Breaking News

ರಾಜಕಾರಣಿಗಳಷ್ಟು ನಿರ್ಲಜ್ಜ, ನೀಚರು ಯಾರೂ ಇಲ್ಲ : ಮುತಾಲಿಕ್

Spread the love

ಶಿವಮೊಗ್ಗ: ‘ರಾಜಕಾರಣಿಗಳಷ್ಟು ನಿರ್ಲಜ್ಜ, ನೀಚರು ಯಾರೂ ಇಲ್ಲ. ರಾಜಕಾರಣಿಗಳ ಬದಲಾಗಿ ಹಿಂದೂ ಸಂಘಟನೆಗಳಿಗೆ ಬಲ ತುಂಬಿ’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬುಧವಾರ ಹೇಳಿಕೆ ನೀಡಿದ್ದಾರೆ.

ಕುವೆಂಪು ರಂಗಮಂದಿರದಲ್ಲಿ ನಡೆದ ‘ವಿಧ್ವತ್ ಭಾರತ’ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮುತಾಲಿಕ್,’ನಮಗೆ ಬಲ ತುಂಬಿ, ನಿಮ್ಮ ದೇವಸ್ಥಾನ ಉಳಿಸುತ್ತೆವೆ.ನಮಗೆ ಬಲ ತುಂಬಿದರೆ, ನಿಮ್ಮ ಅಕ್ಕ-ತಂಗಿಯರನ್ನು ಉಳಿಸುತ್ತೆವೆ. ನಮಗೆ ಬಲ ತುಂಬಿ, ನಿಮ್ಮ ಹಸುವಿನ ಒಂದೇ ಒಂದು ಹನಿ ರಕ್ತ ಕೆಳಕ್ಕೆ ಬೀಳಲು ಬಿಡುವುದಿಲ್ಲ.ರಾಜಕಾರಣಿಗಳಿಗೆ ಬಲ ತುಂಬಬೇಡಿ. ಅವರಷ್ಟು ನಿರ್ಲಜ್ಜ, ನೀಚರು ಯಾರು ಇಲ್ಲ’ ಎಂದು ಕಿಡಿ ಕಾರಿದರು.

‘ಹಿಂದುತ್ವದ ಮುಖವಾಡ ಹೊತ್ತ ರಾಜಕಾರಣಿಗಳಿಗೆ ಧಿಕ್ಕಾರವಿರಲಿ .ರಾಜಕಾರಣಿಗಳು ಯಾವುದೇ ಪಕ್ಷದವರಾಗಿರಲಿ ಅವರಿಗೆ ಧಿಕ್ಕಾರವಿರಲಿ.ನಿಮಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ? ಹಿಂದುತ್ವದ ಮುಖವಾಡ ಹಾಕಿಕೊಂಡು ದೇಶದಲ್ಲಾಗುತ್ತಿರುವ ಅನಾಹುತಗಳಿಗೆ ಏನು ಹೇಳುತ್ತೀರಿ’ ಎಂದು ಪ್ರಶ್ನಿಸಿದರು.

‘ದೇವಸ್ಥಾನ ಒಡೆಯುತ್ತೀರಿ , ಸಾರ್ವಜನಿಕ ಗಣೇಶೋತ್ಸವ ಬ್ಯಾನ್ ಮಾಡುತ್ತೀರಿ, ದುರ್ಗಾ ಮಾತೆಯ ವಿಗ್ರಹ ಇಷ್ಟೇ ಇರಬೇಕೆಂದು ಹೇಳುತ್ತೀರಿ. ಸುಪ್ರೀಂ ಕೋರ್ಟ್ ನ ಆರ್ಡರ್ ತೋರಿಸಿ, ದೇವಾಲಯ ಒಡೆಯುತ್ತಿರಿ , ಮಸೀದಿಯ ಮೈಕ್ ಮತ್ತು ಮಸೀದಿ ತೆರವಿಗೂ ಸುಪ್ರೀಂ ಕೋರ್ಟ್ ಆರ್ಡರ್ ಇದೆ.ಅದನ್ಯಾಕೆ ತೋರಿಸುವುದಿಲ್ಲಾ’ ಎಂದು ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ವರದಕ್ಷಿಣೆಗಾಗಿ ಸಂದೇಹ, ಕಿರುಕುಳ – ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ

Spread the loveಹಾಸನ: ವರದಕ್ಷಿಣೆಗಾಗಿ ನೀಡುತ್ತಿದ್ದ ಕಿರುಕುಳ ಹಾಗೂ ಸಂದೇಹ ಸಹಿಸಲಾಗದೇ ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ