Breaking News

ಸಾಧು ನನ್ನ ಕೈಗೆ ಸಿಕ್ಕಿದ್ದರೆ ಒಂದೆರಡು ಏಟು ಚೆನ್ನಾಗಿ ಬಿದ್ದಿರುತ್ತಿತ್ತು’: ರವಿಚಂದ್ರನ್​

Spread the love

ಮುಗಿಲ್​ಪೇಟೆ’ ಸಿನಿಮಾದಲ್ಲಿ ಮನುರಂಜನ್​ ಮತ್ತು ಸಾಧುಕೋಕಿಲ ನಡುವಿನ ದೃಶ್ಯಗಳು ರವಿಚಂದ್ರನ್​ ಅವರ ಗಮನ ಸೆಳೆದಿವೆ. ಆ ಬಗ್ಗೆ ಅವರು ಮಾತನಾಡಿದ್ದಾರೆ.ಮನುರಂಜನ್​ ರವಿಚಂದ್ರನ್​ ನಟನೆಯ ‘ಮುಗಿಲ್​ಪೇಟೆ’ ಚಿತ್ರ ಬಿಡುಗಡೆ ಆಗಿದೆ. ಪ್ರೇಕ್ಷಕರು ಈ ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ.

ಅದೇ ರೀತಿ, ‘ಕ್ರೇಜಿ ಸ್ಟಾರ್​’ ರವಿಚಂದ್ರನ್ ಅವರು ಕೂಡ ‘ಮುಗಿಲ್​ಪೇಟೆ’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮನುರಂಜನ್​ ಮತ್ತು ಸಾಧುಕೋಕಿಲ ನಡುವಿನ ದೃಶ್ಯಗಳು ರವಿಚಂದ್ರನ್​ ಅವರ ಗಮನ ಸೆಳೆದಿವೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಸಾಧುಕೋಕಿಲ ಅವರ ಪಾತ್ರ ಈ ಸಿನಿಮಾದಲ್ಲಿ ಚೆನ್ನಾಗಿ ಮೂಡಿಬಂದಿದೆ. ಸಿನಿಮಾದಲ್ಲಿ ಅವರು ನನಗೆ ಸಿಕ್ಕಿದ್ದರೆ ಅವರಿಗೆ ಒಂದೆರಡು ಏಟು ಇನ್ನೂ ಚೆನ್ನಾಗಿ ಬಿದ್ದಿರುತ್ತಿತ್ತು. ಸರಿಯಾಗಿ ಒದೆಯುತ್ತಿದ್ದೆ. ನನ್ನ ಮಗನಿಗೆ ಹೊಡೆಯೋಕೆ ಬಂದಿಲ್ಲ. ಸಾಧು ಎಷ್ಟು ಒದೆ ತಿನ್ನುತ್ತಾರೋ ಸಿನಿಮಾ ಅಷ್ಟು ಚೆನ್ನಾಗಿ ಇರುತ್ತದೆ. ಸಾಕಷ್ಟು ಗೆಟಪ್​ಗಳನ್ನು ಹಾಕಿಕೊಂಡು ಇಡೀ ಸಿನಿಮಾವನ್ನು ತಮಾಷೆಯಾಗಿ ಕಟ್ಟಿಕೊಡಲು ಅವರ ಪಾತ್ರ ಮುಖ್ಯವಾಗಿದೆ’ ಎಂದು ರವಿಚಂದ್ರನ್​ ಹೇಳಿದ್ದಾರೆ. ಈ ಚಿತ್ರದಲ್ಲಿ ಮನುರಂಜನ್​ಗೆ ಜೋಡಿಯಾಗಿ ಹೊಸ ನಟಿ ಖಯಾದು ಲೋಹರ್​ ಅಭಿನಯಿಸಿದ್ದಾರೆ.


Spread the love

About Laxminews 24x7

Check Also

ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 4000 ಜನ ಉಚ್ಚಾರಿಸಿಕೊಂಡರು.

Spread the love ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ