Breaking News

ತರಕಾರಿ ತೆಗೆದುಕೊಳ್ಳಲು ಎಂದು ಬರುತ್ತಿದ್ದಾತ ಅಂಗಡಿಯಾಕೆಗೇ ನಾನ್​ವೆಜ್ ಮೆಸೇಜ್ ಕಳಿಸಿದ ಆರೋಪಿ.

Spread the love

ಬೆಂಗಳೂರು: ತರಕಾರಿ ತೆಗೆದುಕೊಳ್ಳಲು ಎಂದು ಬರುತ್ತಿದ್ದಾತ ಅಂಗಡಿಯಾಕೆಗೇ ನಾನ್​ವೆಜ್ ಮೆಸೇಜ್ ಕಳಿಸಿದ್ದರ ಪರಿಣಾಮವಾಗಿ ಈಗ ಪೊಲೀಸರಿಂದ ಬಂಧಿತನಾಗಿದ್ದಾನೆ. ಮಾರುತಿ ಎಂಬಾತ ಬಂಧಿತ ಆರೋಪಿ.

ಈತ ಮಂಜುನಾಥನಗರದಲ್ಲಿರುವ ಮಹಿಳೆಯೊಬ್ಬರ ದಿನಸಿ ಹಾಗೂ ತರಕಾರಿ ಅಂಗಡಿಗೆ ಆಗಾಗ ಖರೀದಿಗೆ ಬರುತ್ತಿದ್ದ.

ಈ ಸಂದರ್ಭದಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡು, ಮೊಬೈಲ್​ಫೋನ್​ ನಂಬರ್ ಪಡೆದುಕೊಂಡಿದ್ದ.

ಮಾತ್ರವಲ್ಲ, ಬಳಿಕ ಸಲುಗೆ ಬೆಳೆಸಿಕೊಂಡಿದ್ದ ಈತ ಆಕೆಗೆ ಅಶ್ಲೀಲ ಚಿತ್ರ ಹಾಗೂ ಆಕ್ಷೇಪಾರ್ಹ ಮೆಸೇಜ್​ಗಳನ್ನು ಕಳುಹಿಸಿ ತೊಂದರೆ ಕೊಡುತ್ತಿದ್ದ. ಈ ಸಂಬಂಧವಾಗಿ ಮಹಿಳೆ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದು, ಅವರು ಆರೋಪಿ ಮಾರುತಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ