಂದ ಈ ಜನತಾ ಜಲಧಾರೆ ಯಾತ್ರೆ ಮಾಡುತ್ತಿರೋದಾಗಿ ತಿಳಿಸಿದರು.

75 ವರ್ಷ ನಮ್ಮನ್ನು ಆಳಿದಂತ ರಾಷ್ಟ್ರೀಯ ಪಕ್ಷಗಳು ರಾಜ್ಯದ ನದಿ ನೀರು ಬಳಕೆ ಯೋಜನೆ ತರೋದಕ್ಕೆ ಸಂಪೂರ್ಣ ವಿಫಲವಾಗಿವೆ. ಆದ್ರೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ರಾಜ್ಯದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡೋ ಉದ್ದೇಶದಿಂದ, ಪಣ ತೊಟ್ಟು, ಈ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ