ಚಿಕ್ಕೋಡಿ: ಇಲ್ಲೊಬ್ಬ ಕಾಮುಕ ಯುವಕನೋರ್ವ ಯುವಕನನ್ನು ರೇಪ್ ಮಾಡಿರುವ ವಿಲಕ್ಷಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ.

ಬಸ್ ಗಾಗಿ ಕಾಯುತ್ತಿದ್ದ ಯುವಕನನ್ನು ಬೈಕ್ ಮೇಲೆ ಹತ್ತಿಸಿಕೊಂಡು ಕರೆದೊಯ್ದು ನಿರ್ಜನ ಪ್ರದೇಶ ನೋಡಿ ಅನೈಸರ್ಗಿಕ ಸಂಭೋಗ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಯುವಕ ಅಥಣಿ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ.
ಈ ಬಗ್ಗೆ ನೊಂದ ಯುವಕನಿಂದ ದೂರು ದಾಖಲಿಸಿಕೊಂಡ ಅಥಣಿ ಪೊಲೀಸ್ ಠಾಣೆಯ ಪೊಲೀಸರು ಅತ್ಯಾಚಾರಿ ಆರೋಪಿ ರಾಜು ನೀಲವ್ವ ಆಚಾರಟ್ಟಿ ವಿಕೃತ ಯುವಕನನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರ ವಿಚಾರನೆಯ ಬಳಿಕ ವಿಕೃತ ಕಾಮಿಯ ಇನ್ನಷ್ಟು ಬಣ್ಣ ಬಯಲಾಗಲಿದೆ
Laxmi News 24×7