Breaking News

ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಲಾರಿಗಳನ್ನ ವಶಕ್ಕೆ ಪಡೆದ ಪೊಲೀಸರು..

Spread the love

ಅಕ್ರಮವಾಗಿ ಅಕ್ಕಿ ಚೀಲಗಳನ್ನು ಹೊತ್ತು ಗುರುಮಠಕಲ್ ಕಡೆಯಿಂದ ಗುಜರಾತಿನ ಅಹಮದಾಬಾದ್ ಕಡೆಗೆ ಲಾರಿಗಳು ತೆರಳುತ್ತಿದ್ದವು. ಈ ಕುರಿತಂತೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮೂರು ಲಾರಿಗಳಿಂದ ಒಟ್ಟು 21.62 ಲಕ್ಷ ರೂ. ಮೌಲ್ಯದ ( 50 ಕೆಜಿ ತೂಕದ) 1,962 ಅಕ್ಕಿ ಚೀಲಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಭೀಮರಾಯನಗುಡಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಅಧಿಕಾರಿಗಳ ಕಾರ್ಯಕ್ಕೆ ಎಸ್ಪಿ ಡಾ. ಸಿಬಿ ವೇದಮೂರ್ತಿ, ಸುರಪುರ್ ವಿಭಾಗದ ಡಿವೈಎಸ್ಪಿ ಡಾ.ದೇವರಾಜ್ ಅಭಿನಂದಿಸಿದ್ದಾರೆ.


Spread the love

About Laxminews 24x7

Check Also

ಸಾರಿಗೆ ನೌಕರರಿಂದ ಮುಷ್ಕರದ ಘೋಷಣೆ: ಜ. 29 ರಂದು ಬೆಂಗಳೂರು ಚಲೋ

Spread the loveಬೆಂಗಳೂರು: ವೇತನ ಮತ್ತು ವೇತನ ಪರಿಷ್ಕರಣೆಗೆ ಸಂಬಂಧಿಸಿದ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ