Breaking News

ಮೈಸೂರು: ನಾಡಶಕ್ತಿ ದೇವತೆಗೆ ನವರಾತ್ರಿಯಲ್ಲಿ ನಿತ್ಯವೂ ಒಂದೊಂದು ಅಲಂಕಾರ

Spread the love

ಮೈಸೂರು: ನಾಡಶಕ್ತಿ ದೇವತೆ ಚಾಮುಂಡೇಶ್ವರಿ ಗೆ ನವರಾತ್ರಿ ಯಲ್ಲಿ ನಿತ್ಯ ವೂ ಒಂದೊಂದು ಅಲಂಕಾರ ಮಾಡಲಾಗುತ್ತದೆ. ನವರಾತ್ರಿ ಆರಂಭವಾದ ಇಂದು ಮುಂಜಾನೆ ಚಾಮುಂಡೇಶ್ವರಿ ಗೆ ವಿವಿಧ ಅಭಿಷೇಕ ಗಳನ್ನು ಮಾಡಿ ವಿಶೇಷ ಪೂಜೆ ಯನ್ನು ನೆರವೇರಿಸಲಾಯಿತು. ದಸರಾ ಪ್ರಾರಂಭದ ಇಂದು ಚಾಮುಂಡೇಶ್ವರಿ ಗೆ ವಿಶೇಷವಾಗಿ ಹಂಸವಾಹಿನಿ ಅಲಂಕಾರವನ್ನು ಮಾಡಲಾಗಿದೆ.

ಈ ಅಲಂಕಾರದಲ್ಲಿ ಚಾಮುಂಡೇಶ್ವರಿ ಕಂಗೊಳಿಸಿದರು. ಅ.8 ರಂದು ಬ್ರಾಹ್ಮಿ, ಅ.9ರಂದು ಮಹೇಶ್ವರಿ, ಅ.10ರಂದು ಕೌಮಾರಿ, ಅ.11 ರಂದು ಆನೆ ಮೇಲೆ ಕುಳಿತ ಇಂದ್ರಾಣಿ, ಅ.12 ರಂದು ಚಾಮುಂಡಾ ಅಲಂಕಾರ ವನ್ನು ಮಾಡಲಾಗುತ್ತದೆ. ಅಂದು ಕಾಳ ರಾತ್ರಿ ಆಗಿರುವ ಕಾರಣ ವಿಶೇಷ ವಾಗಿ ಅಲಂಕಾರ ಮಾಡಲಾಗುತ್ತದೆ. ಅ.13 ರಂದು ದುರ್ಗಾ ಅಲಂಕಾರ, ಅ.14 ದಸರಾದ ಕೊನೆ ದಿನವಾದ ಕಾರಣ ಅಶ್ವರೋಹಣದಲ್ಲಿ ಮಹಾಲಕ್ಷ್ಮಿ ಯ ಅಲಂಕಾರ ವನ್ನು ಚಾಮುಂಡೇಶ್ವರಿ ಗೆ ಮಾಡಲಾಗುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತರು ಹೊಸ ದಿಗಂತಕ್ಕೆ ತಿಳಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ