Breaking News

ಮೇ.2ರಂದು ‘ರಂಜಾನ್ ಆಚರಣೆ’ಗೆ ನಿರ್ಧಾರ: ರಾಜ್ಯ ಸರ್ಕಾರದಿಂದ ‘ಸಾರ್ವತ್ರಿಕ ರಜೆ’ ಘೋಷಣೆ

Spread the love

ಬೆಂಗಳೂರು: ರಾಜ್ಯ ಸರ್ಕಾರದಿಂದ ರಂಜಾನ್ ರಜೆಯನ್ನು ದಿನಾಂಕ 03-05-2022ರಂದು ನಿಗದಿ ಪಡಿಸಿ ಘೋಷಣೆ ಮಾಡಿತ್ತು. ಆದ್ರೇ.. ಮೂನ್ ಕಮಿಟಿ ತೀರ್ಮಾನದಿಂದಾಗಿ ಇದೀಗ ದಿನಾಂಕ 02-05-2022ರಂದು ಬದಲಾವಣೆ ಮಾಡಿ ಮರು ನಿಗದಿಪಡಿಸಿ, ಸಾರ್ವತ್ರಿಕ ರಜೆಯಾಗಿ ಘೋಷಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಶಿಷ್ಟಾಚಾರದ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ದಿನಾಂಕ 03-05-2022ರಂದು ಖುತುಬ್ ಎ ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿತ್ತು.

ಆದ್ರೇ.. ಖುತುಬ್ ಎ ರಂಜಾನ್ ಹಬ್ಬವನ್ನು ದಿನಾಂಕ 02-05-2022ರಂದು ಆಚರಿಸಲು ಮೂನ್ ಕಮಿಟಿಯು ತೀರ್ಮಾನಿಸಿರುವುದರಿಂದ, ದಿನಾಂಕ 02-05-2022ರಂದು ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದ್ದಾರೆ.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ